ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಧಾರವಾಡ (Dharwad) ಪ್ರಮುಖ ಕೇಂದ್ರವಾಗಿತ್ತು. ಆಲೂರು ವೆಂಕಟರಾವ್ ಸೇರಿದಂತೆ ಅನೇಕ ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರ ಒಗ್ಗಟ್ಟಿಗಾಗಿ ಶ್ರಮಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ಏಕೀಕರಣದ ಜಾಗೃತಿ ಮೂಡಿಸಿ, ಅಖಂಡ ಕರ್ನಾಟಕ ನಿರ್ಮಾಣಕ್ಕೆ ಧಾರವಾಡಿಗರು ಮಹತ್ವದ ಕೊಡುಗೆ ನೀಡಿದರು ಎಂದು ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಸ್ಟೇಟ್ ಡಿಜಿಟಲ್ ನ್ಯೂಸ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹನುಮೇಶ ಕೆ. ಯಾವಗಲ್ ಅವರು ಹೇಳಿದರು.
ಕೃಷಿ ವಿಶ್ವವಿದ್ಯಾಲಯ ಎದುಗಿರುವ ಗುರುಕೃಪಾ ನಗರದ ಎಮ್.ಎಮ್. ಹಿರೇಮಠ ಲೇಔಟ್ನಲ್ಲಿ ಗುರುಕೃಪ ನಾಗರಿಕ ಅಭಿವೃದ್ಧಿ ಸಂಘದಿಂದ
ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ಮತ್ತು ಕಿರುತೆರೆ ಹಿರಿಯ ಕಲಾವಿದ ಶಂಕರ ಭಟ್ ಅವರು ಭಾಗವಹಿಸಿದರು.
ನಾಡಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಜಾನಪದ ಕಲಾವಿದ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಜನಪದಗಳನ್ನು ಹಾಡಿ, ಜಾನಪದದಲ್ಲಿ ಕನ್ನಡ ಮೌಲ್ಯ ಹಾಗೂ ಬೆಳವಣಿಗೆ ಬಗ್ಗೆ ಹೇಳಿದರು. 
Dharwad : ಕನ್ನಡ ರಸಮಂಜರಿ, ಸಂಗೀತ ಕಾರ್ಯಕ್ರಮ
ಸಿದ್ದು ಮೋಟೆ ತಂಡದವರು ಜಾನಪದ ಡೊಳ್ಳಿನ ಪದಗಳನ್ನು ಹಾಡಿದರು. ಶ್ರೀಮತಿ ಕಟ್ಟಿಸಂಗಾವಿ ತಂಡದವರು ಕನ್ನಡ ರಸಮಂಜರಿ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿದರು. ಇಂದಿರಾ ಮಾಳಗಿ ತಂಡದವರಿಂದ ಜಾನಪದ ಡೊಳ್ಳಿನ ಕುಣಿತ ಕಾರ್ಯಕ್ರಮ ನಡೆದವು.
ಸಂಘದ ಅಧ್ಯಕ್ಷ ಎಂ. ಎಂ. ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂಜಯ ಖತಗಲ್ಲಿ ವೇದಿಕೆ ಮೇಲಿದ್ದರು.
Also Read>> ಶಿಕಾರಿಪುರದಲ್ಲಿ ಮಕ್ಕಳ ದಿನಾಚರಣೆ: ಪೋಷಕರ ಕನಸು ನನಸು ಮಾಡಲು ಶ್ರಮಿಸಿ – ಕಿರಣ್ ಜಿ.ಬಿ.
ಶಿವಕುಮಾರ ದೊಡಮನಿ, ಶಶಿಕಾಂತ ಹೊಂಬಳ, ವಿನೋದ ಜಂಬೊಟಕರ್, ಗುರುಪ್ರಸಾದ ದೇಸಾಯಿ, ಪ್ರವೀಣ ಪಾಟೀಲ್, ಅಬ್ದುಲ್ ಸಾಬ್ ಭಾಗವಾನ್, ಈಶ್ವರಗೌಡ ಪಾಟೀಲ್, ಕರುಣಾ ಜಂಬೊಟಕರ್, ಸುರೇಶ ಚಿಂಚಲಿ, ಮಹೇಶ ಹಿರೇಮಠ, ಸೋಮಲಿಂಗ ಹಲಗತ್ತಿ, ಮಲ್ಲಿಕಾರ್ಜುನ ಹುಕ್ಕೇರಿ, ಬಸವರಾಜ ಸ್ವಾದಿ, ಬಸವರಾಜ ಸೂಸಿಮಠ ಉಪಸ್ಥಿತರಿದ್ದರು.
ಮೈತ್ರಾದೇವಿ ವಸ್ತ್ರದ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ವಿನೋದ ಜಂಬೊಟಕರ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








