ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಾಹಿತಿ ಹಕ್ಕು ಕಾಯ್ದೆಯ ಅಧಿಕಾರವನ್ನು ಬಳಸಿ ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಎಂಬುವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಪ್ರಶ್ನೆಯೊಂದನ್ನು ಕೇಳಿದ್ದರು. ದೇಶದ 50 ಪ್ರಮುಖ ಸಾಲ ಸುಸ್ತಿದಾರರ ಈಗಿನ ಸಾಲದ ವಿವರಗಳನ್ನು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಆರ್‌ಬಿಐ, 2019ರ ಸೆಪ್ಟಂಬರ್ 30ರ ತನಕ 68,607 ಕೋಟಿ ರೂ. ಸಾಲವನ್ನು ರೈಟ್ ಆಫ್ ಮಾಡಿರುವುದಾಗಿ ತಿಳಿಸಿತ್ತು. ರೈಟ್ ಆಫ್ ಎಂದರೆ, ಸಾಲದ ದಾಖಲೆಯನ್ನು ತಾಂತ್ರಿಕವಾಗಿ ಕಡತದಿಂದ ಹೊರಗಿಡುವುದು ಎಂದರ್ಥ. ರೈಟ್ ಆಫ್ ಎಂದರೆ ಸಾಲಮನ್ನಾ ಎಂದರ್ಥವಲ್ಲ. ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚು ಪಾರದರ್ಶಕತೆ ಮತ್ತು ಉತ್ತರದಾಯಿತ್ವ ನೀಡುವ ಕ್ರಮವೇ ಸಾಲದ ರೈಟ್ ಆಫ್..!
ಬ್ಯಾಂಕ್‌ಗಳು ತಾವು ನೀಡಿರುವ ಸಾಲದ ಮರು ವಸೂಲಾತಿ ತುಂಬಾ ಕಷ್ಟ ಎಂದು ಗಮನಕ್ಕೆ ಬಂದಾಗ ಈ ಕ್ರಮ ಕೈಗೊಳ್ಳುತ್ತವೆ. ಸುಸ್ತಿ ಸಾಲಗಳನ್ನು ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ಪ್ರತ್ಯೇಕಗೊಳಿಸಲು ’ರೈಟ್ ಆಫ್’ ಪದ್ಧತಿಯನ್ನು ಬಳಸುತ್ತವೆ. ಇದು ಲೆಕ್ಕಪತ್ರಗಳ ಅನುಕೂಲಕ್ಕಾಗಿ ಬಳಸಬಹುದಾದ ವಿಧಾನ ಮಾತ್ರ. ಇದರಿಂದ ಬ್ಯಾಂಕ್‌ಗಳಿಗೆ ತೆರಿಗೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
ಐಬಿಸಿ ಜಾರಿಯ ಪರಿಣಾಮ
ಎನ್‌ಡಿಎ ಸರಕಾರದ ಮಹತ್ವದ ಉಪಕ್ರಮ ಏನೆಂದರೆ 2016ರ ಮೇ ತಿಂಗಳಿನಲ್ಲಿ ದಿವಾಳಿತನ ಪ್ರಕ್ರಿಯೆಯ ನಿರ್ವಹಣೆ ಕುರಿತ ಇನ್‌ಸಾಲ್ವೆನ್ಸಿ ಬ್ಯಾಂಕ್ರಪ್ಟಸಿ ಕೋಡ್ (ಐಬಿಸಿ) ಅನ್ನು ಜಾರಿಗೊಳಿಸಿರುವುದು. ಕಾರ್ಪೊರೇಟ್ ವಲಯದ ಕಂಪನಿಗಳು ಹಾಗೂ ವೈಯಕ್ತಿಕ ಸಾಲಗಾರರ ಸುಸ್ತಿ ಸಾಲ ಪ್ರಕರಣಗಳನ್ನು ನಿಗದಿತ ಸಮಯದ ಚೌಕಟ್ಟಿನ ಅಡಿಯಲ್ಲಿ ವಿಲೇವಾರಿ ಮಾಡಲು ಇದರಿಂದ ಹಾದಿ ಸುಗಮವಾಯಿತು. ಸಾಲ ಮರು ವಸೂಲು ಪ್ರಕ್ರಿಯೆ ಒಂದು ಸಾಂಸ್ಥಿಕ ರೂಪ ಪಡೆಯಲು ಇದರಿಂದ ಸಾಧ್ಯವಾಯಿತು.
ಐಬಿಸಿ ಜಾರಿಯಾದ ನಂತರ ಕಾರ್ಪೊರೇಟ್ ಇನ್‌ಸಾಲ್ವೆನ್ಸಿ ರೆಸೆಲ್ಯೂಚನ್ ಪ್ರೊಸೆಸ್ (ಸಿಐಆರ್‌ಆರ್), ಫಾಸ್ಟ್ ಟ್ರ್ಯಾಕ್ ರೆಸೆಲ್ಯೂಷನ್, ಕಾರ್ಪೊರೇಟ್ ಲಿಕ್ವಿಡೇಶನ್, ಇನ್‌ಸಾಲ್ವೆನ್ಸಿ ಪ್ರೊಫೆಶನಲ್ಸ್ (ಐಪಿಎಸ್), ವಾಲಂಟರಿ ಲಿಕ್ವಿಡೇಶನ್, ಇನ್‌ಸಾಲ್ವೆಂಟರಿ ಪ್ರೊಫೆಶನಲ್ಸ್ ಎಂಟಿಟೀಸ್ (ಐಪಿಇಎಸ್), ಇನ್‌ಫಾರ್ಮೇಶನ್ ಯುಟಿಲಿಟೀಸ್ (ಐಯುಎಸ್) ಇತ್ಯಾದಿ ಸಾಲ ಮರು ವಸೂಲು ಹಾಗೂ ಇತ್ಯರ್ಥ ವ್ಯವಸ್ಥೆ ಅನುಷ್ಠಾನಕ್ಕೆ ಬಂತು. ಎನ್‌ಪಿಎಯ ತ್ವರಿತ ವಿಲೇವಾರಿಗೆ ಹಾದಿ ಸುಗಮವಾಯಿತು.
ಇದರ ಪ್ರಕಾರವೇ ಇಂಥ ಪ್ರಕರಣಗಳಿಗೆ ಸಂಬಂಧಿಸಿ ಬ್ಯಾಂಕ್‌ಗಳು ನಿರ್ದಿಷ್ಟ ಮೊತ್ತದ ಹಣವನ್ನು ಪ್ರತ್ಯೇಕವಾಗಿ ತೆಗೆದಿಟ್ಟು (ಮುನ್ನೈರ್ಪಾಟು) ಬ್ಯಾಲೆನ್ಸ್ ಶೀಟ್‌ನಿಂದ ಪ್ರತ್ಯೇಕಿಸುತ್ತವೆ.
(ಉದಾಹರಣೆಗೆ:- ರುಚಿ ಸೋಯಾ ಎಂಬುದು ಆರ್‌ಬಿಐ ಪಟ್ಟಿಯಲ್ಲಿರುವ ಮತ್ತೊಂದು ಹೆಸರು. ಬ್ಯಾಂಕುಗಳು ಅದರ ವಿರುದ್ಧ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯನ್ನು ಪ್ರಾರಂಭಿಸಿದ ನಂತರ ಕಂಪನಿಯನ್ನು ಇತ್ತೀಚೆಗೆ ಪತಂಜಲಿ ಆಯುರ್ವೇದ ವಹಿಸಿಕೊಂಡಿದೆ. ರುಚಿ ಸೋಯಾ ಖಾತೆಯಲ್ಲಿ ಬ್ಯಾಂಕುಗಳು 2,212 ಕೋಟಿ ರೂ.ಕುತೂಹಲಕಾರಿಯಾಗಿ, ಭಾರತೀಯ ಬ್ಯಾಂಕುಗಳು ಕೇವಲ ಪತಂಜಲಿಯ ಸ್ವಾಧೀನಕ್ಕೆ ಧನಸಹಾಯ ನೀಡಲಿಲ್ಲ, ದೊಡ್ಡ ಮೊತ್ತಕ್ಕೆ ಅದರ ಈಕ್ವಿಟಿ ಕೊಡುಗೆಯನ್ನು ಸಹ ಅವರು ನೀಡಿದ್ದರು.)
ಹಲವಾರು ಮಂದಿ ಸಾಲವನ್ನು ಮರುಪಾವತಿ ಮಾಡುತ್ತೇನೆ ಎಂದು ಮುಂದೆ ಬಂದಾಗ ಇಂತಹ ಸಂದರ್ಭದಲ್ಲಿ ಅವರನ್ನು ಕರೆಸಿ ಮರುಪಾವತಿ ಮಾಡಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.
ಇವೆಲ್ಲವನ್ನು ಅವಲೋಕಿಸಿದಾಗ ಇಂದಲ್ಲಾ ನಾಳೆ ವಸೂಲಿ ಆಗಿಯೇ ಆಗುತ್ತದೆ.
Source: Google and other websites and news papers
Get in Touch With Us info@kalpa.news Whatsapp: 9481252093
Discussion about this post