ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿನ ನಂದಾದೀಪ ಎಂದಿಗೂ ನಂದಿಲ್ಲ. ನಂದಾದೀಪ ನಂದಿದೆ ಎಂಬುದು ಕಿಡಿಗೇಡಿಗಳ ವದಂತಿಯಷ್ಟೇ ಎಂದು ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ರಾತ್ರಿ 8 ಗಂಟೆಗೆ ಬಾಗಿಲನ್ನು ಹಾಕಲಾಗುತ್ತದೆ(ಬೀಗ ಮುದ್ರೆ). ಮರುದಿನ ಮುಂಜಾನೆ 5 ಗಂಟೆಗೆ ಬಾಗಿಲನ್ನು ತೆರೆಯಲಾಗುತ್ತದೆ. ಮಧ್ಯದಲ್ಲಿ ಯಾರೊಬ್ಬರಿಗೂ ಪ್ರವೇಶಿಸುವ ಅವಕಾಶವಿಲ್ಲ. ನಂತರ ದೇವಸ್ಥಾನವನ್ನು ಪ್ರವೇಶಿಸಿದವರು ಯಾರು? ಅಲ್ಲಿ ನಂದಾದೀಪ ನಂದಿ ಹೋಗಿದೆ ಎಂಬುದಾಗಿ ನೋಡಿದವರು ಯಾರು? ಇದು ಶ್ರೀಕ್ಷೇತ್ರದ ಭಕ್ತಾದಿಗಳ ಭಾವನೆ ಮತ್ತು ನಂಬಿಕೆಗಳೊಂದಿಗೆ ಕೆಲವು ಕಿಡಿಗೇಡಿಗಳು ಮಾಡಿರುವ ಸುಳ್ಳುವದಂತಿಯಾಗಿದೆ. ಅಲ್ಲದೇ ಇದು ಭಗವಂತನ ಸಾನ್ನಿಧ್ಯಕ್ಕೆ ಮಾಡುತ್ತಿರುವ ನಿಂದನಾಸ್ತುತಿಯಾಗಿದೆ ಎಂದಿದ್ದಾರೆ.

ಈ ವದಂತಿಯಿಂದ ನೀವೆಲ್ಲರೂ ದೂರವಿದ್ದು ಲೋಕಕ್ಕೆ ಬಂದಿರುವ ಕೊರೋನಾ ಎಂಬ ಮಹಾಮಾರಿಯನ್ನು ಮನುಜ ಕುಲದಿಂದ ದೂರ ಮಾಡಲು ಎಲ್ಲರೂ ಅವರವರ ಮನೆಯ ಒಳಗಡೆಯೇ ಇದ್ದು ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
















