ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಧಾರವಾಡದ ಶಿವಪ್ರಸಾದ ಲಿಂಗಪ್ಪ ಹೊಟ್ಟಿನ ಅವರು ಸಿವಿಲ್ ಕಾಂಟ್ರಾಕ್ಟರ್ ಪರವಾಣಿಗೆ ಪ್ರಮಾಣ ಪತ್ರವನ್ನು ಪಡೆಯಲು ಲೋಕೋಪಯೋಗಿ ಇಲಾಖೆ ಧಾರವಾಡ ಅಧೀಕ್ಷಕ ಅಭಿಯಂತರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಪ್ರಮಾಣ ಪತ್ರ ನೀಡಲು ಅಧೀಕ್ಷಕ ಅಭಯಂತರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ರೇವಣ್ಣಸಿದ್ದಪ್ಪ ಗೌಡಣ್ಣವರ ಅವರು ರೂ. 3,500ಗಳ ಲಂಚಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ಅರ್ಜಿದಾರ ಹೊಟ್ಟಿನ ಧಾರವಾಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಮಹಾಂತೇಶ ರೇವಣ್ಣಸಿದ್ದಪ್ಪ ಗೌಡಣ್ಣವರ ಅವರು ದೂರುದಾರರಿಂದ ರೂ.3500/- ಲಂಚ ಪಡೆಯುವ ವೇಳೆಯಲ್ಲಿ ಎಡಿಜಿಪಿ ಮತ್ತು ಐಜಿಪಿ ಕರ್ನಾಟಕ ಲೋಕಾಯುಕ್ತ ಧಾರವಾಡ ಅವರ ಮಾರ್ಗದರ್ಶನದಲ್ಲಿ ಹಾಗೂ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ ಚಿಟಗುಪ್ಪಿ, ಪೊಲೀಸ್ ಉಪಾಧಿಕ್ಷಕರಾದ ಹೆಚ್.ಕೆ. ಪಠಾಣ, ವಿಜಯ ಬಿರಾದಾರ ಅವರ ನೇತೃತ್ವದಲ್ಲಿ ಧಾರವಾಡ ಲೋಕಾಯುಕ್ತ ಪೆÇಲೀಸ್ ಠಾಣೆಯ ನಿರೀಕ್ಷಕರಾದ ಬಸವರಾಜ ಅವಟಿ ಹಾಗೂ ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರಪಡಿಸಿದ್ದಾರೆ. ಮತ್ತು ಸದರಿ ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿದೆ.
ಈ ಪ್ರಕರಣವನ್ನು ಧಾರವಾಡ ಪೊಲೀಸ್ ಠಾಣೆಯ ಪೊಲೀಸ್ ನೀರಿಕ್ಷಕರಾದ ಬಸವರಾಜ ಅವಟಿ ಅವರು ತನಿಖೆ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











Discussion about this post