ಶಿವಮೊಗ್ಗ: ಹೊಸ ಕಾಮಗಾರಿಗಳು ಇಲ್ಲ, ಯುಜಿಡಿ ಮೊದಲೇ ಇಲ್ಲ ಹಳೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಆಶ್ರಯ ಅರ್ಜಿಗಳು ಹಾಗೇಯೆ ಉಳಿದುಕೊಂಡಿವೆ. ಒಟ್ಟಾರೆ ಕೆ.ಎಸ್. ಈಶ್ವರಪ್ಪ ಶಾಸಕರಾದ ಮೇಲೆ ಅವರ ಅಭಿವೃದ್ಧಿ ಶೂನ್ಯ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕೆ.ಎಸ್. ಈಶ್ವರಪ್ಪ ಶಾಸಕರಾಗುವ ಮೊದಲು ಏನೆಲ್ಲಾ ಉತ್ಸಾಹ ತೋರಿದ್ದರು. ಆದರೆ ಶಾಸಕರಾದ ನಂತರ ಅವರ ಉತ್ಸಾಹಗಳೆಲ್ಲ ಜರ್ರೆಂದು ಇಳಿದು ಹೋಗಿದೆ. ಮುಖ್ಯಮಂತ್ರಿಗಳು ಮೂರು ಕೋಟಿ ವಿಶೇಷ ಅನುದಾನ ಶಾಸಕರಿಗೆ ನೀಡಿದ್ದಾರೆ. ಈ ಹಣ ಪಾಲಿಕೆಯ ಎಲ್ಲ ಸದಸ್ಯರಿಗೂ ತಮ್ಮ ತಮ್ಮ ವಾರ್ಡ್’ಗಳ ಅಭಿವೃದ್ಧಿಗಾಗಿ ತಲುಪಬೇಕು. ಆದರೆ ಆದರೆ ಈಶ್ವರಪ್ಪ ಕೇವಲ ಬಿಜೆಪಿ ಸದಸ್ಯರಿಗೆ ಮಾತ್ರ ಅನುದಾನ ನೀಡಿ ತಾರತಮ್ಯ ಎಸಗಿದ್ದಾರೆ. ಇದು ಬಹುದೊಡ್ಡ ತಪ್ಪು ಎಲ್ಲಾ ವಾರ್ಡ್’ಗಳಲ್ಲಿಯೂ ಬಿಜೆಪಿಗೆ ಮತ ಬಂದಿದೆ. ಆದರೆ ಇವರು ಮಾತ್ರ ಬಿಜೆಪಿ ಶಾಸಕ ಕಾಂಗ್ರೆಸ್ ಶಾಸಕ ಎಂದು ಪಕ್ಷ ವಿಂಗಡಿಸಿ ನೋಡುತ್ತಾರೆ ಎಂದು ದೂರಿದರು.
ಹಣ ಬಂದರೂ ಕೆಲಸ ಮಾಡಿಲ್ಲ ಆಶ್ರಯ ಮನೆಗಳಿಗೆ ಅರ್ಜಿ ಹಾಕಿದವರು ಇನ್ನೆಷ್ಟು ದಿನ ಕಾಯಬೇಕು. ಒಂದೇ ಒಂದು ಆಶ್ರಯ ಸಮಿತಿ ಸಭೆಯನ್ನು ಕೂಡ ಇವರು ಕರೆದಿಲ್ಲ ಫಲಾನುಭವಿಗಳ ಆಯ್ಕೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಎಂದು ಇವರಿಗೆ ಅನ್ನಿಸಿರಬೇಕು ಹಾಗಾಗಿ ನಿಲಾಕ್ಷ ತೋರುತ್ತಿದ್ದಾರೆ ಎಂದರು.
ಜೈಲು ಆವರಣ ಜಿಲ್ಲಾಡಳಿತದ ವಶಕ್ಕೆ ಅಥವಾ ಮಹಾನಗರ ಪಾಲಿಕೆ ಹಿಡಿತಕ್ಕೆ ತರುವ ಪ್ರಯತ್ನವನ್ನು ಶಾಸಕರು ಮಾಡಿಲ್ಲ ಮೆಗ್ಗಾನ್ ಆಸ್ಪತ್ರೆಯಲ್ಲಿ ಸುಮಾರು 16.50 ಕೋಟಿ ರೂ. ವೆಚ್ಚದ ಸಬ್ ಸ್ಟೇಷನ್ ನೆನೆಗುದಿಗೆ ಬಿದ್ದಿದೆ ಎಂದರು, ಇದೀಗ ಜಿ2 ಮಾದರಿಯ 4836 ಮನೆಗಳ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. 1836 ಜನರು ಹಣವನ್ನು ತುಂಬಿದ್ದರೆ ಮನೆಗಳ ನಿರ್ಮಾಣ ಆದಷ್ಟು ಬೇಗನೆ ಆಗಿ ಬಡವರಿಗೆ ಹಂಚಿಕೆಯಾಗಬೇಕು ಎಂದರು.
ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಚುನಾವಣೆಗೆ ನಿಲ್ಲುವುದು ಖಚಿತ. ಈಗಾಗಲೇ ಎಲ್ಲ ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮುಖಂಡರು ಹೇಗೆ ಗೆಲ್ಲಬೇಕು ಎಂಬ ಚರ್ಚೆ ಮಾಡುತ್ತಿದ್ದಾರೆ. ಅಭ್ಯರ್ಥಿಯೇ ಕಾಣಿಸುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಗೆಲ್ಲುವುದು ಕನಸು ಇಲ್ಲಿ ಏನೇ ಆಗಲಿ ಮೈತ್ರಿಕೂಟದ ಅಭ್ಯರ್ಥಿಯೇ ಗೆಲ್ಲುತ್ತಾರೆ ಕಾದು ನೋಡಿ ಎಂದು ಭವಿಷ್ಯ ನುಡಿದರು.
ಪತ್ರಿಕಾಗೊಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಯಮುನಾ, ರಂಗೇಗೌಡ, ಶಿವಣ್ಣ ರಂಗನಾಥ್, ಮಂಜು, ಮಂಜುಳಾ, ಶಿವಣ್ಣ, ಖಾಲಿದ್ ಖಾನ ಉಪಸ್ಥಿತರಿದ್ದರು.
Discussion about this post