ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಸಭಾ ಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಯುವ ಜನೋತ್ಸವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಯುವ ಸಬಲೀಕರಣ ಇಲಾಖೆ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ದಾರವಾಡದಲ್ಲಿ ನಡೆದ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ದೇಶದ ವಿವಿಧದೆಯಿಂದ ಆಗಮಿಸಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಿರಿ, ತಮಗೆಲ್ಲ ಅಭಿನಂದನೆಗಳು ಎಂದರು.
26ನೇ ರಾಷ್ಟ್ರೀಯ ಯುವ ಜನೋತ್ಸವ ಅತ್ಯಂತ ಯಶಸ್ವಿಗೊಂಡಿದೆ. ಹಸಿರು ಮಯವಾದ ಕಾರ್ಯಕ್ರಮ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾರಂಭ ಇದಾಗಿದೆ. ನಿಮ್ಮಲ್ಲಿನ ಅನುಭವ, ಜ್ಞಾನ ಕೌಶಲ ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ.
ಪ್ರಧಾನಿಗಳು ಹೇಳಿದಂತೆ ದೇಶದ ಯುವ ಜನರ ಕೈಯಲ್ಲಿ ದೇಶದ ಗುರಿ ಶಕ್ತಿ ಅಡಗಿದೆ ಅದು ಸರಿಯಾದ ದೃಷ್ಟಿಯೆಡೆಗೆ ಸಾಗಬೇಕಿದೆ ಎಂದರು.

ಸ್ಟಾರ್ಟ್ ಅಪ್, ಡಿಜಿಟಲ್ ಇಂಡಿಯಾ, ಆತ್ಮ ನಿರ್ಭರ ಭಾರತ ಯೋಜನೆಗಳನ್ನು ಜಾರಿಗೊಳಿಸಿ, 80 ಸಾವಿರ ಕಂಪನಿಗಳಿಗೆ ಯುನಿಕಾರ್ನ್ ಬ್ರಾಂಡ್ ಲಭಿಸಿದೆ. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ 400 ಉತ್ಪನ್ನಗಳನ್ನು ದೇಶದಲ್ಲಿಯೇ ಉತ್ಪಾದನೆ ಮಾಡಲು ಸಾಧ್ಯವಾಗಿದೆ ಎಂದರು.
Also read: ನೌಕರರ ವಿರುದ್ಧ ಮಿಥ್ಯಾರೋಪ ಮಾಡುವವರ ವಿರುದ್ಧ ಸೂಕ್ತ ಕ್ರಮ: ಸಿ.ಎಸ್. ಷಡಾಕ್ಷರಿ ಎಚ್ಚರಿಕೆ
ಈ ಯುವ ಜನನೋತ್ಸವದಲ್ಲಿ ಪ್ರಥಮಬಾರಿಗೆ ಯುವ ಶೃಂಗ ಸಭೆ ಯಶ್ವಿಯಾಗಿದೆ. ಇದನ್ನು ಎಲ್ಲ ರಾಜ್ಯಗಳ ಕಾಲೇಜುಗಳಿಗೆ ವಿಸ್ತರಿಸಲಾಗುವುದು. ಸ್ವಚ್ಚ ಸುಂದರವಾದ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವಾಗಿದೆ ಎಂದರು.











Discussion about this post