ಧಾರವಾಡ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವಕರು ಕೈ ಬೆರಳಿನ ಶಾಹಿಯೊಂದಿಗೆ ಸೆಲ್ಫಿ ತೆಗೆದು ಜಿಲ್ಲಾಡಳಿತಕ್ಕೆ ಕಳುಹಿಸಿದರೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ಈ ಕುರಿತಂತೆ ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಬಿ.ಸಿ. ಸತೀಶ್, 18 ವರ್ಷ ಪೂರ್ಣಗೂಂಡ ಯವಕ, ಯುವತಿಯರು ಫಾರಂ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಅರ್ಹರು ಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಿದ ನಂತರ, ನಿಮ್ಮ ಕೈ ಬೆರಳಿನ ಶಾಹಿ ಕಾಣುವ ಹಾಗೆ ಸೆಲ್ಫಿ ತೆಗೆದುಕೊಂಡು ಸ್ವಿಥಪ್ ಸಮಿತಿಗೆ ಕಳುಹಿಸಬೇಕು. ಜಿಲ್ಲಾಡಳಿತದಿಂದ ಅತ್ಯುತ್ತಮ ಸೆಲ್ಫಿಗೆ ಬಹುಮಾನ ನೀಡಲಾಗುವುದು ಎಂದರು.
ಮತದಾನ ಪ್ರತಿಯೊಬ್ಬರ ಪವಿತ್ರ ಕರ್ತವ್ಯ ಮತ್ತು ಹಕ್ಕು ಆಗಿದೆ. ಪ್ರಜ್ಞಾವಂತ ಯುವಜನರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಭಾಗೀದಾರರಾಗಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಮೂಲಕ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರೆರೇಪಿಸಬೇಕು ಎಂದರು.
ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪದವಿ ವಿದ್ಯಾಲಯದ ಚುನಾವಣಾ ಸಾಕ್ಷರತಾ ಕ್ಲಬ್‌ನ ರಾಯಭಾರಿ ಸಚಿನ್ ಸಾಲಿಮಠ, ಸದಸ್ಶರಾದ ರಮೇಶ ವಾಲೀಕಾರ, ಬಸವರಾಜ ನಂದಪ್ಪನವರ, ಉಮರ್ ಜಕಾತಿ, ರುದ್ರಪ್ಪ ಮರೇವಾಡ ಅವರು ಸೈಕಲ್ ಜಾಥಾ ಮೂಲಕ ಅಮ್ಮಿನ ಭಾವಿ, ಹಾರೋಬೆಳವಡಿ, ಮನಸೂರ, ಮನಗುಂಡಿ, ಕ್ಯಾರಕೊಪ್ಪ, ನುಗ್ಗಿಕೇರಿ, ಕಣವಿ ಹೊನ್ನಾಪೂರ, ಹುಬ್ಬಳ್ಳಿ ಭೈರಿದೇವರ ಕೊಪ್ಪ, ಸತ್ತೂರಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣ ತಲುಪುವರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಗಜಾನನ ಮನ್ನಿಕೇರಿ, ಕೆ.ಎಮ್. ಶೇಖ್, ಜೆ.ಎನ್. ನಂದನ್, ಪ್ರೊ.ಎಂ.ಎಂ. ಜವಳಿ, ಪ್ರೊ. ಆರ್.ಬಿ. ಸೋನೆಖಾನ್, ಎಂ.ಎಸ್. ಕಿಲ್ಲೇದಾರ ಹಾಗೂ ಕಿಟೆಲ್, ಅಂಜುಮನ್ ಹಾಗೂ ಸರ್ಕಾರಿ ಮಹಿಳಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Discussion about this post