ಕಲ್ಪ ಮೀಡಿಯಾ ಹೌಸ್ | ಧರ್ಮಸ್ಥಳ |
ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಪೇಜಾವರ ಶ್ರೀಗಳ ಜೊತೆಗಿದ್ದ ಸಾತ್ವಿಕ ಶಕ್ತಿ ಜಾಗೃತವಾಗುತ್ತದೆ. ಅಷ್ಟರ ಮಟ್ಟಿಗೆ ಪೇಜಾವರರು ನಿಷ್ಕಲ್ಮಶ ವ್ಯಕ್ತಿ ಎಂದು ಹಂಸಲೇಖ ಹೇಳಿಕೆ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮದ ನಡುವೆ ಮಾತನಾಡಿದ ಅವರು, ದೇವರನ್ನು ಎರಡು ವಿಧದಲ್ಲಿ ಸ್ತುತಿಸಬಹುದು. ಅದರಲ್ಲಿ ನಿಂದನಾ ಸ್ತುತಿ ಕೂಡಾ ಒಂದು. ಪೇಜಾವರ ಶ್ರೀಗಳನ್ನು ನಿಂದಿಸುವ ಮೂಲಕ ಸ್ತುತಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು 6 ದಿನಗಳ ಕಾಲ ಲಕ್ಷದೀಪೋತ್ಸವ ನಡೆಯುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಲಕ್ಷ ಲಕ್ಷ ದೀಪಗಳಿಂದ ಮದುವಣಗಿತ್ತಿಯಂತೇ ಸಿಂಗಾರಗೊಂಡಿದ್ದು, ಭಕ್ತರ ಕಣ್ಣಿಗೆ ಮುದ ನೀಡುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post