No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Tuesday, October 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಧನುರ್ಮಾಸ ಶೂನ್ಯ ಮಾಸವಲ್ಲ, ಎಲ್ಲಕ್ಕಿಂತ ಶ್ರೇಷ್ಠ ಮಾಸ

kalpa News by kalpa News
December 17, 2019
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಡಿಸೆಂಬರ್- ಜನವರಿ ತಿಂಗಳುಗಳು ಹತ್ತಿರ ಬರುತ್ತಿದ್ದಂತೆ ಚಳಿಯ ಪ್ರಭಾವ ಹೆಚ್ಚಾಗುತ್ತದೆ. ಅದನ್ನು ತಡೆದುಕೊಳ್ಳಲು ಉಣ್ಣೆಯ ವಸ್ತ್ರ ಧರಿಸಲು, ಬೆಚ್ಚಗಿರಲು ಎಲ್ಲರೂ ಇಷ್ಟಪಡುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ಇದೇ ಸಮಯದಲ್ಲಿ `ಧನುರ್ಮಾಸ’ದ ಆಚರಣೆ ಕಂಡು ಬರುತ್ತದೆ. ಪ್ರಾತಃಕಾಲದಲ್ಲಿ ಬೇಗನೇ ಎದ್ದು ದೇವರ ಪ್ರಾರ್ಥನೆ, ಪೂಜೆಗಳನ್ನು ಪೂರೈಸಿ ಭೋಜನವನ್ನು ಮುಗಿಸುವುದು ಕಾಣುತ್ತದೆ. ಇದರ ಹಿನ್ನೆಲೆಯೇನು? ಈ ವಿಷಯದಲ್ಲಿ ಸ್ವಲ್ಪ ಅರಿಯುವ ಪ್ರಯತ್ನ ನಡೆಸೋಣ.
ಬಹಳ ಜನರು ಮಾಸ, ದಿನ, ಗಳಿಗೆಯನ್ನು ಲೆಕ್ಕಿಸದೆ ತಮಗೆ ಬೇಕಾದ ಸಮಯದಲ್ಲಿ ಎಲ್ಲಾ ಕೆಲಸಗಳನ್ನೂ ಪ್ರಾರಂಭಿಸುತ್ತಾರೆ. ಇನ್ನು ಕೆಲವರು ಅರ್ಧ ಆ ಕಡೆ ಇರುತ್ತಾರೆ. ಇನ್ನರ್ಧ ಈ ಕಡೆ ಇರ್ತಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲವನ್ನೂ ಅನುಸರಿಸುತ್ತಾರೆ. ಮತ್ತೆ ಕೆಲವರು ತಮ್ಮ ಮನೆಯ ಪುರೋಹಿತರು ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಅವರು ರಾಹುಕಾಲ, ಯಮಗಂಡಕಾಲದಲ್ಲಿ ಕೆಲಸ ಪ್ರಾರಂಭಿಸುವುದಿಲ್ಲ. ವಾಸ್ತುಪ್ರಕಾರ ಸರಿಯಾದ ದಿಕ್ಕಿನಲ್ಲೇ ನಿಂತು/ಕುಳಿತು ಕೆಲಸ ಶುರು ಮಾಡುತ್ತಾರೆ.
ಧನುರ್ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಧನುರ್ಮಾಸ ಎಲ್ಲಾ ಕೆಲಸಕ್ಕೂ ಬಹಳ ಶ್ರೇಷ್ಠವಾದ ಮಾಸ. ಧನುರ್ಮಾಸವನ್ನು ಮಾರ್ಗಶಿರ್ಷ ಮಾಸವೆಂದು ಸಹ ಕರೆಯುತ್ತಾರೆ. ಈ ತಿಂಗಳನ್ನು ಧನುರ್ ರಾಶಿ ಆವರಿಸಿಕೊಂಡಿರುವುದರಿಂದ ಇದಕ್ಕೆ ಧನುರ್ ಮಾಸವೆಂದು ಹೆಸರಿಸಲಾಗಿದೆ.


ಶ್ರೀ ಕೃಷ್ಣನಿಗೆ ಪ್ರಿಯವಾದ ಮಾಸ
ಕೃಷ್ಣನ ಪರಮಭಕ್ತರಿಗೆ ಇದು ತುಂಬಾ ಪ್ರಿಯವಾದ ಮಾಸ, ಏಕೆಂದರೆ ಕೃಷ್ಣ ತಿರುಮಲದಲ್ಲಿ ನೆಲೆಸಿರುವ ಶ್ರೀನಿವಾಸ/ವೆಂಕಟೇಶನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ ಭೂದೇವಿ ಅಂಡಾಳ್ ಒಬ್ಬ ಸಾಮಾನ್ಯ ಹುಡುಗಿಯಾಗಿ, ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಮೊದಲು ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚೆನ್ನಾಗಿ ಕಾಣಿಸುತ್ತದೆ ಎಂದ ಮೇಲೆ ಅದನ್ನು ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು. ಇದೇ ಮಾರ್ಗಶೀರ್ಷ ಮಾಸದಲ್ಲಿ ತನ್ನ ಪ್ರಿಯತಮನಾದ ವೆಂಕಟೇಶನಿಗಾಗಿ ತಮಿಳಿನಲ್ಲಿ ತಿರುಪ್ಪಾವೈ ಮೂವತ್ತು ಕವಿತೆಗಳು ಎಂಬ ಪ್ರೀತಿ ಗ್ರಂಥವನ್ನು ರಚಿಸಿದಳು. ಇವತ್ತಿಗೂ ಶ್ರೀವೈಷ್ಣವರು ನಾಲಾಯಿರಂ ತಿರುಪ್ಪಾವೈ ಕೃತಿಗಳೇ ವೆಂಕಟೇಶನಿಗೆ ಪ್ರಿಯವಾದದ್ದೆಂದು ಪಠಿಸುತ್ತಾರೆ. ವೆಂಕಟೇಶನ ಯಾವುದೇ ದೇವಸ್ಥಾನಕ್ಕೆ ಹೋದರೂ, ತಿರುಮಲ ದೇವಸ್ಥಾನದಲ್ಲೂ ಅಂಡಾಳ್ ರಚಿಸಿರುವ ಪ್ರೀತಿಯ ಪ್ರಬಂಧವನ್ನು ಹೇಳಿಯೇ ದೇವರನ್ನು ಎಬ್ಬಿಸುವುದು. ಹಾಗೇ ಅಂಡಾಳ್ ವೆಂಕಟೇಶನಿಗಾಗಿ ರಚಿಸಿರುವ ಲಾಲಿ ಹಾಡು ಹಾಡಿಯೇ ಅವನನ್ನು ಮಲಗಿಸುವುದು.
ಪರಮಾತ್ಮನನ್ನು ಪ್ರೀತಿಸಲು ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ಭೂದೇವಿ ಅಂಡಾಳ್ ರೂಪದಲ್ಲಿ ಪ್ರತಿದಿನ ದೇವಸ್ಥಾನದ ಮುಂದೆ ಕುಳಿತು ವೆಂಕಟೇಶನಿಗಾಗಿ ಪ್ರೀತಿಯಿಂದ ಹಾಡುಗಳನ್ನು ಹಾಡಿ ದೇವರನ್ನು ಖುಷಿ ಪಡಿಸುತ್ತಿದ್ದಳು. ಅವಳು ವೆಂಕಟೇಶನನ್ನು ಪ್ರೀತಿಸಿದ ಮಾಸ ಮಾರ್ಗಶೀರ್ಷ. ಅದೇ ಮಾಸದಲ್ಲಿ ವೆಂಕಟೇಶ/ಶ್ರೀನಿವಾಸ ಅಂಡಾಳ್ ಪ್ರೀತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಅವಳನ್ನು ಮದುವೆಯಾದ. ಹಾಗಾಗಿ ಇದು ದೇವರಿಗೆ ಪ್ರಿಯವಾದ ಮಾಸ.


ದೇವತೆಗಳ ಬ್ರಾಹ್ಮಿ ಮುಹೂರ್ತ
ನಾವು ಪಂಚಾಂಗದ ಪ್ರಕಾರ ಒಂದು ವರ್ಷವನ್ನು ಎರಡು ಭಾಗಗಳನ್ನಾಗಿ ಮಾಡಿದ್ದೇವೆ. ಉತ್ತರಾಯಣ ಪುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನ. ಮಾರ್ಗಶೀರ್ಷ ಮಾಸ ದಕ್ಷಿಣಾಯನ ಪುಣ್ಯಕಾಲದಲ್ಲಿ ಬರುತ್ತದೆ. ಉತ್ತರಾಯಣ ಪುಣ್ಯಕಾಲ ದೇವತೆಗಳಿಗೆ ಬೆಳಿಗ್ಗೆ ದಕ್ಷಿಣಾಯನ ಪುಣ್ಯಕಾಲ ರಾತ್ರಿ. ಈ ಮಾಸ ರಾತ್ರಿ ಮುಗಿಯುತ್ತಿರುವ ಸಮಯ, ನಾವು ಬ್ರಾಹ್ಮೀಮುಹೂರ್ತವೆಂದು ಯಾವ ಸಮಯವನ್ನು ಕರೆಯುತ್ತೇವೋ ಅಂತಹ ಶ್ರೇಷ್ಠ ಮುಹೂರ್ತ ದೇವತೆಗಳಿಗೆ ಈ ಇಡೀ ಮಾಸ. ಈ ತಿಂಗಳು ಪೂರ್ತಿ ಬ್ರಹ್ಮ ಮುಹೂರ್ತವೇ. ಈ ಮಾಸದಲ್ಲಿ ದೇಹವನ್ನು ದಂಡಿಸಿ, ಚಳಿಯಿದ್ದರೂ ನದಿಯಲ್ಲಿ ಸ್ನಾನ ಮಾಡಿ ಬರೀ ದೇವರ ಕಾರ್ಯಗಳನ್ನೇ ಮಾಡಿದರೆ ನಮ್ಮ ಇಷ್ಟಾರ್ಥಗಳು ಫಲಿಸುತ್ತವೆ. ಹಾಗಂತ ಈ ಸಮಯದಲ್ಲಿ ಬೇರೆ ಒಳ್ಳೆ ಕೆಲಸ ಮಾಡಬಾರದೂ ಅಂತಲ್ಲ. ಕೆಲವರು ಮದುವೆ, ನಾಮಕರಣ, ಬ್ರಹ್ಮೋಪದೇಶ ಅಷ್ಟೇ ಯಾಕೆ ಮನೆ ಸೈಟು ಖರೀದಿಸುವವರು ಸಹ ಈ ಮಾಸವನ್ನು ಶೂನ್ಯಮಾಸವೆಂದು ಪರಿಗಣಿಸಿ ಎಲ್ಲವನ್ನೂ ಮುಂದೂಡುತ್ತಾರೆ. ಖಂಡಿತ ಹಾಗೆ ಮಾಡಬೇಕಿಲ್ಲ.


ಶೂನ್ಯ ಮಾಸ ಯಾವುದು?
ಪುಷ್ಯ ನಕ್ಷತ್ರದಿಂದ ಪ್ರಾರಂಭವಾಗುವ ಮಾಸವನ್ನು ಶೂನ್ಯ ಮಾಸವೆನ್ನುತ್ತಾರೆ. ಏಕೆಂದರೆ ಅದು ಶನಿಗೆ ಸಂಬಂಧಪಟ್ಟ ಮಾಸ. ಆ ತಿಂಗಳಿನಲ್ಲಿ ಏನೇ ಕೆಲಸಕ್ಕೆ ಕೈ ಹಾಕಿದರೂ ಅದರ ಫಲಿತಾಂಶ ಶೂನ್ಯವಾಗಿರುತ್ತದೆ ಎಂಬ ನಂಬಿಕೆಯಿದೆ.


ಶೂನ್ಯಮಾಸ ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಯಾವುದಾದರೂ ಒಂದು ತಿಂಗಳು ಬಂದು ಹೋಗುತ್ತದೆ. ಅದನ್ನು ಆಷಾಢ ಮಾಸವೆಂದು ಸಹ ಕರೆಯುತ್ತಾರೆ. ಆಷಾಢದಿಂದ ಉತ್ತರಾಯಣ ಪುಣ್ಯಕಾಲ ಮುಗಿದು, ದಕ್ಷಿಣಾಯನ ಪುಣ್ಯಕಾಲಕ್ಕೆ ಕಾಲಿಡುತ್ತೇವೆ.


`ಧನುಷಿ ಧನುರಾಕಾರಃ ಮಕರೇ ಕುಂಡಲಾಕೃತೀಃ ಎಂಬ ಉಕ್ಕಿಗನುಸಾರವಾಗಿ ಚಳಿಯಿಂದ ತಪ್ಪಿಸಿಕೊಳ್ಳಲು ಮನುಷ್ಯನು ಬಿಲ್ಲಿನಂತೆ ಬಾಗಿ, ಕೈಕಾಲ ಮುದುಡಿಕೊಂಡಿರಲು ಇಷ್ಟಪಡುತ್ತಾನೆ. ಈ ವಾತಾವರಣದ ಫಲವಾಗಿ ಮಾನವನ `ದೈನಂದಿನ ಕ್ರಿಯೆಗಳಾದ ವಿಸರ್ಜನಾಂಗಗಳ ಪ್ರಕ್ರಿಯೆಯಲ್ಲೂ ವೈಪರೀತ್ಯಗಳು ಕಂಡು ಬರುವುದು ಸಹಜವೆಂದು ವೈದ್ಯವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಇದನ್ನೇ `ಸಾಮಾಯಿಕ ಬಾಧೆ’ (ಸೀಸನಿಕ್ ಅಲರ್ಜಿ) ಎನ್ನಬಹುದು. ಇದರ ನಿವಾರಣೆಗಾಗಿ ನಮ್ಮ ಪ್ರಾಚೀನರು ಧನುರ್ಮಾಸದಲ್ಲಿ ಅರುಣೋದಯದ ಹೊತ್ತಿಗೆ ಸ್ನಾನಾದಿಗಳು ಮುಗಿದಿರಬೇಕು ಎಂದರು. ನಂತರದ ಹೊತ್ತಿಗೆ ಕುಳಿರ್ಗಾಳಿ ಹೆಚ್ಚಾಗಿ ಚರ್ಮವು ಶುಷ್ಕತೆಯನ್ನು ಪಡೆಯುವ ಸಾಧ್ಯತೆ ಹೆಚ್ಚು. ಆದುದರಿಂದ ಆ ಕುಳಿರ್ಗಾಳಿ ಆರಂಭವಾಗುವ ಮುನ್ನ ಸ್ನಾನಾದಿಗಳನ್ನು ಮುಗಿಸಿ ವಸ್ತ್ರದಿಂದ ದೇಹವನ್ನು ಮುಚ್ಚುವ ಯತ್ನವಿದಾಗಿರಬಹುದು. ಈ ಸಮಯದಲ್ಲಿ ಸೇವಿಸುವ ಆಹಾರಗಳಲ್ಲಿ ಮುಖ್ಯವಾದುದು ಹುಗ್ಗಿ. ಇದರ ಸಿದ್ಧತೆಗೆ ಬಳಸುವ ಕಡಲೇಬೀಜ, ಅವರೇಕಾಳು, ಜೀರಿಗೆ, ಮೆಣಸು, ಲವಂಗಗಳು, ದೇಹದಲ್ಲಿ ಆಂತರಿಕವಾಗಿ ಉಷ್ಣತೆಯನ್ನು ಹೆಚ್ಚಿಸುವುದರೊಂದಿಗೆ ನೈಮಿತ್ತಿಕ ಬಾಧೆಗಳನ್ನು ತಡೆಯುತ್ತವೆ. ದೈನಂದಿನ ವಿಸರ್ಜನಾಂಗಗಳ ಕ್ರಿಯೆ ಸಹಜವಾಗಿ ನಡೆಯುವಂತೆ ಮಾಡುತ್ತವೆ. ಹೀಗೆ ಆಹಾರ, ಆಚಾರಗಳೆರಡೂ ನಮ್ಮ ಜೀವನ ಸುಖವಾಗಿ ಇರುವಂತೆ ಮಾಡುವುದಕ್ಕಾಗಿಯೇ ಧನುರ್ಮಾಸದ ವಿಧಿಯೆಂಬುದನ್ನು ಅರಿತು ಆಚರಿಸೋಣವೇ?


Get in Touch With Us info@kalpa.news Whatsapp: 9481252093

Tags: Brahmi MuhurtaDhanurmasamDr Gururaj PoshettihalliKannada ArticlePushya NakshatraSpecial Articleಡಾ.ಗುರುರಾಜ ಪೋಶೆಟ್ಟಿಹಳ್ಳಿಧನುರ್ಮಾಸಪುಷ್ಯ ನಕ್ಷತ್ರಬ್ರಾಹ್ಮಿ ಮುಹೂರ್ತಶೂನ್ಯ ಮಾಸ
Share202Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಗೌರಿಬಿದನೂರು: ಕಸ ಸೂಕ್ತ ನಿರ್ವಹಣೆ ಮಾಡಿ, ನೈರ್ಮಲ್ಯ ಕಾಪಾಡಲು ಕರೆ

Next Post

ಅಹಿಂಸಾ ಭಾವನೆ ಮೂಡಿಸಿದಾಗ ಮಾತ್ರ ಜಗತ್ತನ್ನು ರಕ್ಷಿಸಲು ಸಾಧ್ಯ: ತೇರ ಪಂಥ್ ಆಚಾರ್ಯ

kalpa News

kalpa News

Next Post
ಅಹಿಂಸಾ ಭಾವನೆ ಮೂಡಿಸಿದಾಗ ಮಾತ್ರ ಜಗತ್ತನ್ನು ರಕ್ಷಿಸಲು ಸಾಧ್ಯ: ತೇರ ಪಂಥ್ ಆಚಾರ್ಯ

ಅಹಿಂಸಾ ಭಾವನೆ ಮೂಡಿಸಿದಾಗ ಮಾತ್ರ ಜಗತ್ತನ್ನು ರಕ್ಷಿಸಲು ಸಾಧ್ಯ: ತೇರ ಪಂಥ್ ಆಚಾರ್ಯ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL