ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಳೆದ ಕೆಲವು ದಿನಗಳಿಂದ ಭದ್ರಾ ಜಲಾಶಯಕ್ಕೆ ಜೋರಾಗಿದ್ದ ನೀರಿನ ಪ್ರಮಾಣ ನಿನ್ನೆಯಿಂದ ಕೊಂಚ ಕಡಿಮೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಕೇವಲ ಒಂದು ಅಡಿ ನೀರು ಮಾತ್ರ ಸಂಗ್ರಹವಾಗಿದೆ.
ಶನಿವಾರದ ಮಾಹಿತಿಯಂತೆ ಒಂದೇ ದಿನ 5 ಅಡಿ, ಭಾನುವಾರದ ಮುಂಜಾನೆಯ ಮಾಹಿತಿಯಂತೆ 3.5 ಅಡಿ ನೀರು ಸಂಗ್ರಹವಾಗಿತ್ತು. ಆದರೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಕೇವಲ 1 ಅಡಿ ನೀರು ಸಂಗ್ರಹವಾಗಿದೆ. ಇಂದು ಮುಂಜಾನೆ ಬಿಡುಗಡೆಯಾಗಿರುವ ಮಾಹಿತಯಂತೆ 186 ಅಡಿಗಳ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 173’ 4 1/2’ ಆಗಿದೆ.
ನಿನ್ನೆಯ ಮಾಹಿತಿಯಂತೆ 47236 ಕ್ಯೂಸೆಕ್ಸ್ ಇದ್ದ ಒಳಹರಿವು, ಇಂದು 18331 ಕ್ಯೂಸೆಕ್ಸ್’ಗೆ ಇಳಿಕೆಯಾಗಿದೆ.
Get In Touch With Us info@kalpa.news Whatsapp: 9481252093
Discussion about this post