Read - < 1 minute
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಡಿಕೆಶಿ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಾಮೀನು ನೀಡಲಾಗುತ್ತಿದ್ದು, 25 ಲಕ್ಷ ರೂಪಾಯಿ ಬಾಂಡ್ ನೀಡುವುದು, ಪಾಸ್’ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು ಹಾಗೂ ವಿಚಾರಣೆಗೆ ಅಗತ್ಯವಿದ್ದಾಗ ಹಾಜರಾಗಬೇಕೆಂಬ ಷರತ್ತುಗಳನ್ನು ಕೋರ್ಟ್ ವಿಧಿಸಿದೆ.
ಈ ಮೂಲಕ ಕಳೆದ 48 ದಿನಗಳ ಜೈಲುವಾಸದಿಂದ ಮಾಜಿ ಸಚಿವರಿಗೆ ಮುಕ್ತಿ ದೊರೆತಂತಾಗಿದೆ.
Discussion about this post