ಸೊರಬ: ರಾಜ್ಯ ಸಮ್ಮಿಶ್ರ ಸರ್ಕಾರದ ಸಾಧನೆ ಹಾಗೂ ಜನಪರ ಯೋಜನೆಗಳನ್ನು ಮುಂದಿನ 35 ದಿನಗಳ ಕಾಲ ಪ್ರತಿ ಮನೆ ಮನೆಗೂ ಸಹ ತಲುಪಿಸಬೇಕು ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಸೊಬರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಉಪಚುನಾವಣೆಯಲ್ಲಿ ನಾನು ಈ ಭಾಗದ ಜನರನ್ನು ಭೇಟಿ ಮಾಡಲು ಅವಕಾಶವಾಗಲಿಲ್ಲ. ಕಡಿಮೆ ಅವದಿ ಇದ್ದ ಕಾರಣ ಬೃಹತ್ ಮಟ್ಟದ ಸಭೆಯ ಮಾಡಲಾಗಿತ್ತು. ಬಂಗಾರಪ್ಪನವರು ಕೇವಲ 13 ದಿನ ಚುನಾವಣೆ ಮಾಡಿದ್ದರೆ ಗೆಲ್ಲುತ್ತಿದ್ದರು. ಆದರೆ ನಾನು ಎದುರಾಳಿಯ ಮತಗಳ ಅಂತರವನ್ನು ಕಡಿಮೆ ಮಾಡಿದ್ದೆ ಎಂದರು.
ಸೊರಬ ಹಾಗೂ ಶಿಕಾರಿಪುರ ತಾಲೂಕು ಭಾಗದಲ್ಲಿ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ನೀಡಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ನೀರಾವರಿ ಸಚಿವರು ನೀರಾವರಿ ಯೋಜನೆಗೆ ಅನುಧಾನ ನೀಡಲು ವಿಫಲರಾಗಿದರು. ಶಿವಕುಮಾರ್ ಭೇಟಿ ಮಾಡಿದ್ದಕ್ಕೆ ಅವರು ನೀರಾವರಿ ಯೋಜನೆಗೆ ಹಣ ತಂದಿದ್ದೇನೆ ಎಂದು ಹೇಳಿಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿಯವರು ರೈತರ 2 ಲಕ್ಷ ರೂ ಸಾಲಮನ್ನಾ ಮಾಡಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕಾರ್ಯಕರ್ತರು 35 ದಿನಗಳ ಕಾಲ ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಬೇಕು. ನಾನು ನಿಮ್ಮ ಧ್ವನಿಯಾಗಿ ಸಂಸತ್’ನಲ್ಲಿ ಪ್ರತಿನಿಧಿಸುತ್ತೇನೆ ಎಂದರು.
ಇನ್ನು, ಸೊರಬ ವಿಧಾನಸಭಾ ಕ್ಷೇತ್ರ ಭಾಗಗಳಲ್ಲಿ ಕಾರ್ಯಕರ್ತರ ಭೇಟಿ ಮಾಡಿದ ಮಧು ಬಂಗಾರಪ್ಪ, ತಾಲೂಕಿನ ತತ್ತೂರು ಗ್ರಾಮದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯರ್ತರ ಸಭೆಯಲ್ಲಿ ಭಾಗಿಯಾದರು.
ಕಳೆದ ಒಂಬತ್ತು ದಿನಗಳಿಂದ ಎಡಬಿಡದೆ ಜೆಲ್ಲೆಯ ಕೈ-ದಳ ಕಾರ್ಯಕರ್ತರನ್ನು ಭೇಟಿ ಮಾಡುತ್ತಿರುವ ಮಧು ಬಂಗಾರಪ್ಪ ಅವರೊಂದಿಗೆ, ಕಾರ್ಯರ್ತರ ಜಂಟಿ ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಪಿ. ರುದ್ರೇಗೌಡ, ಕಾಂಗ್ರೆಸ್ ನ ಕೆ.ಪಿ. ಶಿವಾನಂದ್ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.
Discussion about this post