No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Friday, August 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ವಿಭಿನ್ನತೆ ತಾರತಮ್ಯವಲ್ಲ; ಏಕರೂಪತೆ ಏಕಾತ್ಮತೆಯಲ್ಲ

kalpa News by kalpa News
January 2, 2025
in ಆನಂದ ಕಂದ
0
ವಿಭಿನ್ನತೆ ತಾರತಮ್ಯವಲ್ಲ; ಏಕರೂಪತೆ ಏಕಾತ್ಮತೆಯಲ್ಲ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-20  |
ಜಗತ್ತಿನಲ್ಲಿರುವ ಎಲ್ಲ ದೇಶಗಳಿಗಿಂತ ಭಾರತ ದೇಶ ಬಹಳಷ್ಟು ರೀತಿಗಳಲ್ಲಿ ವಿಭಿನ್ನ. ಜನ, ಭಾಷೆ, ನಡೆ-ನುಡಿ, ಮಾಡುವ ಕೆಲಸ, ಬೆಳೆಯುವ ಬೆಳೆ, ತಿನ್ನುವ ಊಟ, ವಾತಾವರಣ ಹಾಗೂ ಆರ್ಥಿಕ ಪರಿಸ್ಥಿತಿ. ಇವೆಲ್ಲವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿ ಕಂಡು ಬರುತ್ತದೆ. ಬಹಳಷ್ಟು ಪಾಶ್ಚಿಮಾತ್ಯ ದೇಶಗಳಲ್ಲಿ ಈ ವಿಭಿನ್ನತೆ ಕಾಣುವುದಿಲ್ಲ ಹಾಗೂ ಕಂಡರೂ, ಒಂದು ಸಮಾನ ಆಯಾಮ ಕಂಡುಕೊಂಡು ಅಳೆಯುವ ಮನೋಭಾವವಿದೆ. ಇದರ ಮೂಲ ಕಾರಣ, ಸಮಾನತೆಯಲ್ಲಿ ಏಕರೂಪತೆ ಕಾಣುವ ಸಾಮಾಜಿಕ ಒತ್ತಡ.

ಉದಾಹರಣೆಗೆ: ವಿದ್ಯಾಭ್ಯಾಸದ ಪಠ್ಯಕ್ರಮವನ್ನು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮಾಡುತ್ತಾರೆಯೇ ಹೊರತು ಅವರ ಕಲಿಕೆಯ ಗ್ರಹಿಕೆಗಲ್ಲ. (ಇಂದಿನ ದಿನಗಳಲ್ಲಿ ಭಾರತವೂ ಇದಕ್ಕೆ ಹೊರತಾಗಿಲ್ಲ) ಇದರಿಂದ ಎಲ್ಲ ಮಕ್ಕಳೂ ಎಲ್ಲವನ್ನೂ ಕಲಿಯಲೇ ಬೇಕಾಗುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ. ಒಂದು ತರಗತಿಯಲ್ಲಿ 20 ಮಕ್ಕಳಿದ್ದರೆ, ಪ್ರತಿಯೊಂದು ಮಗುವಿಗೂ ಅದರದೇ ಆದ ಅಭಿರುಚಿ, ಕಲಿಕಾ ವೇಗ, ಗ್ರಹಿಕೆಯ ಸಾಮರ್ಥ್ಯವಿರುತ್ತದೆ. ಆದರೆ ಆ ರೀತಿ ಕಲಿಕೆಯ ಅನುಗುಣವಾಗಿ ಕಲಿಸಲು ಶಾಲೆಗಳಲ್ಲಿ ಬೇಕಾಗುವಂತಹ ಉಪಕರಣ, ಸಮಯ ಹಾಗೂ ಬೋಧಕರು ಇರುವುದಿಲ್ಲ.

ಕಲಿಕೆಯ ಉದ್ದೇಶವೇ ಜ್ಞಾನಾರ್ಜನೆ ಆಗಿರುವಾಗ, ಬರೀ ಮೇಲ್ನೋಟಕ್ಕೆ ಉತ್ತಮವಾಗಿ ಕಂಡುಬಂದು, ಆಳವಾದ ಚಿಂತನೆ ಹಾಗೂ ಜ್ಞಾನ ಇಲ್ಲವಾದರೆ ಏನು ಪ್ರಯೋಜನ? ಏಕರೂಪತೆ ಪ್ರಕೃತಿಯ ನಿಯಮವಲ್ಲ ಎನ್ನುವ ಮೂಲ ತತ್ವ ಇಲ್ಲಿ ಮರೆತಂತಾಗಿದೆ.ಈ ಪರಿಸ್ಥಿತಿ ನಮಗೆ ಒಂದು ಮೂಲ ಪ್ರಶ್ನೆಯ ಉತ್ತರ ಹುಡುಕುವಂತೆ ಮಾಡುತ್ತದೆ. ಭಾರತದಂತ ವಿಭನ್ನತೆಯಿಂದ ಕೂಡಿದ ದೇಶಕ್ಕೆ ಅವಶ್ಯಕವಿರುವುದು ಏಕರೂಪತೆಯೇ? ಅಥವಾ ಹಲವು ವಿಭಿನ್ನತೆಯನ್ನು ಗೌರವಿಸುವ ಏಕಾತ್ಮತೆಯೇ?

ಏಕಾತ್ಮತೆಯೆಂದರೆ ಮನುಷ್ಯನ ಅವಶ್ಯಕತೆ ಮೇರೆಗೆ ವಿವೇಚನೆ, ಬುದ್ಧಿ, ಅಂತಃಕರಣ ಹಾಗೂ ವ್ಯವಹಾರ ಜ್ಞಾನದಿಂದ ಕೊಡುವ ಪರಿಹಾರ/ಪರಿಷ್ಕಾರ. ಏಕರೂಪತೆ ಎಂದರೆ ಅವಶ್ಯಕತೆ, ಸಾಮರ್ಥ್ಯವನ್ನು ಗಮನಿಸದೇ ಎಲ್ಲರಿಗೂ ಸಾಮಾನ್ಯ ನಿಯಮವನ್ನು ಅನ್ವಯ ಮಾಡುವುದು.

ಏಕಾತ್ಮತೆಯನ್ನು ಉದಾಹರಣೆ ಸಹಿತವಾಗಿ ನಾವು ಗಮನಿಸುವುದಾದರೆ,ಹೇಗೆ ಪ್ರತಿಯೊಂದು ಜಾತಿಯ ಗಿಡಕ್ಕೆ , ಬೇರೆ ಬೇರೆ ಪ್ರಮಾಣದಲ್ಲಿ ಗೊಬ್ಬರ ನೀಡುತ್ತೇವೆಯೋ ಹಾಗೆ ಜನರಿಗೆ ಏನು ಬೇಕೋ ಅದನ್ನು ಎಷ್ಟು ಬೇಕೆಂಬ ನಿರ್ಣಯ ಮಾಡಿ ನೀಡಬೇಕಾಗುತ್ತದೆ.ಕೆಳಗಿನ ಕೆಲವು ಉದಾಹರಣೆಗಳನ್ನು ನೋಡಿದರೆ ನಮಗೆ ಇದರ ಅರ್ಥವಾಗುವುದು.

ನಾವು ಹಾಕುವ ಬಟ್ಟೆಗಳನ್ನು ನಮ್ಮ ಮೈಮಾಟಕ್ಕೆ ಅನುಗುಣವಾಗಿ ದರ್ಜಿಗೆ ಬಟ್ಟೆ ಕೊಟ್ಟು ಹೊಲಿಸಿದರೆ ಅದು ಸರಿಯಾಗಿ ಒಪ್ಪುತ್ತದೆ. ಅದೇ ನಾವು ಸಿದ್ಧ ಉಡುಪುಗಳನ್ನು ಕೊಂಡರೆ, ಆ ಬಟ್ಟೆ ನಮ್ಮ ಮೈಮಾಟಕ್ಕೆ ಒಗ್ಗದಿರಬಹುದು. ನಾವು ಚುನಾಯಿಸುವ ವ್ಯಕ್ತಿಗಳನ್ನು ಬರಿ ಮತದ ಆಧಾರವಲ್ಲದೆ ಅವರಿಗೆ ಮತ ನೀಡಿದ ಮತದಾರನ ಗುಣ, ಬುದ್ಧಿ, ಜ್ಞಾನದ ಆಧಾರದ ಮೇಲೆ ಚುನಾಯಿಸಿದಲ್ಲಿ ಒಳ್ಳೆಯ ಪ್ರಜಾ ಪ್ರತಿನಿಧಿ ದೊರೆಯುವ ಅವಕಾಶವಿದೆ.

ಈ ಯಾಂತ್ರಿಕ ಏಕರೂಪತೆಯಿಂದ, ಏಕಾತ್ಮತೆ ಸ್ವಾಭಾವಿಕತೆಗೆ ಹೋಗುವ ದಾರಿ ದೂರದ್ದು ಆದರೆ ಸಣ್ಣ ಪರಿವರ್ತನೆಗಳ ಹೆಜ್ಜೆಯ ಮೂಲಕ ಸಾಧಿಸಬಹುದು.
ಒಂದು ಸಣ್ಣ ಹೆಜ್ಜೆ ದೈನಂದಿನ ಜೀವನದಲ್ಲಿ ಮನುಷ್ಯನಿಗೆ ಬೇಕಾಗುವ ಆದಾಯ, ಹೆಮ್ಮೆ ಹಾಗೂ ಸಮ್ಮಾನವನ್ನು ತರಬಹುದು. ಉದಾಹರಣೆಗೆ: ಜನರು ದೊಡ್ಡ ಕಾರ್ಖಾನೆಯಿಂದ ಉತ್ಪನ್ನವಾದ ಸಿದ್ಧ ಉಡುಪುಗಳನ್ನು ತೊಡುವುದನ್ನು ನಿಲ್ಲಿಸಿ ದರ್ಜಿಯ ಬಳಿ ಹೋಲಿಸಿಕೊಂಡರೆ, ಸಿದ್ಧ ಉಡುಪುಗಳ ಕಾರ್ಖಾನೆ ಮುಚ್ಚಲ್ಪಡುವುದು. ದರ್ಜಿಗೆ ಕೆಲಸ ಹೆಚ್ಚುವುದು. ದರ್ಜಿಯು ಕಾರ್ಖಾನೆಗೆ ಕೆಲಸಕ್ಕೆ ಹೋಗುವ ಬದಲು ತನ್ನ ಊರಿನಿಂದ, ತನ್ನ ಮನೆಯಿಂದ, ತನ್ನ ಪರಿವಾರದೊಡನೆ ಸೇರಿ ಕೆಲಸ ಮಾಡುವನು. ಇದರಿಂದ ದರ್ಜಿ ಕಾರ್ಮಿಕನಿಂದ ಮಾಲೀಕನಾಗುವನು. ಅವನಿಗೆ ಆ ಕೆಲಸದಿಂದ ಹೆಮ್ಮೆ,ಗರ್ವ, ನೆಮ್ಮದಿ, ಮರ್ಯಾದೆ ಹಾಗೂ ಒಳ್ಳೆಯ ಆದಾಯ ಸಿಗುವುದು.ಅವನ ಹಳ್ಳಿ/ಊರು ಬೆಳೆಯುವುದು. ಜನರಿಗೆ ತಮಗೆ ಬೇಕಾದ ಬಟ್ಟೆ ದೊರಕುವುದು. ಇದರಿಂದ ಜನರು ತಮ್ಮ ಊರು ಬಿಟ್ಟು ಕೆಲಸಕ್ಕಾಗಿ ನಗರಗಳಿಗೆ ತೆರಳಿ, ನಗರಗಳ ಮೇಲಿನ ಒತ್ತಡ ಹೆಚ್ಚಿಸುವ ಕಾರ್ಯ ಕಡಿಮೆಯಾಗುವುದು. ಯಾಂತ್ರೀಕರಣದಿಂದ ಆಗುವ ಮಾಲಿನ್ಯ ತಡೆಯಬಹುದು. ಇದು ಒಂದು ಉದಾಹರಣೆಯಷ್ಟೇ.

ಈ ರೀತಿ ನಿರ್ಮಿತವಾದ ಸಮಾಜದಲ್ಲಿ, ಮೇಲ್ನೋಟಕ್ಕೆ ಕಂಡುಬರುವ ಅಸಮಾನತೆಗಳಿಗೆ ಮಹತ್ವವಿರುವುದಿಲ್ಲ. ಊರಿಗೆ ತಕ್ಕ ಸೌಲಭ್ಯ , ಊರಿನ ಪರಿಸರಕ್ಕೆ ಬೇಕಾದಂತ ಉದ್ಯಮಕ್ಕೆ ಮನ್ನಣೆ, ಕೆಲಸದ ಮನ್ನಣೆಗೆ ತಕ್ಕಂತಹ ಸಂಭಾವನೆ ಹಾಗೂ ಗುಣಮಾನ್ಯವಾದ ಮೌಲ್ಯಮಾಪನಗಳ ಮೇರೆಗೆ ಸಮೃದ್ಧ ಸಮಾಜವನ್ನು ಭಾರತದಲ್ಲಿ ನಿರ್ಮಿಸಬಹುದು. ವಿಭಿನ್ನತೆಗೆ ಮನ್ನಣೆ ಹಾಗೂ ಭಾರತಕ್ಕೆ ಸರಿಹೊಂದುವ ಸ್ವಾಭಾವಿಕವಾದ ಏಕಾತ್ಮತೆ ರೂಢಿಸಿಕೊಳ್ಳಬಹುದು.

ನಮ್ಮ ಜೀವನದಲ್ಲಿ ಏಕಾತ್ಮತೆಯನ್ನು ಒಪ್ಪಿಕೊಂಡು ಆ ರೀತಿಯ ವ್ಯವಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಏಕಾತ್ಮತೆ ಸ್ವಾಭಾವಿಕವಾದುದು ಎಂಬುದನ್ನು ಸಮಾಜಕ್ಕೆ ನಾವು ಮನವರಿಕೆ ಮಾಡಿಸಬಹುದಾಗಿದೆ. ವಿಭಿನ್ನತೆ ಸೃಷ್ಟಿಯ ನಿಯಮ ಅದನ್ನು ಮಾನವನು ತನ್ನ ಏಕರೂಪತೆಯ ಸೂತ್ರದಲ್ಲಿ ಕಟ್ಟಿ ಹಾಕಲಾರ. ಒಂದು ವೇಳೆ ಕಟ್ಟಿ ಹಾಕಿದರೂ ಅದು ಸೃಷ್ಟಿಗೆ ವಿರುದ್ಧವಾದ ಪ್ರವೃತ್ತಿಯಾಗುವುದೇ ವಿನ: ಏಕರೂಪತೆ ಎಂದೂ ಏಕಾತ್ಮತೆಯಾಗದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AnandakandaDifferenceKannada News WebsiteLatest News KannadaWestern countryಆನಂದಕಂದಪಾಶ್ಚಿಮಾತ್ಯ ದೇಶವಿಭಿನ್ನತೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಸಗೊಬ್ಬರ ಖರೀದಿಸುವಾಗ ರೈತರು ಜಾಗ್ರತೆ ವಹಿಸಬೇಕು: ಡಾ. ಗಣಪತಿ ಸಲಹೆ

Next Post

ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ

kalpa News

kalpa News

Next Post
ಕೇಂದ್ರ ಸರ್ಕಾರದ ವಿರುದ್ಧ ಫೆ.7ರಂದು ಪ್ರತಿಭಟನೆ: ಮುಖ್ಯಮಂತ್ರಿ ಸಿದ್ಧರಾಮಯ್ಯ

ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL