ಗ್ರಿಗೋರ್ಯನ್, ಜ್ಯೂಲಿಯನ್ ಪಂಚಾಂಗದ ಪ್ರಕಾರ ಜನವರಿಯಾದಿ ಹನ್ನೆರಡು ತಿಂಗಳು ವರ್ಷವಾಗುತ್ತದೆ. ಅದರಲ್ಲಿ ಡಿಸೆಂಬರ್ 31 ವರ್ಷದ ಕೊನೆಯಾದರೆ, ಜನವರಿ 1 ಪ್ರಾರಂಭವಾಗುತ್ತದೆ. ಇವರಿಗೆ ಒಂದು ದಿನ ಎಂದರೆ 24 ಘಂಟೆಯ ಲೆಕ್ಕಾಚಾರ. ಇವರದ್ದು ಮಯನ್ ಕ್ಯಾಲೆಂಡರ್ ಆಧಾರಿತವಾಗಿದ್ದರೂ ಅಲ್ಲಿ ಆಗಿನ ಕಾಲದ ಘಟಿ- ವಿಘಟಿ ವಿಘಟಿಗಳನ್ನು ಲೆಕ್ಕ ಮಾಡದೆ Round up ಮಾಡಿದರು. ಹಾಗಾಗಿ ನಮ್ಮ ಲೆಕ್ಕಾಚಾದಲ್ಲಿ ಘಟಿಯನ್ನು ಪರಿವರ್ತಿಸಿ ಒಂದು ದಿನ ಎಂದರೆ 23 ಘಂಟೆ 56 ನಿಮಿಷ, 56 ಸೆಕುಂಡುಗಳಾದರೆ ಅವರದ್ದು Round up ಲೆಕ್ಕದಲ್ಲಿ 24 ಘಂಟೆಯ ದಿನವಾಗುತ್ತದೆ.
ಹಿಂದೂ ಪಂಚಾಗವು ಒಂದು ವರ್ಷವನ್ಬು ಸರಾಸರಿ 60 ಘಟಿಗಳಿಂದ ಭಾಗಿಸಿ ದಿನದ ಎಣಿಕೆ ಮಾಡಿದೆ. ಕೆಲ ದಿನಗಳ ಅವಧಿಯು 60 ಘಟಿ ಮೀರಲೂಬಹುದು, ಕೆಲ ದಿನಗಳು 62 ಘಟಿಗಿಂತ ಕಡಿಮೆ ಇರುವುದಕ್ಕೂ ಸಾಧ್ಯವಿದೆ. ಅಂದರೆ ಇದು ದಿನ ಮಾನ- ರಾತ್ರಿ ಮಾನಗಳ ಲೆಕ್ಕಾಚಾರದಲ್ಲಿಯೂ, ರವಿಯ ಆಯನಾಂಶ ಲೆಕ್ಕದಲ್ಲಿಯೂ ಬದಲಾಗುತ್ತದೆ. ಭೂಮಿಯು ಮೊಟ್ಟೆಯ ಆಕಾರದಲ್ಲಿ ಇರುವುದರಿಂದ ಅಥವಾ ಪೂರ್ಣ ಗೋಲಾಕಾರ ಆಗದೆ ಇರುವುದರಿಂದ, ರವಿಯ ಸಂಚಾರದಲ್ಲಿ ಅತ್ಯಂತ ಉತ್ತರ ಭಾಗದಲ್ಲಿ ಹಗಲೇ ಹೆಚ್ಚಾಗಿರುತ್ತದೆ. ಭೂಮಿಯನ್ನು ರವಿಯು ಹಾದುಹೋಗುವ ಮಾರ್ಗದ ಉದ್ದವು ಅತ್ಯಂತ ಉತ್ತರ ದಕ್ಷಿಣಕ್ಕೆ ವೆತ್ಯಾಸಗಳಿವೆ. ಇದು ರಾತ್ರಿ ಹಗಲುಗಳ ವ್ಯತ್ಯಾಸದಲ್ಲಿ ಕಾಣಬಹುದು. ಅಲ್ಲದೆ ಭೂಮಿಯು 23.5 ಡಿಗ್ರಿ ವಾಲಿರುವುದೂ ಒಂದು ಕಾರಣವಾಗುತ್ತದೆ. ರವಿಯ ಆಯನಾಂಶವು(Angle) ಪ್ರತೀ ವರ್ಷಕ್ಕೂ ವ್ಯತ್ಯಾಸವಾಗುತ್ತಿರುತ್ತದೆ.
ಕ್ರಿಸ್ತ ಶಕ ಒಂದರಲ್ಲಿ ರವಿಯ ಆಯನಾಂಶವು -3:56.20. ಈಗ ಅಂದರೆ 2018 ರ ಆದಿಯಲ್ಲಿ 23:28.27. ಅಂದರೆ ಕ್ರಿಶ 1 ರಲ್ಲಿ ದಕ್ಷಿಣಕ್ಕಿದ್ದು, ಈಗ ಉತ್ತರದೆಡೆಗೆ ಚಲಿಸುತ್ತಾನೆ. ಮುಂದೆ 3018 ರಲ್ಲಿ ಇದೇ ಆಯನಾಂಶವು, 38:6.21ದಲ್ಲಿ ಕಲಿಯುಗದ 2234904 ನೇ ದಿನವಾಗಿರುತ್ತದೆ.
ಈ 2019ರಲ್ಲಿ 180019ನೇ ದಿನವು ಜನವರಿ 1 ನೇ ತಾರೀಕು ಆಗುತ್ತದೆ.
ಈಗ ಈ ಜನವರ್ಯಾದಿ ಮಾಸಗಳ ಪ್ರಕಾರ ನೋಡಿದಾಗ ಮುಂದಿನ 1000 ವರ್ಷಗಳ ಬಳಿಕ ಜನವರಿ 1 ನೇ ತಾರೀಕು- 2234654 ನೇ ಕಲಿ ದಿನವಾಗಬೇಕು. ಇದು ದಿನಕ್ಕೆ 24 ಘಂಟೆಯ ಪ್ರಕಾರದ ಎಣಿಕೆ. ಹಿಂದೂ ಪಂಚಾಂಗ ಪ್ರಕಾರ 23.56.56 ಎಣಿಕೆಯಲ್ಲಿ ನೋಡಿದಾಗ 2234904 ನೇ ಕಲಿದಿನವಾಗುತ್ತದೆ. ಇಲ್ಲಿ ಕೇವಲ 1000 ವರ್ಷದ ಅಂತರದಲ್ಲಿ ಈ ಜನವರ್ಯಾದಿ ಲೆಕ್ಕದಲ್ಲಿ 250 ದಿನಗಳೇ ಕಡಿಮೆಯಾಗುತ್ತದೆ.
ಇದು ಇವರ 24 ಘಂಟೆ ಲೆಕ್ಕಾಚಾರದ ವ್ಯತ್ಯಾಸ. ಇದನ್ನು ಕಟ್ಟಿಕೊಂಡು ಗ್ರಹಗತಿ ಲೆಕ್ಕಾಚಾರ ಮಾಡಲು ಸಾಧ್ಯವೇ ಇಲ್ಲ. ಇದು ಕೇವಲ ರಾತ್ರಿ ಹಗಲುಗಳ ಒಂದು ದಿನದ ವ್ಯಾವಹಾರಿಕ ಲೆಕ್ಕಾಚಾರವಷ್ಟೆ. ಅಂದರೆ ಸಾಮಾನ್ಯ (Orally) ಲೆಕ್ಕವಾಗುತ್ತದೆ. ಹಾಗಾಗಿ ನಮ್ಮ ಭಾರತೀಯ ಗಣಿತವೇ ಶ್ರೇಷ್ಟ ಎನ್ನಬಹುದು.
ಈಗ ಜನವರಿ ಒಂದನೆಯ ತಾರೀಕು ಹೊಸ ವರ್ಷ ಯಾಕಾಯಿತು? ನೋಡೋಣ. ಸುಮಾರು ಈ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಕ್ರಿಸ್ತ ಪೂರ್ವ ಇನ್ನೂರೈವತ್ತು ವರ್ಷ(250 BC) ಯಲ್ಲಿ ಜನವರಿ ಒಂದು ಮಕರ ಸಂಕ್ರಮಣವಾಗಿತ್ತು. 1 A.C ಯಲ್ಲಿ ಇದೇ ಜನವರಿ ಒಂದನೇ ತಾರೀಕು ರವಿಯು ಮಕರ ರಾಶಿಯಲ್ಲಿ 15° ಅಂದರೆ ಹದಿನೈದು ದಿನ ಸಂಚರಿಸಿಯಾಗಿತ್ತು. ಈಗ ಇದೇ ರವಿಯು ಜನವರಿ ಹದಿನಾಲ್ಕರಂದು ಮಕರ ರಾಶಿ ಪ್ರವೇಶಿಸುತ್ತಾನೆ. ಇದು ಮಕರ ಸಂಕ್ರಮಣ ಕಾಲ.
ಭ ಚಕ್ರದಲ್ಲಿ ಮೇಷ- ಕರ್ಕ-ತುಲಾ-ಮಕರಗಳೆಂಬ ನಾಲ್ಕು ತ್ರಿಕೋಣಗಳು. ಪ್ರತೀ ತ್ರಿಕೋಣದಲ್ಲಿ ರವಿಸಂಚಾರದ ಸಮಯ ವಾತಾವರಣ ಪರಿವರ್ತನೆ ಆಗುತ್ತದೆ. ವಾತಾವರಣಕ್ಕನುಗುಣವಾಗಿಯೇ ಮಾನವನ ದಿನಚರಿಯೂ, ಸಸ್ಯಾದಿ, ಪ್ರಾಣಿಗಳ ದಿನಚರಿಯೂ ಇರುತ್ತದೆ. ಮಕರ ಸಂಕ್ರಮಣಕ್ಕೆ ಮಳೆಗಾಲದ ಒಂದು ಹಂತದ ಬೆಳೆ, ಮೇಷ ಸಂಕ್ರಮಣದ ನಂತರ ಇನ್ನೊಂದು ಹಂತದ ಬೆಳೆಗೆ ತಯಾರಾಗುವುದು, ಕರ್ಕ ಸಂಕ್ರಮಣದ ನಂತರ ದಕ್ಷಿಣಾಯನ ಪ್ರಾರಂಭದಲ್ಲಿ ಮಳೆಗಾಲಕ್ಕೆ ಆಹಾರ ಧಾನ್ಯಗಳನ್ನು ಕೂಡಿಡುವುದು, ಕೆಲ ಬಿತ್ತನೆಗಳು ನಡೆಯುತ್ತದೆ.
ನಂತರ ತುಲಾ ಸಂಕ್ರಮಣದಲ್ಲಿ ಒಂದು ಹಂತದ ಬೆಳೆಗಳ ಕಟಾವು ನಡಿಯುತ್ತದೆ ಮತ್ತು ಮುಂದಿನ ಬೆಳೆಗೆ ಪ್ರಾರಂಭವಾಗುತ್ತದೆ. ಮತ್ತೆ ಮಕರ ಸಂಕ್ರಮಣಕ್ಕೆ ಒಂದು ಹಂತದ ಬೆಳೆ. ಈ ಸಂಧರ್ಭದಲ್ಲಿ ವಿವಿಧ ಪರ್ವದಿನಗಳ ಸಂಭ್ರಮಾಚರಣೆ ನಡೆಯುತ್ತದೆ. ಜಗತ್ತಿನ ಹೆಚ್ಚಿನ ಕಡೆ ಮಕರ ಸಂಕ್ರಮಣದ ಸಂಭ್ರಮಾಚರಣೆ ನಡೆಯುತ್ತದೆ. ಹಾಗೆಯೇ ಎಪ್ರಿಲ್ ತಿಂಗಳಲ್ಲಿ ಬರುವ ಮೇಷ ಸಂಕ್ರಮಣವನ್ನು ಸೌರ ಯುಗಾದಿಯಾಗಿ ಸಂಭ್ರಮಿಸುವುದು ವಾಡಿಕೆ. ಇಂಗ್ಲೀಷರು ಈ ಮಕರ ಸಂಕ್ರಮಣವನ್ನು ಜನವರಿ ಒಂದರ ಆಧಾರದಲ್ಲಿ ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ವ್ಯಾವಹಾರಿಕ ಲೆಕ್ಕಾಂತ್ಯಕ್ಕೆ ಸೌರ ಯುಗಾದಿ(ಎಪ್ರಿಲ್) ಮೇಷ ಸಂಕ್ರಮಣವನ್ನು ಹೊಸ ಲೆಕ್ಕಗಳ ಪ್ರಾರಂಭವಾಗಿ ಪರಿಗಣಿಸಿದರು. ಆದರೆ ಇವರ ದಿನಗಳ Shortages ನಿಂದಾಗಿ ಮಕರ ಎಲ್ಲೋ ಜನವರಿ ಎಲ್ಲೋ ಆಗುತ್ತದೆ. ಉದಾಹರಣೆಗೆ ಇನ್ನು ಐದು ಸಾವಿರ ವರ್ಷಗಳ ನಂತರ ಜನವರಿಯಲ್ಲಿ ರವಿಯು ವೃಶ್ಚಿಕ ರಾಶಿಯಲ್ಲಿ 26 ದಿನ ಕಳೆದಿರುತ್ತಾನೆ. ಅಂದರೆ ಇಂಗ್ಲೀಷ್ ಲೆಕ್ಕಾಚಾರಕ್ಕೆ ಎರಡುವರೆ ತಿಂಗಳ ಹಿಂದೆ ರವಿ ಇರುತ್ತಾನೆ. ಜನವರಿಯಲ್ಲಿ ಮಕರದಲ್ಲಿ ಇರಬೇಕಾದ ರವಿಯು ವೃಶ್ಚಿಕದಲ್ಲಿ ಇರುತ್ತಾನೆ. ಇದು ಭಾರತೀಯ ಕಾಲ ಮಾನಕ್ಕೂ, ವಿದೇಶೀ ಕಾಲಮಾಮಾನಕ್ಕೂ ಇರುವ ಅಂತರ. ಹಾಗಾಗಿ ಭಾರತೀಯರಿಗೆ ಮಕರ ಸಂಕ್ರಮಣ ಉತ್ತರಾಯಣವು ಪರ್ವ ಕಾಲವಾದರೂ ಮೇಷ ಸಂಕ್ರಮಣದ ಸೌರ ಯುಗಾದಿ ಅಥವಾ ಚಾಂದ್ರಮಾನದ ಚಾಂದ್ರ ಯುಗಾದಿಯೇ ಪರ್ವಕಾಲ.
ಜನರಿಗೆ ಕಾಲ ಪರಿಜ್ಞಾನವಿಲ್ಲ. ಡಿಸೆಂಬರ್ 31 ಮದ್ಯ ರಾತ್ರಿಯನ್ನು ಮಧ್ಯ ರಾತ್ರಿಯನ್ನಾಗಿಸಿ ಕುಡಿದು ಕುಪ್ಪಳಿಸುವುದಕ್ಕೇ ಮೀಸಲಿಡುತ್ತಾರೆ!
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post