ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಹೆಲ್ತ್ ಇನ್ಷೂರೆನ್ಸ್ ಹೊಂದಿದ್ದರೂ ಸಹ ಕ್ಲೈಂ ನಿರಾಕರಣೆ ಮಾಡಿದ ವಿಮಾ ಕಂಪೆನಿಗೆ ಜಿಲ್ಲಾ ಗ್ರಾಹಕರ ಆಯೋಗ ಬರೋಬ್ಬರಿ 3 ಲಕ್ಷ ರೂ. ದಂಡ ವಿಧಿಸಿದೆ.
ಘಟನೆಯ ಹಿನ್ನೆಲೆ:
ಹುಬ್ಬಳ್ಳಿಯ ನವನಗರದ ನಿವಾಸಿ ರುದ್ರಗೌಡ ಪಾಟೀಲ ಅವರು ಎಚ್’ಡಿಎಫ್‌ಸಿ ಜನರಲ್ ಇನ್ಸೂರೆನ್ಸ್ ಕಂಪನಿಯಿಂದ 3 ಲಕ್ಷದವರೆಗಿನ ವೈಯಕ್ತಿಕ ಅಪಘಾತ ಮತ್ತು ಆರೋಗ್ಯದ ವಿಮೆ ಪಾಲಸಿಯನ್ನು ಮಾಡಿಸಿದ್ದರು. ಪಾಲಸಿ ಚಾಲ್ತಿಯಲ್ಲಿರುವಾಗಲೇ ದೂರುದಾರರಿಗೆ ಹೃದಯ ಸಂಬಂಧಿಸಿದ ತೊಂದರೆಯಾಗಿ ಅವರು ಎಸ್’ಡಿಎಂ ನಾರಾಯಣ ಹಾರ್ಟ್ ಸೆಂಟರ್’ನಲ್ಲಿ ರೂ.3,85,250/- ಹಣವನ್ನು ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಪಡೆದಿದ್ದರು.

Also read: ಟಿಕೇಟ್ ಇದ್ದರೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಣೆ: ಸ್ಪೈಸ್ ಜೆಟ್ ಕಂಪೆನಿಗೆ ಬಿತ್ತು ದಂಡ
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ದೂರುದಾರರು ವೈಯಕ್ತಿಕ ಅಪಘಾತ ಮತ್ತು ಆರೋಗ್ಯ ವಿಮೆ ಸೌಲಭ್ಯಕ್ಕೆ ಒಳಪಟ್ಟಿದ್ದು ಅವರ ವಿಮಾ ಪಾಲಸಿ ಚಾಲ್ತಿಯಲ್ಲಿದ್ದಾಗ, ವೈದ್ಯಕೀಯ ವೆಚ್ಚದ ಹಣವನ್ನು ದೂರುದಾರನಿಗೆ ನೀಡದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.











Discussion about this post