ಕಲ್ಪ ಮೀಡಿಯಾ ಹೌಸ್ | ದೆಹಲಿ |
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ #Delhi Excise Policy Case ಸಂಬಂಧಪಟ್ಟಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರಂವಿಂದ ಕೇಜ್ರಿವಾಲ್ #Arvind Kejriwal ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ #Manish Sisodia ಸೇರಿದಂತೆ ಒಟ್ಟು 23 ಮಂದಿಗೆ ಪ್ರಕರಣದಿಂದ ವಿನಾಯಿತಿ ನೀಡಿ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಶುಕ್ರವಾರ ಈ ಆದೇಶ ಹೊರಡಿಸಿದ್ದು, ಆರೋಪಿಗಳ ವಿರುದ್ಧ ಅಭಿಯೋಜನಾ ಸಂಸ್ಥೆಯ ಸಾಕ್ಷ್ಯಗಳಿಗೆ ಬೆಂಬಲವಾಗುವ ಯಾವುದೇ ವಸ್ತುನಿಷ್ಠ ಸಾಕ್ಷ್ಯ ದೊರಕಿಲ್ಲವೆಂದು ಹೇಳಿದರು.
ದೆಹಲಿಯ ಹಿಂದಿನ ಆಪ್ ಸರ್ಕಾರದ ಈಗಿನ ಬಿಜೆಪಿ ಸರ್ಕಾರ ರದ್ದುಪಡಿಸಿರುವ ಅಬಕಾರಿ ನೀತಿಯ ಜಾರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಿ ಕೇಜ್ರಿವಾಲ್ ಮತ್ತು ಸಿಸೋಡಿಯಾ ಬಂಧಿತರಾಗಿದ್ದರು. ದೆಹಲಿಯ ಅಬಕಾರಿ ನೀತಿ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು.




















