ಕಲ್ಪ ಮೀಡಿಯಾ ಹೌಸ್ | ಡೆಹ್ರಾಡೂನ್ |
ತಂದೆ-ತಾಯಿ(ಪೋಷಕರಿಗೆ)ಗೆ ಕಿರುಕುಳ ನೀಡುವ ಮಕ್ಕಳನ್ನು ಮನೆಯಿಂದ ಹೊರಹಾಕಬೇಕು ಎಂದು ಹರಿದ್ವಾರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಭಿನ್ನವಾಗಿ ಹೇಳಿದೆ.
ಉತ್ತರಾಖಂಡ Uttarakhand ಹರಿದ್ವಾರದ ಜ್ವಾಲಾಪುರ, ಕಂಖಾಲ್ ಮತ್ತು ರಾವ್ಲಿ ಮೆಹದುದ್ ಸೇರಿ 6 ವೃದ್ಧ ದಂಪತಿ ತಮ್ಮ ಮಕ್ಕಳೇ ತಮ್ಮ ಮೇಲೆ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿದ್ದಾರೆ ಎಂದು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ತಾವು ಮಕ್ಕಳೊಂದಿಗೆ ವಾಸಿಸುತ್ತಿದ್ದರೂ ಸರಿಯಾಗಿ ನಮ್ಮನ್ನು ನೋಡಿಕೊಳ್ಳುತ್ತಿಲ್ಲ. ನಮ್ಮ ಆರೋಗ್ಯ ಹಾಗೂ ಆಹಾರದ ಕುರಿತಾಗಿ ಗಮನ ಹರಿಸುತ್ತಿಲ್ಲ. ಅಲ್ಲದೇ, ಪದೇ ಪದೇ ಹಲ್ಲೆ ಮಾಡುತ್ತಾರೆ. ಆದ್ದರಿಂದ, ಸ್ಥಿರ ಮತ್ತು ಚರಾಸ್ತಿಗಳಿಂದ ಮಕ್ಕಳನ್ನು ಹೊರ ಹಾಕಬೇಕೆಂದು ಮನವಿಯಲ್ಲಿ ಕೋರಿದ್ದರು.
Also read: ನಟಿ, ಸಂಸದೆ ನವನೀತ್ ರಾಣಾ ಅವರಿಗೆ ಕೊಲೆ ಬೆದರಿಕೆ
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪೋಷಕರಿಗೆ ಕಿರುಕುಳ ನೀಡುವ ಮಕ್ಕಳು ಒಂದು ತಿಂಗಳಲ್ಲಿ ಮನೆ ಖಾಲಿ ಮಾಡಬೇಕು. ಒಂದು ವೇಳೆ ಈ ಆದೇಶ ಪಾಲಿಸದೇ ಇದ್ದರೆ ಪೊಲೀಸರು ಸೂಕ್ತ ಕ್ರಮ ಜರುಗಿಸಬಹುದು ಎಂದು ಸೂಚಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post