ದೇಶಕಂಡ ಅಪ್ರತಿಮ ಮುತ್ಸದ್ದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಮ್ಮನ್ನಗಲಿ ಇಂದಿಗೆ ಒಂದು ತಿಂಗಳು… ತಮ್ಮಲ್ಲಿದ್ದ ಕವಿ ಹೃದಯಕ್ಕೆ ಅಟಲ್ ಜಿ ನೀಡಿದ ಪದಗಳ ರೂಪ ಎಂದೆಂದಿಗೂ ನಮ್ಮ ಮನದಲ್ಲಿ ಮೂಡಿವೆ. ಈ ಅಜಾತಶತ್ರುವಿನ ಕವಿತೆಗಳನ್ನು ಶಿವಮೊಗ್ಗ ಪ್ರಖ್ಯಾತ ನೃತ್ಯಗುರು ಸಹನಾ ಚೇತನ್ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ. ಅಟಲ್ ಜೀ ಅವರ ನೆನಪಿಗಾಗಿ ಅವುಗಳನ್ನು ಕಲ್ಪ ನ್ಯೂಸ್ ಇಂದಿನಿಂದ ಪ್ರಕಟಿಸುತ್ತದೆ…
ಅಟಲ್ ಜೀ ಅಮರ್ ರಹೇ…
ಸಾವು ನಿಂತಲ್ಲೇ ಸ್ಥಬ್ದವಾಯಿತು..
ಸಾವು ಅಲ್ಲೇ ಸ್ಥಬ್ದವಾಯಿತು!
ನಿನ್ನೊಡನೆ ಸರಸವಾಡುವ ಬಗೆ ನನ್ನದಾಗಿರಲಿಲ್ಲ
ತಿರುವಿನಲ್ಲಿ ಸಿಕ್ಕೇ ಸಿಗುವೆನೆಂಬ ಭಾಷೆಯನ್ನೆಂದೂ ನೀಡಿರಲಿಲ್ಲ!
ನಡೆವ ಹಾದಿಯ ಎದುರೇ ಅಚಾನಕ್ಕಾಗಿ ಬಂತು ನಿಂದಳು ಆಕೆ
ಜೀವನದೊಂದಿಗೆ ಎಲ್ಲೋ ವೈರವಾಯಿತೇನೋ ಎಂದೆನಿಸಿತೆನಗೆ!
ಸಾಯಲು ವಯಸ್ಸೆಷ್ಟು ? ಹು ಅರೆ, ಘಳಿಗೆಯೂ ಸಲ್ಲ,
ಜೀವನದ ಅನುಕ್ರಮ ಇಂದು ನಿನ್ನೆಯದಲ್ಲ!
ನಾ ಜೀವಿಸಿಹೆ ಮನಸಾರೆ, ಮನಸಾರೆ ಸಾಯಲು
ಹಿಂದಿರುಗಿ ಬರುವೆನು ಈ ನಿರ್ಗಮನಕ್ಕೇಕೆ ಅಳಲು!
ನೀ ಬರಬೇಡ ಎನ್ನ ಬಳಿ ಭಾರವಾದ ಕಳ್ಳ ಹೆಜ್ಜೆಗಳಿಂದ,
ಎದುರೆದುರಿಗೇ ನನ್ನ ಬಗ್ಗುಬಡಿ ಆ ನಿನ್ನ ಸಾಹಸೀ ಶಕ್ತಿಗಳಿಂದ !
ಜೀವನದ ಪಯಣಕ್ಕೆ ಸಾವಿನ ಆಲೋಚನೆ ಎಲ್ಲಿ ?
ಸಂಜೆಗೆಂಪಿನ ರೋಚಕತೆ ನಿಶೆಯ ಕೊಳಲಿನ ನಾದದಲ್ಲಿ !
ಜೀವನದಲಿ ಬೇಸರವೇ ಇಲ್ಲೆಂಬ ಭಾವನೆಯಲ್ಲವಿದು
ದುಃಖ ಬೆಟ್ಟದಷ್ಟಿದ್ದರೂ, ಪರರ ದುಃಖಕ್ಕೆ ಮಿಡಿವ ಹೃದಯವಿದು !
ಪರರಿಂದ ಪಡೆದೆ ನಾ ಬಣ್ಣಿಸಲಸದಳ ಅಗಾಧ ಪ್ರೀತಿ,
ಇನ್ನಿಲ್ಲ ತನ್ನವರು ಮುಂದೆ ಎನ್ನುವ ಹವಣಿಕೆಯ ಭೀತಿ !
ಪ್ರತೀ ಅಗಡಿಗೂ ಉತ್ತರವಿತ್ತಿದ್ದೇನೆ ಈ ಭುಜಬಲಗಳಿಂದ,
ಆರಿಹೋಗುವ ಜ್ವಲಿತ ದೀಪವನ್ನೂ ತಡೆದಿದ್ದೇನೆ ಅಬ್ಬರಿಸುವ ಚಂಡಮಾರುತಗಳಿಂದ!
ಆದರಿಂದು ನನ್ನ ಆತ್ಮ ಬಲವನ್ನೇ ಸೆದೆಬಡಿಯುವ ಬಿರುಗಾಳಿ ಎಬ್ಬಿದೆ,
ಜೀವನದ ದೋಣಿ ಬೊಬ್ಬಿರಿವ ತರಂಗಗಳ ಅತಿಥಿಯಾಗಿದೆ !
ಆತ್ಮಬಲವೇ ಇಹುದೊಂದೆನ್ನ ಬಳಿ ಈ ಸಾಗರವ ದಾಟಲು
ಆದರೆ ನೋಡು ಮನವೇ ನೋಡು ಈ ಬಿರುಗಾಳಿಯ ಬೊಬ್ಬರು !
ರಕ್ಷಕ ಉದಾರಿ…
ಆಹಾ…. ಅಂತೂ ನೋಡಲ್ಲಿ ಬಿರುಗಾಳಿಯ ಅಹಮಿಕೆಯು ಛಿದ್ರವಾಯ್ತು
ಸಾವು ನಿಂತಲ್ಲೇ ಸ್ಥಬ್ದವಾಯಿತು!
-ಮಾನ್ಯಶ್ರೀ ಅಟಲ್ ಬಿಹಾರಿ ವಾಜಪೇಯಿ
(ಮೌತ್ ಮೆ ಠನ್ ಗಯಿ ಎಂಬ ಕವನದ ಭಾವಾನುವಾದ)
ಭಾವಾನುವಾದ – ನೃತ್ಯಗುರು ಸಹನಾ ಚೇತನ್
ठन गई!
मौत से ठन गई!
जूझने का मेरा इरादा न था,
मोड़ पर मिलेंगे इसका वादा न था,
रास्ता रोक कर वह खड़ी हो गई,
यूं लगा जिंदगी से बड़ी हो गई।
मौत की उमर क्या है? दो पल भी नहीं,
जिंदगी सिलसिला, आज कल की नहीं।
मैं जी भर जिया, मैं मन से मरूं,
लौटकर आऊंगा, कूच से क्यों डरूं?
तू दबे पांव, चोरी-छिपे से न आ,
सामने वार कर फिर मुझे आजमा।
मौत से बेखबर, जिंदगी का सफ़र,
शाम हर सुरमई, रात बंसी का स्वर।
बात ऐसी नहीं कि कोई ग़म ही नहीं,
दर्द अपने-पराए कुछ कम भी नहीं।
प्यार इतना परायों से मुझको मिला,
न अपनों से बाक़ी हैं कोई गिला।
हर चुनौती से दो हाथ मैंने किए,
आंधियों में जलाए हैं बुझते दिए।
आज झकझोरता तेज़ तूफ़ान है,
नाव भंवरों की बांहों में मेहमान है।
पार पाने का क़ायम मगर हौसला,
देख तेवर तूफ़ां का, तेवरी तन गई।
मौत से ठन गई।
Discussion about this post