ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್’ಡೌನ್ ಘೋಷಣೆ ಮಾಡಿರುವ ಪರಿಣಾಮ ತೊಂದರೆಗೆ ಸಿಲುಕಿರುವ ಅನಾಥರಿಗೆ ಹಾಗೂ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಮಾನವ ಹಕ್ಕುಗಳ ಕಮಿಟಿ ವತಿಯಿಂದ ನೀರು ಹಾಗೂ ಬಿಸ್ಕತ್ ವಿತರಣೆ ಮಾಡಲಾಯಿತು.
ಮಾನವ ಹಕ್ಕುಗಳ ಕಮಿಟಿ ವತಿಯಿಂದ ನಗರದಲ್ಲಿ ಸಂಚರಿಸಿ ಜೀವ ರಕ್ಷಣೆಗೆ ಸಹಕರಿಸುವ ಪೊಲೀಸ್ ಸಿಬ್ಬಂದಿಗಳಿಗೆ, ಬಸ್ ನಿಲ್ದಾಣ ಬಳಿಯಲ್ಲಿ ಊರಿಗೆ ಹೋಗಲಾಗದೇ ಕಾಯುತ್ತಿರುವ ಸುಮಾರು ಜನರಿಗೆ, ಈ ನಡುವೆ ಸ್ವಚ್ಚತೆ ಕಾಪಾಡುವ ಪಾಲಿಕೆಯ ಸಿಬ್ಬಂದಿಗಳಿಗೆ, ಮನೆ ಮಠ ಇಲ್ಲದೇ ಬೀದಿಯೇ ಬದುಕಿಗಾಸರೆಯಾಗಿ ಮಾಡಿಕೊಂಡಿರುವ ಅನಾಥರಿಗೆ ಕೈಲಾದ ನೆರವಿನ ನೀರು, ಬಿಸ್ಕತ್ ನೀಡಿದ್ದಾರೆ.
ಮಾನವ ಹಕ್ಕುಗಳ ಕಮಿಟಿಯ ಈ ಪ್ರಯೋಗಾತ್ಮಕ ತಿರುಗಾಟ ಇದಾಗಿದ್ದು, ಇದು ಕಮಿಟಿ ವತಿಯಿಂದ ಮುಂದುವರೆಯಲಿದೆ.
ಕೆ. ನಾಗರಾಜ್ ಹಾಗೂ ಹಿರಿಯ ಪತ್ರಕರ್ತ ಗಜೇಂದ್ರ ಸ್ವಾಮಿ ಇದ್ದರು.
Get in Touch With Us info@kalpa.news Whatsapp: 9481252093















