ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶಿವಮೊಗ್ಗ ತಾಲೂಕಿನ ಹುಣಸೋಡಿನಲ್ಲಿ ಮೊನ್ನೆ ಸಂಭವಿಸಿದ ಜಿಲೆಟಿನ್ ಹಾಗೂ ಡೈನಾಮೈಟ್ ಭದ್ರಾವತಿ ತಾಲೂಕಿನ ಅಂಗರಗಂಗೆಯಿಂದ ಪೂರೈಕೆಗೊಂಡಿತ್ತು ಎಂಬ ಮಾಹಿತಿಯೊಂದು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಇಂತಹುದ್ದೊಂದು ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಅಧಿಕೃತವಾಗಿ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಹುಣಸೋಡಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಸಾವನ್ನಪ್ಪಿದ ಮಂಜುನಾಥ್ ಹಾಗೂ ಪ್ರವೀಣ್ ಎನ್ನುವವರು ಇದೇ ಅಂತರಗಂಗೆಯವರು ಎಂದು ಹೇಳಲಾಗಿದೆ. ಸ್ಪೋಟಗೊಂಡ ಪಿಕ್ ಅಪ್ ವಾಹನದಲ್ಲಿ ತುಂಬಲಾಗಿದ್ದ ಜಿಲೆಟಿನ್ ಹಾಗೂ ಡೈನಾಮೈಟ್’ಗಳನ್ನು ಅಂತರಗಂಗೆಯಿಂದಲೇ ಸಾಗಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಹರಿದಾಡುತ್ತಿದ್ದು, ಈ ಕುರಿತಂತೆ ತನಿಖೆಯಿಂದ ಸತ್ಯ ಹೊರಬರಬೇಕಿದೆ.ಇನ್ನು, ತಾಲೂಕಿನ ಪ್ರಭಾವಿ ವ್ಯಕ್ತಿಯೊಬ್ಬರು ತಮಿಳುನಾಡು ಮೂಲದಿಂದ ಇಂತಹ ಸ್ಫೋಟಕ ವಸ್ತುಗಳನ್ನು ತರಿಸಿ, ಅಬ್ಬಲಗೆರೆ ಸುತ್ತಮುತ್ತಲು ಇರುವ ಕ್ವಾರಿಗಳಿಗೆ ಪೂರೈಕೆ ಮಾಡುತ್ತಾರೆ ಎಂದು ಹೇಳಲಾಗುತ್ತಿದ್ದು, ತನಿಖೆಯ ನಂತರವಷ್ಟೇ ಮಾಹಿತಿ ಖಚಿತಗೊಳ್ಳಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post