ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಮುಂಗಡ ಹಣ ಪಡೆದು ಪ್ಲಾಟ್ ನೀಡದ ಬಿಲ್ಡರ್’ಗೆ ಜಿಲ್ಲಾ ಗ್ರಾಹಕ ಆಯೋಗ ದಂಡ ವಿಧಿಸಿರುವ ಪ್ರಕರಣ ವರದಿಯಾಗಿದೆ.
ಹುಬ್ಬಳ್ಳಿ ನಗರದ ಗೋಕುಲ ರೋಡ ನಿವಾಸಿ ಸಪ್ನಾ ಮುಸಾಳೆ ಅವರಿಗೆ ರೇಣುಕಾ ಲಕ್ಷ್ಮೀ ಅಸೋಸಿಯೇಟ್ಸ್’ನ ಆನಂದ ಹಬೀಬ ಅವರು ತಾವು ಬೆಂಗೇರಿಯಲ್ಲಿ ಲೇಔಟ್ ನಿರ್ಮಿಸುತ್ತಿರುವುದಾಗಿ ಹೇಳಿ ಪ್ಲಾಟನ್ನು 7 ಲಕ್ಷ 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು.
ಈ ಬಗ್ಗೆ ದೂರುದಾರರು 4 ಲಕ್ಷ 50 ಸಾವಿರ ರೂಪಾಯಿ ಮುಂಗಡ ಹಣ ಕೊಟ್ಟಿದ್ದಳು. ಸಾಕಷ್ಟು ಕಾಲಾವಕಾಶ ಕಳೆದರೂ ಬಿಲ್ಡರ ಲೇಔಟ್ ನಿರ್ಮಾಣ ಮಾಡಿಲ್ಲದ ಕಾರಣ ಅವರಿಂದ ತನಗೆ ಸೇವಾ ನೂನ್ಯತೆ ಆಗಿ ಮೋಸವಾಗಿದೆ ಎಂದು ಕ್ರಮಕೈಗೊಳ್ಳುವಂತೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

Also read: Bhopal Railway Station awarded ‘Eat Right Station’ certification with a 4-star rating by FSSAI
ಆ ಬಗ್ಗೆ ಲಕ್ಷ್ಮೀ ಅಸೋಸಿಯೇಟ್ಸ್ ಮಾಲೀಕ ಆನಂದ ಹಬೀಬ ಅವರು ದೂರುದಾರರಿಂದ ಪಡೆದ 4,50,000 ರೂ.ಗಳನ್ನು 2019ರ ಜನವರಿ 7ರಿಂದ ಶೇ.8ರಂತೆ ಬಡ್ಡಿ ಹಾಕಿ ಸಂದಾಯ ಮಾಡುವಂತೆ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ 50,000 ರೂ.ಗಳನ್ನು ಪರಿಹಾರವಾಗಿ ಹಾಗೂ 10,000 ರೂ.ಗಳನ್ನು ಪ್ರಕರಣದ ಖರ್ಚು-ವೆಚ್ಚ ನೀಡುವಂತೆ ಆಯೋಗ ಆದೇಶಿಸಿದೆ.












Discussion about this post