ಕಲ್ಪ ಮೀಡಿಯಾ ಹೌಸ್
ದಕ್ಷಿಣ ಕನ್ನಡ: ಜಿಲ್ಲೆಯ ಕಣಿಯೂರು ಕ್ಷೇತ್ರದಲ್ಲಿ ಏ.೨೫ರಿಂದ ಏ.೩೦ರವರೆಗೆ ನಡೆಯಲಿದ್ದ ಚಾಮುಂಡೇಶ್ವರಿ ದೇವಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ ಸೇರಿ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂದಡಲಾಗಿದೆ ಎಂದು ಸಮಿತಿ ತಿಳಿಸಿದೆ.
ಕ್ಷೇತ್ರದ ಎಲ್ಲಾ ಸಮಿತಿಗಳ ಸರ್ವಾನುಮತ ತೀರ್ಮಾನದಂತೆ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೋವಿಡ್ ನಿಯಮಾವಳಿಯ ಪ್ರಕಾರ ಸರಕಾರದ ಆದೇಶದಂತೆ ಮುಂದೂಡಲಾಗಿದ್ದು, ಭಕ್ತಾಧಿಗಳು ಸಹಕರಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ವಿಶೇಷ ಸೂಚನೆ:
ಹಸಿರುವಾಣಿ ಹೊರೆಕಾಣಿಕೆ ಕಾರ್ಯಕ್ರಮವೂ ರದ್ದಾಗಿರುತ್ತದೆ. ಭಕ್ತಾದಿಗಳು ರಸ್ತೆ ಬದಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹಾಕಿರುವ ಬ್ಯಾನರ್ ಬಂಟಿಂಕ್ಸ್ ತೆರವುಗೊಳಿಸಿ ಸಹಕರಿಸಬೇಕಾಗಿ ಮನವಿ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post