No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Monday, October 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಹುಬ್ಬಳ್ಳಿ-ಧಾರವಾಡ

ಮಳೆಗಾಲದ ಮುಂಜಾಗ್ರತೆ | ವಿವಿಧೆಡೆ ಡಿಸಿ ದಿವ್ಯಾಪ್ರಭು ಭೇಟಿ, ಪರಿಶೀಲನೆ | ಕ್ಷಿಪ್ರಪಡೆ ರಚಿಸಲು ಸೂಚನೆ

kalpa News by kalpa News
May 16, 2024
in ಹುಬ್ಬಳ್ಳಿ-ಧಾರವಾಡ
0
ಮಳೆಗಾಲದ ಮುಂಜಾಗ್ರತೆ | ವಿವಿಧೆಡೆ ಡಿಸಿ ದಿವ್ಯಾಪ್ರಭು ಭೇಟಿ, ಪರಿಶೀಲನೆ | ಕ್ಷಿಪ್ರಪಡೆ ರಚಿಸಲು ಸೂಚನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಧಾರವಾಡ  |

ಮಳೆಗಾಲ ಆರಂಭವಾದರೆ ಚರಂಡಿಯಲ್ಲಿ ಕಸ, ಕಡ್ಡಿ, ಹೂಳು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮತ್ತು ಜನಜೀವನ ಅಸ್ತವ್ಯಸ್ತಗೊಳಿಸುವ ಸಂಭಾವ್ಯ ಪ್ರದೇಶಗಳಲ್ಲಿ ಮಹಾನಗರಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯ ಮತ್ತು ಸಾರ್ವಜನಿಕರ ಅಭಿಪ್ರಾಯ ತಿಳಿಯಲು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಬೆಳಿಗ್ಗೆ ಧಾರವಾಡನಗರದ ಹಲವು ಬಡಾವಣೆ, ನಗರಗಳಿಗೆ ಸ್ವತಃ ಭೇಟಿ ನೀಡಿ, ಕಾರ್ಯಪ್ರಗತಿ ಪರಿಶೀಲಿಸಿದರು.

ಆರಂಭದಲ್ಲಿ ಬಸ್ ಡಿಪೋ ಸರ್ಕಲ್, ಬಸ್ ಡಿಪೋ ಪಕ್ಕದ ರಾಜಕಾಲುವೆ, ಮದಿಹಾಳ, ನಿಜಾಮುದ್ದಿನ ಕಾಲೋನಿ, ಎಂ.ಆರ್ ನಗರ ನಾಲಾ ಪ್ರದೇಶಗಳಿಗೆ ಭೇಟಿ ನೀಡಿ, ನಾಲಾ ಸ್ವಚ್ಛಗೊಳಿಸಿದ್ದರೂ ಕೆಲವಡೆ ಮತ್ತೆ ಸಾರ್ವಜನಿಕರು ಕಸಕಡ್ಡಿ, ಪ್ಲಾಸ್ಟಿಕ್ ಚಲ್ಲಿರುವುದನ್ನು ಗಮನಿಸಿ, ಸಾರ್ವಜನಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ತಪ್ಪಿದಲ್ಲಿ ಮಹಾನಗರ ಪಾಲಿಕೆ ನಿಯಮಾವಳಿಗಳ ಪ್ರಕಾರ ದಂಡ ವಿಧಿಸಿ, ಹೆಚ್ಚುವರಿ ಟ್ಯಾಕ್ಸ್ ಹಾಕಿ ಎಂದು ಸೂಚಿಸಿದರು.
ಅಲ್ಲಿ ನೆರೆದಿದ್ದ ಜನರಿಗೂ ತಿಳಿ ಹೇಳಿದ ಅವರು ಪ್ರತಿದಿನ ನಿಮ್ಮ ಮನೆ ಬಾಗಿಲಿಗೆ ಪಾಲಿಕೆಯಿಂದ ಕಸ, ತ್ಯಾಜ ಸಂಗ್ರಹ ಟಿಪ್ಪರ ಬರುತ್ತಿದೆ. ಆದರೂ ಕೆಲವರು ಕಸ ಚರಂಡಿಗೆ ಹಾಕುತ್ತಿರುವುದು ಸರಿಯಲ್ಲ. ಎಲ್ಲರಲ್ಲಿ ನಾಗರಿಕ ಪ್ರಜ್ಞೆ ಬೆಳೆಸಬೇಕು. ಸಾರ್ವಜನಿಕರ ಸಹಕಾರ, ನಮ್ಮ ನಗರವೆಂಬ ಹೆಮ್ಮೆ ಇದ್ದರೆ ಮಾತ್ರ ಸರಕಾರದ ಅಭಿವೃದ್ಧಿ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎಂದರು.

ನಂತರ ಜಿಲ್ಲಾಧಿಕಾರಿಗಳು, ಸಿಬಿ ನಗರ, ಭಾವಿಕಟ್ಟಿಪ್ಲಾಟ, ಬಸವನಗರ ಪ್ರದೇಶಗಳಿಗೆ ಭೇಟಿ ನೀಡಿ, ನಾಲಾ ಮತ್ತು ರಾಜಕಾಲುವೆ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ವಲಯ ಆಯುಕ್ತರಾದ ಸಂತೋಷ ಯರಂಗಳಿ, ಆನಂದ ಕಾಂಬಳೆ ಅವರು ಸ್ವಚ್ಛತಾ ಕಾರ್ಯ, ಚರಂಡಿ ದುರಸ್ತಿ ಕಾಮಗಾರಿಗಳ ಕುರಿತು ವಿವರಿಸಿದರು.
ಕ್ಷಿಪ್ರಪಡೆ (ರೆಸ್ಕ್ಯೂಟಿಂಗ್) ರಚಿಸಿ: ಮುಂಗಾರು ಪೂರ್ವ ಮಳೆಗಳಿಂದ ಮತ್ತು ಮಾನ್ಸೂನ ಮಳೆಗಳಿಂದ ಉಂಟಾಗುವ ಸಮಸ್ಯೆಗಳನ್ನು ತ್ವರೀತವಾಗಿ ಹಾಜರಾಗಿ, ಬಗೆಹರಿಸಲು ಮತ್ತು ಜನಜೀವನ ಅಸ್ತವ್ಯಸ್ತ ಆಗದಂತೆ ಮುನ್ನೆಚರಿಕೆವಹಿಸಲು ಪ್ರತಿ ವಲಯಕ್ಕೆ ಒಂದು ಕ್ಷೀಪ್ರ ಕಾರ್ಯಪಡೆ (ರೆಸ್ಕ್ಯೂಟಿಂಗ್)ಗಳನ್ನು ರಚಿಸಲು ಮತ್ತು ಈಗಾಗಲೇ ಇರುವ ಪಡೆಗಳಿಗೆ ಏರಿಯಾ ಹಂಚಿಕೆ ಮಾಡಿ, ಜನರ ದೂರು ಬಂದ ತಕ್ಷಣ ಅಟೆಂಡ್ ಮಾಡಲು ಸೂಚಿಸಿದರು.

ಹೆಸ್ಕಾಂ ಅಧಿಕಾರಿಗಳಿಂದ ನಗರದ ಪ್ರತಿ ವಿದ್ಯುತ್ ಕಂಬದ ಶೀಥಿಲತೆ, ತಂತಿಗಳು ಜೊತು ಬಿದ್ದಿರುವುದು, ಸಾರ್ವಜನಿಕರಿಗೆ ತಲುಪುವಂತೆ ಇರುವ ಮತ್ತು ಓಪನ್ ಎಲೆಕ್ಟ್ರಿಕಲ್ ಬೋರ್ಡ್ ಗಳ ಬಗ್ಗೆ ಪರಿಶೀಲಿಸಿ, ಮೇ ತಿಂಗಳ ಅಂತ್ಯದೊಳಗೆ ಸಾರ್ವಜನಿಕ ಹಾನಿ ಆಗದಂತೆ ದುರಸ್ತಿ, ಮುನ್ನೆಚ್ಚರಿಕೆ ಕ್ರಮವಹಿಸಿ, ವರದಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚಿಸಿದರು.
ನಗರದ ಮುಖ್ಯ ರಸ್ತೆ, ಪಾರ್ಕ, ಬಡಾವಣೆಗಳ ಇಕ್ಕೆಲುಗಳಲ್ಲಿ ಇರುವ ಹಳೆಯ ಮರ, ಒಣಗಿದ ಮರ, ಚಾಚಿದ ಮರದ ರೆಂಬೆಕೊಂಬೆಗಳನ್ನು ಗುರುತಿಸಿ, ಪಾಲಿಕೆಯಿಂದ ಈಗಲೇ ಕಟಾವು ಮಾಡಿ. ಬಡಾವಣೆ ನಿವಾಸಿಗಳಿಗೂ ಈ ಕುರಿತು ಮಾಹಿತಿ ನೀಡಿ, ಎಲ್ಲ ವಲಯ ಅಧಿಕಾರಿಗಳು ಜಾಗೃತಿ ಮೂಡಿಸುವ ಐಇಸಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು.

Also read: ನಾಳೆ ಸಂಜೆವರೆಗೂ ಆದಿಉಡುಪಿಯಲ್ಲಿ ಬಾಳಗಾರು ಅಕ್ಷೋಭ್ಯ ರಾಮಪ್ರಿಯತೀರ್ಥರು

ಮಳೆ, ಗಾಳಿ, ಸಿಡಿಲು, ಗುಡುಗು ಮಿಂಚು ಇವುಗಳಿಂದ ಜೀವ ಹಾನಿ ಆಗದಂತೆ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಮಹಾನಗರಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಆಯೋಜಿಸಲು ಈಗಾಗಲೇ ಸೂಚಿಸಲಾಗಿದೆ. ಈ ಕುರಿತು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

ಅತಿಯಾದ ಮಳೆ, ಮಳೆ ಪ್ರವಾಹಗಳ ಕಾರಣದಿಂದಾಗಿ ಯಾವುದೇ ಜಾನುವಾರ, ಮಾನವ ಜೀವಹಾನಿ ಆಗದಂತೆ ಮತ್ತು ಸಾರ್ವಜನಿಕ ಸ್ವತ್ತು ಹಾನಿ ಆಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಮಹಾನಗರ ಪಾಲಿಕೆ ಕರ್ತವ್ಯವಾಗಿದೆ. ಆಯುಕ್ತರು ನಿರಂತರ ನಿಗಾ, ಉಸ್ತುವರಿ ವಹಿಸಿ, ಸಾರ್ವಜನಿಕ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಹಾಯವಾಣಿ, ವಲಯ ಆಯುಕ್ತರ ದೂರವಾಣಿ ಸಂಖ್ಯೆಗಳನ್ನು ವ್ಯಾಪಕ ಪ್ರಚಾರ ಮಾಡಿ: ಮಳೆ, ಗಾಳಿ ಹಾಗೂ ಇತರ ಪ್ರಕೃತಿ ವಿಕೋಪದಿಂದ ತೊಂದರೆಗಳು ಉಂಟಾದಾಗ ಸಾರ್ವಜನಿಕರಿಗೆ ತಕ್ಷಣ ಸಂಪರ್ಕಿಸಲು ಅನುಕೂಲವಾಗುವಂತೆ ಮಹಾನಗರ ಪಾಲಿಕೆಯ ಎಲ್ಲ ವಲಯ ಆಯುಕ್ತರ ಮತ್ತು ಪಾಲಿಕೆಯ ಸಹಾಯವಾಣಿ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವಲಯ 1 ರ ಸಹಾಯಕ ಆಯುಕ್ತರಾಗಿ ಆನಂದ ಕಾಂಬಳೆ (ಮೊ:7795959001) ಆಗಿದ್ದು, ಇವರ ವಲಯ ವಲಯ ವ್ಯಾಪ್ತಿಗೆ ವಾರ್ಡ 10,11,12,15,18 ಮತ್ತು 19 ಬರುತ್ತವೆ. ವಲಯ 2 ರ ಸಹಾಯಕ ಆಯುಕ್ತರಾಗಿ ಸಂತೋಷ ಯರಂಗಳಿ (ಮೊ:7795959002) ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ವಾರ್ಡ್ 5,6,7,8 ಮತ್ತು 14 ಬರುತ್ತವೆ. ವಲಯ 3 ರ ಸಹಾಯಕ ಆಯುಕ್ತರಾಗಿ ಪ್ರಲ್ಹಾದ ರೆಡ್ಡಿ (ಮೊ:7795959003) ಆಗಿದ್ದು, ಇವರ ವಲಯ ವ್ಯಾಪ್ತಿಗೆ ವಾರ್ಡ 1,2,3,4,13 ಮತ್ತು 16 ಬರುತ್ತವೆ. ವಲಯ 4 ರ ಸಹಾಯಕ ಆಯುಕ್ತರಾಗಿ ರಮೇಶ ನೂಲ್ವಿ (ಮೊ:7795959004) ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ವಾರ್ಡ್ 27,28,28 ಮತ್ತು 35 ಬರುತ್ತವೆ.

ವಲಯ 5 ರ ಸಹಾಯಕ ಆಯುಕ್ತರಾಗಿ ಗಿರೀಶ್ ತಳವಾರ (ಮೊ.7795959005)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ವಾರ್ಡ್ 36,37,38,39,47,48 ಮತ್ತು 49 ಬರುತ್ತವೆ. ವಲಯ 6 ರ ಸಹಾಯಕ ಆಯುಕ್ತರಾಗಿ ಎಸ್. ಇ.ಬೇವೂರು (ಮೊ.7795959006) ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ವಾರ್ಡ್ 40,41,42,43,44,45, 46,58,59 ಮತ್ತು 61 ಬರುತ್ತವೆ. ವಲಯ 7ರ ಸಹಾಯಕ ಆಯುಕ್ತರಾದ ಚಂದ್ರಶೇಖರ ಮಾಲಿಪಾಟೀಲ್ (ಮೊ.7795959007)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 30,31,32,33,34,51,52 ಮತ್ತು 53 ಬರುತ್ತವೆ. ವಲಯ 8 ರ ಸಹಾಯಕ ಆಯುಕ್ತರಾಗಿ ಫಕ್ಕೀರಪ್ಪ ಇಂಗನಹಳ್ಳಿ (ಮೊ.7795959008)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 57,62,63,64 ಮತ್ತು 68 ಬರುತ್ತವೆ. ವಲಯ 9 ರ ಸಹಾಯಕ ಆಯುಕ್ತರಾಗಿ ಕಟಗಿ (ಮೊ.7795959009)ಆಗಿದ್ದು, ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 50,56,65 ಮಾತು 66 ಬರುತ್ತವೆ.
ವಲಯ 10 ರ ಸಹಾಯಕ ಆಯುಕ್ತರಾಗಿ ಜಿ. ಮನೋಜ (ಮೊ.7795959010)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 54,55,60,72,73,74, 75,76,77,78 ಮತ್ತು 79 ಬರುತ್ತವೆ.

Also read: ಬಿರಿಯಾನಿ ಪ್ರಿಯರೇ ಎಚ್ಚರ | ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿತ್ತು 3.5 ಸೆಮೀ ಉದ್ದದ ಮಟನ್ ಮೂಳೆ

ವಲಯ 11 ರ ಸಹಾಯಕ ಆಯುಕ್ತರಾಗಿ ಜಿ.ಮನೋಜ (ಮೊ.7795959011)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 67,69,70,71,80,81 ಮತ್ತು 82 ಬರುತ್ತವೆ ವಲಯ 12 ರ ಸಹಾಯಕ ಆಯುಕ್ತರಾಗಿ ಶಂಕರಪ್ಪ ಪಾಟೀಲ್ (ಮೊ.7795959012)ಆಗಿದ್ದು, ಇವರ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ 17,20,21,22,23,24,25 ಮತ್ತು 26 ಬರುತ್ತವೆ ಸಾರ್ವಜನಿಕರು ಪ್ರಕೃತಿವಿಕೋಪ ಹಾಗೂ ಇತರ ನಾಗರಿಕ ಸೌಲಭ್ಯಗಳ ಕೊರತೆ, ವ್ಯತ್ಯಯ ಉಂಟಾದಾಗ ನೇರವಾಗಿ ದೂರವಾಣಿ ಕರೆ ಮಾಡಿ ಸಂಪರ್ಕಿಸಿ, ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನಿಯಂತ್ರಣ ಕೊಠಡಿ ಸಂಪರ್ಕ ವಿವರಗಳು: ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಸಾರ್ವಜನಿಕರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಮತ್ತು ಪಾಲಿಕೆ ದೂರವಾಣಿ ಸಂಖ್ಯೆ:- 0836-2213888, 2213869, 2213886, 2213889 ಗೆ ಕರೆ ಹಾಗೂ ಮೊಬೈಲ್ ವಾಟ್ಸಪ್ ನಂ: 8277803778 ಗೆ ಪೆÇೀಟೊ, ವಿಡಿಯೋ ಕಳಿಸಬಹುದು ಅಥವಾ ಜಿ-ಮೇಲ್:hdmccontrolroom@email.com ಮೂಲಕವು ತಮ್ಮ ದೂರುಗಳನ್ನು ಕಳುಹಿಸಬಹುದು.

ಮಹಾನಗರದ ಜನತೆ ಈ ಎಲ್ಲ ಸೌಲಭ್ಯ, ಅವಕಾಶಗಳನ್ನು ಬಳಸಿಕೊಂಡು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ಸ್ವಚ್ಛ, ಸುಂಧರ ಮತ್ತು ಸುಸಜ್ಜಿತ ನಗರವಾಗಿಸಲು ಆಯಕ್ತರಿಗೆ ಮತ್ತು ಪಾಲಿಕೆ ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಾರ್ವಜನಿಕರಿಗೆ ತಿಳಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2024/05/Kumadwathi-1.mp4
https://kalpa.news/wp-content/uploads/2024/04/VID-20240426-WA0008.mp4
https://kalpa.news/wp-content/uploads/2024/04/VID-20240419-WA0018.mp4
Tags: DharwadaKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಧಾರವಾಡ
Share203Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಾಳೆ ಸಂಜೆವರೆಗೂ ಆದಿಉಡುಪಿಯಲ್ಲಿ ಬಾಳಗಾರು ಅಕ್ಷೋಭ್ಯ ರಾಮಪ್ರಿಯತೀರ್ಥರು

Next Post

ಬರಲೇ ಇಲ್ಲ ಪ್ರಜ್ವಲ್ ರೇವಣ್ಣ | ಏರ್ ಪೋರ್ಟ್’ನಲ್ಲಿ ಕಾದು ಕಾದು ಸುಸ್ತಾದ ಅಧಿಕಾರಿಗಳು

kalpa News

kalpa News

Next Post
Big Breaking: ಹಾಸನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ: ಪ್ರಜ್ವಲ್

ಬರಲೇ ಇಲ್ಲ ಪ್ರಜ್ವಲ್ ರೇವಣ್ಣ | ಏರ್ ಪೋರ್ಟ್'ನಲ್ಲಿ ಕಾದು ಕಾದು ಸುಸ್ತಾದ ಅಧಿಕಾರಿಗಳು

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL