ಇಟಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಇಟಲಿ ಪ್ರಕೃತಿ ನಡುವೆ ಇರುವ ಸುಂದರ ಪ್ರದೇಶವೊಂದರಲ್ಲಿ ಕೊಂಕಣಿ ಸಂಪ್ರದಾಯಂತೆ ವಿವಾಹವಾಗಿದ್ದಾರೆ.
ಕೋಮೋ ಸರೋವರದ ತಟದಲ್ಲಿರುವ ವಿಲ್ಲಾ ಡೆ ಬಾಲ್ಬಯೆಲಿಯನ್ ಎಂಬು ಸುಂದರ ಪ್ರದೇಶದಲ್ಲಿ ಇಬ್ಬರ ವಿವಾಹ ಜರುಗುತ್ತಿದ್ದು, ಕುಟುಂಬಸ್ತರು ಹಾಗೂ ಅತ್ಯಾಪ್ತರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
This is how a typical #Konkani (#ChitrapurSaraswat) bride dresses. #DeepikaPadukone must have been dressed like this in her Konkani Wedding pic.twitter.com/NBQJ157H66
— GaurangM (@gaurangscb) November 14, 2018
ದಕ್ಷಿಣ ಕನ್ನಡ ಮೂಲದವರಾದ ಪಡುಕೋಣೆ ವಿವಾಹ ಅಪ್ಪಟ ಕೊಂಕಣಿ ಸಂಪ್ರದಾಯದಂತೆ ಇಂದು ಜರುಗುತ್ತಿದ್ದು, ಸಿಖ್ ಸಂಪ್ರದಾಯದಂತೆ ನಾಳೆ ಸಿಂಧಿ ಆಚರಣೆ ನಡೆಯಲಿದೆ.
— Deepika Padukone (@deepikapadukone) October 21, 2018
ವಿಶೇಷ ಆಮಂತ್ರಿತರಿಗೆ ಮಾತ್ರ ವಿವಾಹಕ್ಕೆ ಪ್ರವೇಶವಿದ್ದು, ವಿವಾಹ ಜರುಗುವ ಇಡಿಯ ಪ್ರದೇಶದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಡ್ರೋಣ್ ಮೂಲಕ ಭದ್ರತಾ ವ್ಯವಸ್ಥೆಯ ಮೇಲೆ ನಿಗಾ ವಹಿಸಲಾಗಿದೆ. ಕ್ಯೂಆರ್ ಕೋಡ್ ಹೊಂದಿರುವ ಆಮಂತ್ರಣ ಪತ್ರ ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.
ವಿವಾಹದ ಹಿನ್ನೆಲೆಯಲ್ಲಿ ದೀಪಿಕಾ ಹಾಗೂ ರಣವೀರ್ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇನ್ನು, ಅಧಿಕೃತ ಫೋಟೋಗ್ರಾಫರ್ ಹೊರತಾಗಿ ಬೇರಾರು ವಿವಾಹದಲ್ಲಿ ಫೋಟೋ ತೆಗೆಯಲು ಅವಕಾಶಕ್ಕೆ ನಿರ್ಬಂಧ ಹೇರಲಾಗಿದ್ದು, ಅಂತರ್ಜಾಲದಲ್ಲಿ ಎಲ್ಲೂ ಇವರ ವಿವಾಹದ ಫೋಟೋ ಈವರೆಗೂ ಬಿಡುಗಡೆಯಾಗಿಲ್ಲ.
Instagram right now waiting for #DeepveerKiShaadi photos:- pic.twitter.com/rB1opCSyKt
— Pranjul Sharma 🌞 (@Pranjultweet) November 14, 2018
Discussion about this post