ಕಲ್ಪ ಮೀಡಿಯಾ ಹೌಸ್ | ಧಾರವಾಡ |
ತನ್ನ ಮಗು ಬಹಳ ಅಳುತ್ತಿದೆ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಒಂದು ವರ್ಷದ ಹೆಣ್ಣು ಕೂಸನ್ನು ನೆಲಕ್ಕೆ ಬಡಿದು ಕ್ರೂರತ್ವ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಯಾದವಾಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಕ್ರೂರ ತಂದೆಯನ್ನು ಶಂಭುಲಿಂಗಯ್ಯ ಎಂದು ಗುರುತಿಸಲಾಗಿದೆ.
ನಿನ್ನೆ ತಡರಾತ್ರಿ ಈತನ ಒಂದು ವರ್ಷದ ಹೆಣ್ಣು ಮಗು ವಿಪರೀತವಾಗಿ ಅಳುತ್ತಿತ್ತು. ಸಮಾಧಾನ ಮಾಡಲು ಪ್ರಯತ್ನ ಪಟ್ಟರೂ ಮಗು ಅಳು ನಿಲ್ಲಿಸಿಲ್ಲ. ಈ ಕಾರಣಕ್ಕಾಗಿ ಮಗುವನ್ನು ಸಮಾಧಾನ ಮಾಡಲಾಗದೇ ನೆಲಕ್ಕೆ ಬಡಿದಿದ್ದಾನೆ.
Also read: ಅಭಿವೃದ್ಧಿ ಇಲ್ಲದೆ ಜಿಡಿಪಿ, ಆಯವ್ಯಯ ಗಾತ್ರ ಹೆಚ್ಚಳವಾಗಲು ಸಾಧ್ಯವೇ? ಮುಖ್ಯಮಂತ್ರಿ ಸಿದ್ದರಾಮಯ್ಯ
ನೆಲಕ್ಕೆ ಬಿದ್ದ ಮಗುವಿನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ.
ಮಗುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಕ್ರೂರ ತಂದೆ ಶಂಭುಲಿAಗಯ್ಯನನ್ನು ವಶಕ್ಕೆ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















