ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಉಚಿತ ಕಾನೂನು ಅರಿವು- ನೆರವು ನೀಡುವ ಕಾರ್ಯಕ್ರಮ ಅತ್ಯಂತ ವಿಶಿಷ್ಟ ಮತ್ತು ಆದರ್ಶವಾಗಿದೆ. ಪ್ಯಾನಲ್ ವಕೀಲರು ಕಾನೂನು ಸೇವೆಗಳ ಪ್ರಾಧಿಕಾರದ ಪಂಚೆಂದ್ರೀಯಗಳಿದ್ದಂತೆ, ನ್ಯಾಯದೇವತೆಯನ್ನು ಬಡವರ, ಅಸಹಾಯಕರ ಮನೆ ಬಾಗಿಲಿಗೆ ತಲುಪಿಸುವ ಬದ್ದತೆ ಪ್ಯಾನಲ್ ವಕೀಲರಿಗೆ ಇರಬೇಕೆಂದು ಎರಡನೇಯ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ಅವರು ಹೇಳಿದರು.
ಅಂಬೇಡ್ಕರ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಲು ನೂತನವಾಗಿ ಆಯ್ಜೆಯಾದ ಪ್ಯಾನಲ್ ವಕೀಲರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Also read: ಚಿತ್ರದುರ್ಗ ಪೊಲೀಸರ ಭರ್ಜರಿ ಬೇಟೆ: 9 ಲಕ್ಷ ಮೌಲ್ಯದ ಆಭರಣ ಸಹಿತ ಅಂತಾರಾಜ್ಯ ಕಳ್ಳರ ಬಂಧನ
ಪ್ರಾಧಿಕಾರವು ನ್ಯಾಯಾಲಯಗಳಲ್ಲಿ ಕೇಸ್ ನಡೆಸಲು ಗೌರವಧನ ನೀಡುತ್ತದೆ. ಉಳಿದಂತೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪಡೆದು ದಾಖಲಿಸುವ ಕೇಸ್ ಗಳಿಗೆ ಯಾವುದೇ ರೀತಿಯ ಕೊರ್ಟ್ ಫೀ, ಇತರೆ ವೆಚ್ಚ ಇರುವದಿಲ್ಲ. ಆದ್ದರಿಂದ ಕಕ್ಷಿದಾರನ ಅಸಹಾಯಕತೆ, ಮುಗ್ದತೆಯನ್ನು ದುರುಪಯೋಗ ಮಾಡಿಕೊಳ್ಳದೆ ಪ್ರಾಧಿಕಾರ ನೀಡಿರುವ ಅವಕಾಶ ಬಳಸಿಕೊಂಡು ಪ್ರಾಮಾಣಿಕವಾಗಿ ಬಡವರ, ಅಸಹಾಯಕರ ಸೇವೆ ಮಾಡಬೇಕೆಂದು ನ್ಯಾಯಾಧೀಶ ಕೆ.ಸಿ.ಸದಾನಂದಸ್ವಾಮಿ ತಿಳಿಸಿದರು.

ಅನೇಕರು ನ್ಯಾಯಲಯದ ವೆಚ್ಚದ ಭಯ, ತಿಳುವಳಿಕೆ ಕೊರತೆ ಹಾಗೂ ಇತರ ಕಾರಣಗಳಿಂದ ತಮಗೆ ಆಗುವ ಅನ್ಯಾಯ, ದೌರ್ಜನ್ಯ ಸಹಿಸಿಕೊಂಡು ಸುಮ್ಮನಿರುತ್ತಾರೆ. ಅಂತವರಿಗೆ ನ್ಯಾಯ ಕೊಡಿಸುವ ಮಹತ್ವದ ಜವಾಬ್ದರಿ ಪ್ಯಾನಲ್ ವಕೀಲರ ಮೇಲಿದೆ ಎಂದು ನ್ಯಾಯಾಧೀಶೆ ಎಸ್.ನಾಗಶ್ರೀ ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಮ್. ಅವರು ಅವರ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯ ಹಾಗೂ ವಿವಿಧ ತಾಲೂಕು ನ್ಯಾಯಾಲಯಗಳ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ 125 ಜನ ಪುರುಷ ಹಾಗೂ ಮಹಿಳಾ ನ್ಯಾಯವಾದಿಗಳನ್ನು ಪ್ಯಾನಲ್ ವಕೀಲರಾಗಿ ನೇಮಿಸಿಕೊಳ್ಳಲಾಗಿದೆ.

ಹಿರಿಯ ನ್ಯಾಯವಾದಿ ಸೋಮಶೇಖರ ಜಾಡರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪ್ಯಾನಲ್ ವಕೀಲರು, ನ್ಯಾಯವಾದಿಗಳು, ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು ಭಾಗವಹಿಸಿದ್ದರು.









Discussion about this post