ಕಲ್ಪ ಮೀಡಿಯಾ ಹೌಸ್ | ವಿಶೇಷ ಸುದ್ಧಿ |
ಆಜಾನ್ ಹಾಗೂ ನಮಾಜ್ #Azan, Namaz ವೇಳೆಯಲ್ಲಿ ದೇಶದ ಎಲ್ಲಾ ಮಂದಿರ ಹಾಗೂ ಪ್ರಾರ್ಥನಾ ಮಂದಿರಗಳ ಮೈಕ್ ಬಂದ್ ಮಾಡಬೇಕು ಎಂದು ಬಾಂಗ್ಲಾದೇಶ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಅಲ್ಲಿ ಸರ್ಕಾರ ಆದೇಶ ಹೊರಡಿಸಿದ್ದು, ನಮಾಜ್ ಹಾಗೂ ಅಜಾನ್ ಆರಂಭವಾಗುವ ಐದು ನಿಮಿಷ ಮೊದಲೇ ಮಂದಿರಗಳು #Hindu Temple ಮೈಕ್ ಆಫ್ ಮಾಡಬೇಕು ಎಂದು ಸೂಚನೆ ನೀಡಿದೆ.
ಬಾಂಗ್ಲಾದೇಶದಲ್ಲಿ ಹೊಸದಾಗಿ ರಚಿನೆಯಾಗಿರುವ ಮಧ್ಯಂತರ ಸರ್ಕಾರ ಹಿಂದೂ ಸಮುದಾಯಕ್ಕೆ ತಾತ್ಕಾಲಿಕವಾಗಿ ದುರ್ಗಾ ಪೂಜೆ #Durga Pooja ಸಂಬಂಧಿತ ಚಟುವಟಿಕೆಗಳು, ವಿಶೇಷ ಸಂಗೀತ ಕಾರ್ಯಕ್ರಮವನ್ನು ನಮಾಜ್ ಹಾಗೂ ಆಜಾನ್ ವೇಳೆ ನಿಲ್ಲಿಸುವಂತೆ ಸೂಚಿಸಿದೆ.
Also read: ಮಾಡುವ ಕೆಲಸದಲ್ಲಿ ವಿಭಿನ್ನತೆ ಇದ್ದರೆ ಜಯ ಸುಲಭ ಸಾಧ್ಯ: ವಿನಾಯಕ ನಾಯ್ಕ್ ಅಭಿಪ್ರಾಯ
ದೇಶದಲ್ಲಿ ವಾರ್ಷಿಕ ದುರ್ಗಾ ಪೂಜೆ ಆಚರಣೆಗಳಿಗೆ ತಯಾರಿ ನಡೆಸುತ್ತಿರುವಾಗ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಈ ಸೂಚನೆ ನಿಡಲಾಗಿದೆ ಎಂದು ಈ ಬಗ್ಗೆ ಮಾತನಾಡಿರುವ ಅಲ್ಲಿನ ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎಂಡಿ ಜಹಾಂರ್ಗೀ ಆಲಂ ಚೌಧರಿ, ಬಾಂಗ್ಲಾದೇಶದ ಹಿಂದೂ ಸಮುದಾಯದ ಅತಿ ದೊಡ್ಡ ಧಾರ್ಮಿಕ ಹಬ್ಬವಾದ ದುರ್ಗಾ ಪೂಜೆಗೂ ಮುನ್ನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕುರಿತು ಉನ್ನತ ಮಟ್ಟದ ಸಭೆಯ ನಂತರ ಈ ಸೂಚನೆ ನಿಡಲಾಗಿದೆ. ಈ ಮಾರ್ಗಸೂಚಿಗಳನ್ನು ಅನುಸರಿಸಲು ಮಂದಿರಗಳ ಸಮಿತಿಗಳು ಒಪ್ಪಿಕೊಂಡಿವೆ ಎಂದಿದ್ದಾರೆ.
ಈ ನಿರ್ಧಾರಕ್ಕೆ ಅಲ್ಲಿನ ಹಿಂದೂಗಳು ವಿರೋಧ ವ್ಯಕ್ತಪಡಿಸಿದ್ದು, ಅಂತಾರಾಷ್ಟೀಯ ಮಟ್ಟದಲ್ಲೂ ಸಹ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post