ರಾಧಾ ವಿಲಾಸ ಯಕ್ಷಗಾನ ನೃತ್ಯರೂಪಕ್ಕೆ ತಾರಾ ಮೌಲ್ಯ ತಂದುಕೊಟ್ಟ ಕಲಾರತ್ನ ಯಕ್ಷದಿಶಾ ಅಂಗಿಕ ಅಭಿನಯದ ಮೂಲಕ ಒಂದು ಸಂದೇಶವನ್ನು ಅಥವಾ ವಿಚಾರವನ್ನು ಭಾಷಾ ಮಾಧ್ಯಮಗಳಲ್ಲದೆ ನೃತ್ಯದ ಪ್ರಕಾರಗಳನ್ನು ಬಳಸಿಕೊಂಡು ಜನರಿಗೆ ತಲುಪಿಸಬೇಕಾದರೆ ಅಭಿನಯವೇ ಮುಖ್ಯವಾಗಿರುತ್ತದೆ.
ನಟನೆಯ ಮಾಹಿತಿ ಕಳುಹಿಸಲು ದೈಹಿಕ ಮತ್ತು ಮಾನಸಿಕ ಸ್ಥಿರತೆ ಒಳಗೊಂಡು ಸಂದೇಶ ತಲುಪಿದಾಗ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾಷೆ ಅರ್ಥವಾಗದವರಿಗೆ ಮೂಕಾಭಿನಯದ ಮೂಲಕ ವಿಚಾರವನ್ನು ಮನದಟ್ಟು ಮಾಡುವ ಕಲೆ ಈ
ನೃತ್ಯರೂಪಕವಾಗಿರುತ್ತದೆ.
ಯಾವುದೇ ಹೆಗ್ಗಳಿಕೆಗೆ ಹಿಗ್ಗದೆ ತೆಗಳುವಿಕೆಗೆ ಕುಗ್ಗದೆ ತನ್ನ ಮನಸ್ಸಿನ ಭಾವನೆಗಳನ್ನ ಹೇಳುವ ರೀತಿಯಲ್ಲಿ ಹೇಳಿ ದೃಢ ನಿಲುವನ್ನು ಹೊಂದಿ ಮನತೃಪ್ತಿಯನ್ನು ಪಟ್ಟುಕೊಂಡು ಮುನ್ನುಗ್ಗಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ರಾಧಾ ವಿಲಾಸ ಯಕ್ಷಗಾನ ನೃತ್ಯರೂಪಕ ಉತ್ತಮ ಉದಾಹರಣೆ ಇದು 110 ಪ್ರಯೋಗಗಳನ್ನು ಕಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಶಕ್ತಿ ಸ್ವರೂಪಿಣಿ ಹೆಣ್ಣು
ಭಾರತ ಮಾತೆ ಹೆಣ್ಣು
ಭೂ ಮಾತೆ ಹೆಣ್ಣು
ಪ್ರಕೃತಿ ಮಾತೆ ಹೆಣ್ಣು
ನಮ್ಮ ದೇಶದ ನದಿಗಳು ಹೆಣ್ಣು
ಶಕ್ತಿ ದೇವತೆಗಳು ಹೆಣ್ಣು
ಹೆಣ್ಣೆಂದರೆ ಸರ್ವಸ್ವ
ಹೆಣ್ಣೆಂದರೆ ಸೃಷ್ಟಿ ಮಾತೃ ಸ್ವರೂಪಿಣಿ ಹೆಣ್ಣು ಹೆಣ್ಣಿನ ಬಗ್ಗೆ ಬರೆಯಲು ಅಸಾಧ್ಯ.. ಅಖಂಡ ಬ್ರಹ್ಮಾಂಡವೇ ಒಂದು ರಹಸ್ಯ ಅಂತಹ ರಹಸ್ಯವನ್ನು ತನ್ನೊಡಳೊಳಗೆ ಬಚ್ಚಿಟ್ಟಿರುವ ಹೆಣ್ಣು ದೈವ ಸ್ವರೂಪಿ. ಇಡೀ ವಿಶ್ವದಲ್ಲೇ ಹೆಣ್ಣಿಗೆ ಉನ್ನತ ಸ್ಥಾನ ಕೊಟ್ಟಿರುವುದು ನಮ್ಮ ಪುಣ್ಯ ಭೂಮಿ ಭಾರತ. ಇಂತಹ ನೆಲದಲ್ಲಿ ಹೆಣ್ಣು ಇಂದು ಸಮಾಜದ ಮಂಚೂಣಿಯಲ್ಲಿ ಮುಂದೆ ಇದ್ದಾಳೆ. ತಾನು ಸಹ ಗಂಡಿನಂತೆ ಸಾಧಿಸಬಲ್ಲೆ ಪ್ರತಿಭೆಗೆ ಯಾವುದು ಅಡ್ಡಿ ಇಲ್ಲ ಎಂಬ ವಿಶ್ವಾಸದೊಂದಿಗೆ ಹೆಜ್ಜೆಹಾಕುತ್ತಿದ್ದಾಳೆ.
ಈಗ ವಿಚಾರಕ್ಕೆ ಬರೋಣ. ನಿಮಗೆಲ್ಲ ತಿಳಿದಿರುವ ಹಾಗೆ ಯಕ್ಷಗಾನ ಕರ್ನಾಟಕದ ಒಂದು ಜಾನಪದ ಕಲೆ. ಬಹಳ ಹಿಂದಿನಿಂದಲೂ ಯಕ್ಷಗಾನ ಕೇವಲ ಗಂಡುಕಲೆ ಎಂದು ಬಿಂಬಿತವಾಗಿತ್ತು. ಆದರೆ ಹೆಣ್ಣು ಸಹ ಯಕ್ಷಗಾನದಲ್ಲಿ ಉತ್ತುಂಗ ಸ್ಥಾನಕ್ಕೇರುವಳು ಎಂದು ಒಬ್ಬ ಹೆಣ್ಣು ಮಗಳು ತೋರಿಸಿದ್ದಾಳೆ. ಅವಳೇ ರಾಧಾ ವಿಲಾಸ ನೃತ್ಯರೂಪಕ್ಕೆ ತಾರಾ ಮೌಲ್ಯ ತಂದುಕೊಟ್ಟ ಕಲಾರತ್ನ ಯಕ್ಷದಿಶಾ.
ಸುರತ್ಕಲ್ ಚಂದ್ರಶೇಖರ ಶೆಟ್ಟಿ ಹಾಗೂ ಪ್ರಮದಶೆಟ್ಟಿಯವರ ಮಗಳಾದ ಈಕೆ, ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದವರು. ದಿಶಾ ಶೆಟ್ಟಿ ಹೆತ್ತವರ ಪ್ರೋತ್ಸಾಹದೊಂದಿಗೆ ಯಕ್ಷಗಾನದ ಕಲೆಯನ್ನು ಉಸಿರಾಗಿಸಿಕೊಂಡಳು. ಚಿಕ್ಕವಯಸ್ಸಿನಲ್ಲಿಯೇ ಅನೇಕ ಪ್ರದರ್ಶನಗಳನ್ನು ನೀಡಿ ಜನರಿಂದ ಭೇಷ್ ಎನಿಸಿಕೊಂಡು ತನ್ನ 5 ನೆಯ ವಯಸ್ಸಿನಲ್ಲಿ ಓಡ್ಡೋಲಗದ ಅಗ್ನಿಯಾಗಿ ರಂಗ ಪ್ರವೇಶಿಸಿದ ದಿಶಾ ಸಾಧನೆಯ ಮೆಟ್ಟಿಲೇರುತ್ತ ಯಕ್ಷಗಾನ ಕಲೆಯನ್ನು ವಿಶ್ವಕ್ಕೆ ಪರಿಚಯಿಸುತ್ತಾ ಸಾಗುತ್ತಿದ್ದಾಳೆ.
ಪ್ರಸ್ತುತ ಪದವಿ ಶಿಕ್ಷಣ ಪಡೆಯುತ್ತ ಜೊತೆಗೆ ಯಕ್ಷಗಾನ ಕಲೆಯಲ್ಲಿ ಮುಂದುವರಿಯತ್ತಿದ್ದಾಳೆ. ಓದಿನಲ್ಲೂ ಮುತ್ತು ಕ್ರೀಡೆಯಲ್ಲಿ ಸದಾ ಮುಂದಿರುವ ಇವಳಿಗೆ ಫೇಸ್ಬುಕ್ ಪೇಜಿನಲ್ಲಿ 27000 ಹಾಗೂ ಇಂಸ್ಟ್ರಾಗ್ರಾಂನಲ್ಲಿ 36000 ಫಾಲವರ್ಸ್ ಇದ್ದಾರೆ. ದಿಶಾ ಶೆಟ್ಟಿ ಎಂದರೆ ಎಲ್ಲಾ ಕಲಾಪ್ರಿಯರಿಗೂ ಚಿರಪರಿಚಿತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಇವರು ಯಾವ ಚಿತ್ರ ತಾರೆಯರಿಗಿಂತ ಕಡಿಮೆಯಿಲ್ಲ.
ನಿಮಗೆಲ್ಲ ಚಾರ್ಲಿ ಚಾಪ್ಲಿನ್ ಗೊತ್ತು ತಾನೆ ತನ್ನ ಮೂಕಾಭಿನಯದಿಂದ ವಿಶ್ವ ವಿಖ್ಯಾತ.. ವಿಚಾರವೇನೆಂದರೆ ಯಕ್ಷಗಾನದಲ್ಲೂ ಸಹ ಇದೇ ರೀತಿಯಲ್ಲಿ ಮೂಕಾಭಿನಯದಲ್ಲೇ ಕಥೆ ಹೇಳುವ ಒಂದು ವಿಶೇಷ ಕಲೆಯಿದೆ. ಈ ಅಪರೂಪದ ಕಲೆಯನ್ನು ಕರಗತ ಮಾಡಿಕೊಂಡಿರುವ ದಿಶಾ ಶೆಟ್ಟಿಯವರು ಈ ಕಲೆಯನ್ನು ವಿಶ್ವ ವಿಖ್ಯಾತಗೊಳಿಸುವ ನಿಟ್ಟಿನಲ್ಲಿ ಶ್ರಮ ಪಡುತ್ತಿದ್ದಾರೆ.
ಈಗ ಯಕ್ಷಯಾಮಿನಿ ಹವ್ಯಾಸಿ ಕಲಾತಂಡದ ಸದಸ್ಯೆಯಾಗಿ ಅಭಿಮನ್ಯು, ಚಂಡಮುಂಡ, ಅಶ್ವತ್ಥಾಮ, ರಾಧೆ, ಕಮಲ ಗಂಧಿನಿ, ಉಷೆ, ಶಿಶುಪಾಲ, ದೇವೇಂದ್ರ, ಸುದರ್ಶನ, ಕೃಷ್ಣ ಹೀಗೆ ಅನೇಕ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾಳೆ.
ಇದನ್ನು ಗಮನಿಸಿದ ಅನೇಕ ಪತ್ರಿಕೆ ದೃಶ್ಯ ಮಾಧ್ಯಮಗಳು ಯಕ್ಷ ದಿಶಾಳ ಕಲಾ ಸಾಧನೆಯ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿವೆ.
ದಿಶಾ ಶೆಟ್ಟಿ ಕೇವಲ ಕಲಾವಿದೆ ಮಾತ್ರವಲ್ಲ ಮಾನವೀಯತೆಯನ್ನು ತನ್ನೊಳಗೆ ತುಂಬಿಕೊಂಡಿದ್ದಾಳೆ. ತನ್ನಿಂದಾಗುವ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುತ್ತಾಳೆ. ನೇರ ನಡೆನುಡಿಯ ಸಹಕಾರ ಮನೋಭಾವ ಸಾಧಿಸಬೇಕಾದ ಛಲವುಳ್ಳ ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇದೇ ರೀತಿಯ ಯಶಸ್ಸು ಸಿಗಲಿಯೆಂದು ಆಶಿಸೋಣ.
ಇಂತಹ ಕಲಾ ಸಾಧಕಿಯನ್ನು ನಾವೆಲ್ಲ ಪ್ರೋತ್ಸಾಹಿಸಬೇಕಿದೆ. ಕಲಾರತ್ನ ಯಕ್ಷ ದಿಶಾ ಅಭಿನಯದ ರಾಧವಿಲಾಸ ನೃತ್ಯರೂಪಕ ವಿಶ್ವ ವಿಖ್ಯಾತವಾಗಲಿ ಎಂದು ನಾವೆಲ್ಲ ಹಾರೈಸೋಣ.
ಇದೇ ಮಾರ್ಚ್ 14ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಲಾರತ್ನ ಯಕ್ಷ ದಿಶಾ ಅವರಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸರ್ವ ಸದ್ಯಸರ ಪರವಾಗಿ ಹಾರ್ದಿಕ ಶುಭಾಶಯಗಳು.
ಲೇಖನ ಮತ್ತು ಚಿತ್ರಕ್ರಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post