ಕಲ್ಪ ಮೀಡಿಯಾ ಹೌಸ್ | ದೆಹಲಿ |
ಕೊರೋನಾ, ಓಮಿಕ್ರಾನ್ ಸೋಂಕು ತೀವ್ರತೆ ಎಷ್ಟೇ ಇದ್ದರೂ 18 ವರ್ಷದೊಳಗಿನ ಮಕ್ಕಳಿಗೆ, ರೋಗ ನಿರೋಧಕ ಸೃಷ್ಟಿಗೆ ಪೂರಕವಾದ ಆ್ಯಂಟಿಬಾಡಿ ಔಷಧಗಳನ್ನು ಬಳಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಕ್ಕಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋವಿಡ್ ಮಾಗ ಸೂಚಿಯನ್ನು ಹೊರಡಿಸಿದ್ದು , 5 ವರ್ಷ ಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್ ಅಗತ್ಯವಿಲ್ಲ. 6ರಿಂದ 11 ವಷದ ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ಪಾಲಕರು ನಿಗಾದಲ್ಲಿ ಮಾಸ್ಕ್ ಹಾಕಬೇಕು. 12ರಿಂದ 18ವಷದ ಮಕ್ಕಳು ದೊಡ್ಡವರಂತೆ ಮಾಸ್ಕ್ ಧರಿಸಬೇಕು. ಮಕ್ಕಳಿಗೆ ಆ್ಯಂಟಿಬಾಡಿ ಔಷಧ ಬಳಸಬೇಡಿ , 5 ವರ್ಷದವರೆಗೆ ಮಾಸ್ಕ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಸ್ಟಿರಾಯ್ಡ್ ಅನ್ನು ಬಳಸುವುದಾದರೂ ಅದು 10 ರಿಂದ 14 ದಿನಕ್ಕೆ ಸೀಮಿತವಾಗಿರಬೇಕು. ಮಕ್ಕಳು ಮತ್ತು ಅಪ್ರಾಪ್ತರಿಗೆ ಸಂಬಂಧಿಸಿದಂತೆ ಕೋವಿಡ್ ನಿರ್ವಹಣೆ ಕುರಿತ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















