ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಷ್ಟ್ರ ರಾಜಧಾನಿ ನವದೆಹಲಿ #NewDelhi ವಿಧಾನಸಭೆಗೆ ಫೆ.5ರಂದು ಚುನಾವಣೆ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆಯಲಿದೆ.
ಈ ಕುರಿತಂತೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಪ್ರಕಟಿಸಿದ್ದಾರೆ.
70 ಸದಸ್ಯರ ಬಲ ಹೊಂದಿರುವ ದೆಹಲಿ ವಿಧಾನಸಭೆಯ ಅವಧಿ ಫೆ.23ಕ್ಕೆ ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಅದಕ್ಕೂ ಮೊದಲೇ ಅಂದರೆ ಫೆ.5ಕ್ಕೆ ಚುನಾವಣೆ ನಡೆಯಲಿದೆ.
Also Read>> ಶಾಲೆಯಲ್ಲಿ ಕುಸಿದುಬಿದ್ದ 9ರ ಬಾಲಕಿ | ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಹಾರಿಹೋಗಿತ್ತು ಪ್ರಾಣಪಕ್ಷಿ
ಹೀಗಿದೆ ವಿವರ:
- ನಾಮಪತ್ರ ಸಲ್ಲಿಕೆ ಪ್ರಾರಂಭ ದಿನಾಂಕ: 10.1.25
- ನಾಮಪತ್ರ ಸಲ್ಲಿಕೆ ಅಂತಿಮ ದಿನಾಂಕ: 17.02.25
- ನಾಮಪತ್ರ ಪರಿಶೀಲನೆ: 18.01.25
- ನಾಮಪತ್ರ ಹಿಂಪಡೆಯುವಿಕೆ: 20.01.25
- ಮತದಾನದ ದಿನಾಂಕ: 5.2.25
- ಫಲಿತಾಂಶ ಎಣಿಕೆ ದಿನಾಂಕ: 8.02.25

ರಾಜಧಾನಿಯಲ್ಲಿ 83,49,645 ಪುರುಷರು ಮತ್ತು 71,73,952 ಮಹಿಳೆಯರು, 1,261 ತೃತೀಯ ಲಿಂಗಿಗಳನ್ನು ಒಳಗೊಂಡಂತೆ ಒಟ್ಟು 1,55,24,858 ಮತದಾರರು ಇದ್ದಾರೆ. 2024ರ ಅಕ್ಟೋಬರ್ 29ರಂದು ಪ್ರಕಟಿಸಲಾಗಿದ್ದ ಕರುಡು ಮತದಾರರ ಪಟ್ಟಿಗಿಂತಲೂ ಅಂತಿಮ ಪಟ್ಟಿಯಲ್ಲಿ ಶೇ.1.09 ರಷ್ಟು ಹೆಚ್ಚಳ ಆಗಿರುವುದನ್ನು ಉಲ್ಲೇಖಿಸಲಾಗಿದೆ.
ಅಂಕಿಅಂಶಗಳ ಪ್ರಕಾರ, ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ 2,08,302 ಮತದಾರರು ಮತ್ತು 79,436 ಅಂಗವಿಕಲ ಮತದಾರರಿದ್ದಾರೆ. ದೆಹಲಿಯು ಒಟ್ಟು 70 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದರೆ, ವಿಕಾಸಪುರಿಯು 4,62,184 ಮತದಾರರನ್ನು ಹೊಂದಿರುವುದರಿಂದ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ.

ಬಿಜೆಪಿ29 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಎಎಪಿ ತೊರೆದು ಬಿಜೆಪಿ ಸೇರಿದ್ದ ಕೈಲಾಶ್ ಗೆಹ್ಲೋಟ್ ಬಿಜವಸನ್’ನಿಂದ ಸ್ಪರ್ಧಿಸುತ್ತಿದ್ದಾರೆ.
ಪಟೇಲ್ ನಗರದಿಂದ ರಾಜ್ ಕುಮಾರ್, ದೆಹಲಿಯ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದ್ ಸಿಂಗ್ ಲವ್ಲಿ ಗಾಂಧಿ ನಗರದಿಂದ ಸ್ಪರ್ಧಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post