ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಮಳೆಗಾಲ ಆರಂಭವಾದರೆ ಚರಂಡಿಯಲ್ಲಿ ಕಸ, ಕಡ್ಡಿ, ಹೂಳು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮತ್ತು ಜನಜೀವನ ಅಸ್ತವ್ಯಸ್ತಗೊಳಿಸುವ ಸಂಭಾವ್ಯ ಪ್ರದೇಶಗಳಲ್ಲಿ ಮಹಾನಗರಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯ ಮತ್ತು ಸಾರ್ವಜನಿಕರ ಅಭಿಪ್ರಾಯ ತಿಳಿಯಲು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಬೆಳಿಗ್ಗೆ ಧಾರವಾಡನಗರದ ಹಲವು ಬಡಾವಣೆ, ನಗರಗಳಿಗೆ ಸ್ವತಃ ಭೇಟಿ ನೀಡಿ, ಕಾರ್ಯಪ್ರಗತಿ ಪರಿಶೀಲಿಸಿದರು.
ಆರಂಭದಲ್ಲಿ ಬಸ್ ಡಿಪೋ ಸರ್ಕಲ್, ಬಸ್ ಡಿಪೋ ಪಕ್ಕದ ರಾಜಕಾಲುವೆ, ಮದಿಹಾಳ, ನಿಜಾಮುದ್ದಿನ ಕಾಲೋನಿ, ಎಂ.ಆರ್ ನಗರ ನಾಲಾ ಪ್ರದೇಶಗಳಿಗೆ ಭೇಟಿ ನೀಡಿ, ನಾಲಾ ಸ್ವಚ್ಛಗೊಳಿಸಿದ್ದರೂ ಕೆಲವಡೆ ಮತ್ತೆ ಸಾರ್ವಜನಿಕರು ಕಸಕಡ್ಡಿ, ಪ್ಲಾಸ್ಟಿಕ್ ಚಲ್ಲಿರುವುದನ್ನು ಗಮನಿಸಿ, ಸಾರ್ವಜನಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ತಪ್ಪಿದಲ್ಲಿ ಮಹಾನಗರ ಪಾಲಿಕೆ ನಿಯಮಾವಳಿಗಳ ಪ್ರಕಾರ ದಂಡ ವಿಧಿಸಿ, ಹೆಚ್ಚುವರಿ ಟ್ಯಾಕ್ಸ್ ಹಾಕಿ ಎಂದು ಸೂಚಿಸಿದರು.

ನಂತರ ಜಿಲ್ಲಾಧಿಕಾರಿಗಳು, ಸಿಬಿ ನಗರ, ಭಾವಿಕಟ್ಟಿಪ್ಲಾಟ, ಬಸವನಗರ ಪ್ರದೇಶಗಳಿಗೆ ಭೇಟಿ ನೀಡಿ, ನಾಲಾ ಮತ್ತು ರಾಜಕಾಲುವೆ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ವಲಯ ಆಯುಕ್ತರಾದ ಸಂತೋಷ ಯರಂಗಳಿ, ಆನಂದ ಕಾಂಬಳೆ ಅವರು ಸ್ವಚ್ಛತಾ ಕಾರ್ಯ, ಚರಂಡಿ ದುರಸ್ತಿ ಕಾಮಗಾರಿಗಳ ಕುರಿತು ವಿವರಿಸಿದರು.

ಹೆಸ್ಕಾಂ ಅಧಿಕಾರಿಗಳಿಂದ ನಗರದ ಪ್ರತಿ ವಿದ್ಯುತ್ ಕಂಬದ ಶೀಥಿಲತೆ, ತಂತಿಗಳು ಜೊತು ಬಿದ್ದಿರುವುದು, ಸಾರ್ವಜನಿಕರಿಗೆ ತಲುಪುವಂತೆ ಇರುವ ಮತ್ತು ಓಪನ್ ಎಲೆಕ್ಟ್ರಿಕಲ್ ಬೋರ್ಡ್ ಗಳ ಬಗ್ಗೆ ಪರಿಶೀಲಿಸಿ, ಮೇ ತಿಂಗಳ ಅಂತ್ಯದೊಳಗೆ ಸಾರ್ವಜನಿಕ ಹಾನಿ ಆಗದಂತೆ ದುರಸ್ತಿ, ಮುನ್ನೆಚ್ಚರಿಕೆ ಕ್ರಮವಹಿಸಿ, ವರದಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚಿಸಿದರು.

Also read: ನಾಳೆ ಸಂಜೆವರೆಗೂ ಆದಿಉಡುಪಿಯಲ್ಲಿ ಬಾಳಗಾರು ಅಕ್ಷೋಭ್ಯ ರಾಮಪ್ರಿಯತೀರ್ಥರು
ಮಳೆ, ಗಾಳಿ, ಸಿಡಿಲು, ಗುಡುಗು ಮಿಂಚು ಇವುಗಳಿಂದ ಜೀವ ಹಾನಿ ಆಗದಂತೆ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಮಹಾನಗರಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಆಯೋಜಿಸಲು ಈಗಾಗಲೇ ಸೂಚಿಸಲಾಗಿದೆ. ಈ ಕುರಿತು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

ಸಹಾಯವಾಣಿ, ವಲಯ ಆಯುಕ್ತರ ದೂರವಾಣಿ ಸಂಖ್ಯೆಗಳನ್ನು ವ್ಯಾಪಕ ಪ್ರಚಾರ ಮಾಡಿ: ಮಳೆ, ಗಾಳಿ ಹಾಗೂ ಇತರ ಪ್ರಕೃತಿ ವಿಕೋಪದಿಂದ ತೊಂದರೆಗಳು ಉಂಟಾದಾಗ ಸಾರ್ವಜನಿಕರಿಗೆ ತಕ್ಷಣ ಸಂಪರ್ಕಿಸಲು ಅನುಕೂಲವಾಗುವಂತೆ ಮಹಾನಗರ ಪಾಲಿಕೆಯ ಎಲ್ಲ ವಲಯ ಆಯುಕ್ತರ ಮತ್ತು ಪಾಲಿಕೆಯ ಸಹಾಯವಾಣಿ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು.

ವಲಯ 5 ರ ಸಹಾಯಕ ಆಯುಕ್ತರಾಗಿ ಗಿರೀಶ್ ತಳವಾರ (ಮೊ.7795959005)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ವಾರ್ಡ್ 36,37,38,39,47,48 ಮತ್ತು 49 ಬರುತ್ತವೆ. ವಲಯ 6 ರ ಸಹಾಯಕ ಆಯುಕ್ತರಾಗಿ ಎಸ್. ಇ.ಬೇವೂರು (ಮೊ.7795959006) ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ವಾರ್ಡ್ 40,41,42,43,44,45, 46,58,59 ಮತ್ತು 61 ಬರುತ್ತವೆ. ವಲಯ 7ರ ಸಹಾಯಕ ಆಯುಕ್ತರಾದ ಚಂದ್ರಶೇಖರ ಮಾಲಿಪಾಟೀಲ್ (ಮೊ.7795959007)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 30,31,32,33,34,51,52 ಮತ್ತು 53 ಬರುತ್ತವೆ. ವಲಯ 8 ರ ಸಹಾಯಕ ಆಯುಕ್ತರಾಗಿ ಫಕ್ಕೀರಪ್ಪ ಇಂಗನಹಳ್ಳಿ (ಮೊ.7795959008)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 57,62,63,64 ಮತ್ತು 68 ಬರುತ್ತವೆ. ವಲಯ 9 ರ ಸಹಾಯಕ ಆಯುಕ್ತರಾಗಿ ಕಟಗಿ (ಮೊ.7795959009)ಆಗಿದ್ದು, ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 50,56,65 ಮಾತು 66 ಬರುತ್ತವೆ.

Also read: ಬಿರಿಯಾನಿ ಪ್ರಿಯರೇ ಎಚ್ಚರ | ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿತ್ತು 3.5 ಸೆಮೀ ಉದ್ದದ ಮಟನ್ ಮೂಳೆ
ವಲಯ 11 ರ ಸಹಾಯಕ ಆಯುಕ್ತರಾಗಿ ಜಿ.ಮನೋಜ (ಮೊ.7795959011)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 67,69,70,71,80,81 ಮತ್ತು 82 ಬರುತ್ತವೆ ವಲಯ 12 ರ ಸಹಾಯಕ ಆಯುಕ್ತರಾಗಿ ಶಂಕರಪ್ಪ ಪಾಟೀಲ್ (ಮೊ.7795959012)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 17,20,21,22,23,24,25 ಮತ್ತು 26 ಬರುತ್ತವೆ ಸಾರ್ವಜನಿಕರು ಪ್ರಕೃತಿವಿಕೋಪ ಹಾಗೂ ಇತರ ನಾಗರಿಕ ಸೌಲಭ್ಯಗಳ ಕೊರತೆ, ವ್ಯತ್ಯಯ ಉಂಟಾದಾಗ ನೇರವಾಗಿ ದೂರವಾಣಿ ಕರೆ ಮಾಡಿ ಸಂಪರ್ಕಿಸಿ, ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಹಾನಗರದ ಜನತೆ ಈ ಎಲ್ಲ ಸೌಲಭ್ಯ, ಅವಕಾಶಗಳನ್ನು ಬಳಸಿಕೊಂಡು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ಸ್ವಚ್ಛ, ಸುಂಧರ ಮತ್ತು ಸುಸಜ್ಜಿತ ನಗರವಾಗಿಸಲು ಆಯಕ್ತರಿಗೆ ಮತ್ತು ಪಾಲಿಕೆ ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಾರ್ವಜನಿಕರಿಗೆ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post