ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅರ್ಚಕರು, ಪುರೋಹಿತರು ಹಾಗೂ ವಿಪ್ರ ಬಾಂಧವರ ಕುಟುಂಬಕ್ಕೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಎಸ್. ಚಿದಾನಂದಮೂರ್ತಿ ಅವರು ಬ್ಯಾಟರಾಯನಪುರದ ಕೊಡಿಗೆಹಳ್ಳಿಯ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿತರಣೆ ಮಾಡಿದರು.
ಬಾಣಸವಾಡಿಯ ನ್ಯೂ ಬಾಲ್ಡ್’ವಿನ್ ವಿದ್ಯಾಸಂಸ್ಥೆಯ ಚೇರ್ಮನ್ ಡಾ. ವೇಣುಗೋಪಾಲ್ ಅವರ ಸಹಯೋಗದೊಂದಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗಂಗಾಧರ, ಮೋಹನ್ ರಾಜು, ನಾರಾಯಣ ಸ್ವಾಮಿ, ಮೋಹನ್, ಅಶ್ವಿನ್, ವೆಂಕಟರಮಣ ರೆಡ್ಡಿ ಹಾಗೂ ಬ್ರಾಹ್ಮಣ ಸಂಘದ ಪದಾಧಿಕಾರಿಗಳಾದ ಶಶಿರೇಖಾ ರವರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093







Discussion about this post