ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಸತ್ಸಂಗ ಪಾಠಗಳ ಕನ್ನಡ ಆವೃತ್ತಿ ಜಾಗೃತಿ ಕಾರ್ಯಕ್ರಮ ಮಾ.25ರಂದು ಸಂಜೆ 6 ರಿಂದ ಸಂಜೆ 7:15ರವರೆಗೆ ರಾಷ್ಟ್ರೀಯ ಹೆದ್ದಾರಿ ನರೇಂದ್ರ ಸಮೀಪದ ಹೊಟೇಲ್ ಗ್ರ್ಯಾಂಡ್ ಮಾಸ್ಟಿಫ್ ಸಭಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿ ಸ್ಮರಣಾನಂದ ಗಿರಿ, ಯೋಗದಾ ಧ್ಯಾನ ತಂತ್ರಗಳನ್ನು ಕಲಿಸಲಾಗುವುದು. ಉಪನ್ಯಾಸದ ನಂತರ ಧ್ಯಾನದಲ್ಲಿ ಆಸಕ್ತಿ ಹೊಂದಿದವರು ವೈಎಸ್‌ಎಸ್ ಪಾಠಗಳಿಗೆ ಹೆಸರು ನೋಂದಾಯಿಸಬಹುದಾಗಿದೆ. ಸಂಸ್ಥೆಯ ಹಿರಿಯ ಸನ್ನ್ಯಾಸಿ ಹಾಗೂ ಉಪಾಧ್ಯಕ್ಷರಾದ ಸ್ವಾಮಿ ಸ್ಮರಣಾನಂದ ಗಿರಿಯವರು ಮತ್ತು ಸ್ವಾಮಿ ಶ್ರೇಯಾನಂದ ಗಿರಿಯವರು, ಪರಮಹಂಸ ಯೋಗಾನಂದರ ಉಪದೇಶಗಳು ಹಾಗೂ ವೈಜ್ಞಾನಿಕ ಧ್ಯಾನದ ಆಧ್ಯಾತ್ಮಿಕ ಮಹತ್ವದ ಕುರಿತು ತಮ್ಮ ಅಮೂಲ್ಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಎಂದರು.
1917ರಲ್ಲಿ ಆಧ್ಯಾತ್ಮಿಕ ಮಹಾಗುರು ಪರಮಹಂಸ ಯೋಗಾನಂದರು (ವಿಶ್ವವಿಖ್ಯಾತ ‘ಯೋಗಿಯ ಆತ್ಮಕಥೆ’ ಕೃತಿಯ ಕರ್ತೃ) ಸ್ಥಾಪಿಸಿದ ಸಂಸ್ಥೆ-ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಶೀಘ್ರದಲ್ಲೇ ಯೋಗದಾ ಸತ್ಸಂಗ ಕ್ರಿಯಾ ಯೋಗ ಪಾಠಗಳನ್ನು ಕನ್ನಡದಲ್ಲಿ ಪರಿಚಯಿಸಲಿದೆ. ಇದರಿಂದ ಪ್ರಾಚೀನ ಮತ್ತು ವೈಜ್ಞಾನಿಕ ಕ್ರಿಯಾ ಯೋಗ ಧ್ಯಾನ ಉಪದೇಶಗಳು ಮತ್ತು ಯೋಗದ ಸರ್ವಮಾನವೀಯ ತತ್ವಗಳು ಕನ್ನಡ ಭಾಷಿಕ ಆತ್ಮಸಾಧಕರಿಗೆ ಅವರ ಮಾತೃಭಾಷೆಯಲ್ಲಿ ಲಭ್ಯವಾಗಲಿವೆ ಎಂದರು.
ಪರಮಹಂಸ ಯೋಗಾನಂದರು ಬೋಧಿಸಿದ ಧ್ಯಾನದ ವೈಜ್ಞಾನಿಕ ವಿಧಾನಗಳು ಮತ್ತು ಸಮತೋಲನಯುತ ಜೀವನದ ತತ್ವಗಳ ಮೂಲಕ, ಪ್ರಾಮಾಣಿಕ ಸಾಧಕರು ಕ್ರಮಬದ್ಧವಾಗಿ ಮತ್ತು ಹಂತ ಹಂತವಾಗಿ ಕ್ರಿಯಾ ಯೋಗ ಧ್ಯಾನದ ತಂತ್ರಗಳನ್ನು, ಮನೆಮೂಲಕ ಅಧ್ಯಯನದ ಪತ್ರಾಚಾರ ಪಾಠಕ್ರಮವಾಗಿ ಕಲಿಯಬಹುದು ಮತ್ತು ತಮ್ಮ ದೈನಂದಿನ ಕರ್ತವ್ಯಗಳನ್ನು ಮುಂದುವರಿಸಿಕೊಂಡೇ ಈ ಉಪದೇಶಗಳನ್ನು ಅಭ್ಯಾಸ ಮಾಡಬಹುದು ಎಂದು ತಿಳಿಸಿದರು.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ದೇಶದಾದ್ಯಂತ ಆನ್‌ಲೈನ್ ಧ್ಯಾನ ಕೇಂದ್ರಗಳು ಹಾಗೂ ಪ್ರತ್ಯಕ್ಷ ಧ್ಯಾನ ಕೇಂದ್ರಗಳನ್ನು ನಡೆಸುತ್ತಿದ್ದು, ಭಕ್ತರು ನಿಯಮಿತವಾಗಿ ಸಾಮೂಹಿಕ ಧ್ಯಾನ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದಲ್ಲದೆ, ಈ ಸಂಸ್ಥೆ ಭಾರತದಲ್ಲಿ ಐದು ಆಶ್ರಮಗಳನ್ನು ಹೊಂದಿದ್ದು, ಅಲ್ಲಿ ಸಾಧಕರು ಧ್ಯಾನ, ಆಧ್ಯಾತ್ಮಿಕ ಸಾಧನೆ ಹಾಗೂ ಸಮತೋಲನಯುತ ಜೀವನಕ್ಕೆ ಸಂಬಂಧಿಸಿದ ಶಿಬಿರಗಳು ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 83103 89328 ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ವಾಮಿ ಶ್ರೇಯಾನಂದ ಗಿರಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















