No Result
View All Result
“FZ Blue Flex Yamaha’s Ethanol-Ready Ride”
English Articles

FZ Blue Flex | Yamaha Brings Ethanol-Ready Innovation to Indian Roads

by kalpa News
July 13, 2026
0

Kalpa Media House  |  Bengaluru  | India Yamaha Motor (IYM) announced the launch of the FZ-Blue Flex, a significant step...

Read moreDetails
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
  • Advertise With Us
  • Grievances
  • About Us
  • Contact Us
Monday, July 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಇದು ಅನ್ನದಾನವಲ್ಲ, ದಾಸೋಹ ಯಜ್ಞ: ಭದ್ರಾವತಿಯ ಈ ಮಿಡಿದ ಹೃದಯಗಳು ನಾಡಿಗೇ ಮಾದರಿ

ಉಕ್ಕಿನ ನಗರಿಯ ಈ ಎಲ್ಲರಿಗೂ ತಾಯಿ ಭಾರತಿ ಹರಸಿ, ಅವರ ಸಂತತಿ ನೂರ್ಮಡಿಯಾಗಲಿ

kalpa News by kalpa News
May 2, 2020
in ಸಚಿನ್ ಪಾರ್ಶ್ವನಾಥ್
0
ಇದು ಅನ್ನದಾನವಲ್ಲ, ದಾಸೋಹ ಯಜ್ಞ: ಭದ್ರಾವತಿಯ ಈ ಮಿಡಿದ ಹೃದಯಗಳು ನಾಡಿಗೇ ಮಾದರಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ನಾ ’ಅನ್ನ’ದೆ
ನೀ ’ಅನ್ನ’ದೆ
ಅವ ’ಅನ್ನ’ದೆ
’ಅನ್ನ’ದ ಮುಂದೆ
ನಾವೆಲ್ಲ ಒಂದೇ

ಹುಟ್ಟಿದ ಮೊದಲ ಮಾತು ಅಮ್ಮ ಅಂದರೂ, ಕುಡಿಯೋ ಮೊದಲ ಹನಿ ಹಾಲು ಅನ್ನವೇ. ಕಟ್ಟ ಕಡೆಯ ಉಸಿರು ಎಳೆಯುವ ಮುನ್ನ ಎದೆಯ ಗೂಡೊಳಗೆ ಇನಿತು ಅನ್ನ ಇರಲೇಬೇಕು. ಅದಕ್ಕೆ ಅಲ್ಲವೇ ಅನ್ನ ಬ್ರಹ್ಮ. ಅನ್ನವೇ ದೈವ. ಹೌದು ಈಗ ಜಗತ್ತೇ ಈ ಚೀನೀ ವೈರಸ್ಸಿನ ವಿರುದ್ಧದ ಮಹಾಸಮರದಲ್ಲಿ ಹೆಣಗುತ್ತಿದೆ. ಆರೋಗ್ಯ ಹೋಗಲಿ, ಆಹಾರಕ್ಕೂ ಬಡಿದಾಡುವ ಪರಿಸ್ಥಿತಿ. ಯಾಕಾದರೂ ಬಂತೋ ಈ ಹೆಮ್ಮಾರಿ. ಅಮ್ಮ ತನ್ನ ಕಂದನ ಮುಟ್ಟುವ ಹಾಗಿಲ್ಲ, ಅಪ್ಪ ಮಗುವ ಹೆಗಲಿಗೆ ಹಾಕಿಕೊಳ್ಳುವಂತಿಲ್ಲ, ಅಜ್ಜಿ ಕೆಮ್ಮುತ್ತಾ ಕತೆ ಹೇಳುವಂತಿಲ್ಲ, ಅಜ್ಜನ ಊರಿಗೆ ಕಂದ ಓಟಕೀಳುವಂತಿಲ್ಲ.

ಉಳಿತಾಯದ ಊರುಗೋಲಲ್ಲಿ ಎಷ್ಟು ದಿನ ಬದುಕಲು ಸಾಧ್ಯ? ಅದು ಎಷ್ಟು ದಿನ ತಡೆದೀತು? ಇಡೀ ಪರಿವಾರ ಮನೆಯೊಳಗೆ ಬಂಧಿಯಾಗಿ ಕುಳಿತು ಇನ್ನೆಂತು ಬದುಕಲು ಆಗಬಹುದು? ಅಂತಹ ಸಂದರ್ಭದಲ್ಲಿ ಭದ್ರಾವತಿಯ ಒಂದಿಷ್ಟು ಹೃದಯಗಳು ಮಿಡಿದವು. ಅವರಿಗೆ ತಾವು ಸುರಕ್ಷಿತವಾಗಿ ಇರಬೇಕು ಅನ್ನಿಸಲಿಲ್ಲ, ಊರ ಚಿಂತೆ ಯಾಕೆ ಎಂದು ಕೈ ಕಟ್ಟಿ ಕೂರುವ ಮನಸಿರಲಿಲ್ಲ. ಆಗ ಹುಟ್ಟಿದ್ದು ಸಾಮೂಹಿಕ ಅನ್ನದಾನ. ಅದು ಕರುನಾಡಷ್ಟು ಜನಸಂಖ್ಯೆ ಹೊಂದಿದ ಇಟಲಿ ಕೊರೋನಾ ವೈರಸ್ಸಿಗೆ ತತ್ತರಿಸಿದ ಸಮಯ. ಭಾರತ ಪ್ರತಿ ದೇಶಗಳ ಕ್ರಮಗಳನ್ನು ಅಧ್ಯಯನ ಮಾಡಿ ಕೊನೆಗೆ ಲಾಕ್ ಡೌನ್ ಅಂತಹ ಕಠಿಣ ಕ್ರಮ ಕೈಗೊಂಡಿತು. ಆಗ ದಿನಗೂಲಿ ನೌಕರರು ಸೇರಿದಂತೆ ಹಲವು ರೀತಿಯ ಜನರು ತಮ್ಮ ಆಹಾರಕ್ಕಾಗಿ ತೊಂದರೆಗೊಳಗಾದರು. ಅದು ಇವರನ್ನು ತುಂಬಾ ಚಿಂತನೆಗೆ ಪ್ರೇರೇಪಿಸಿತು. ಹಾಗಿದ್ದಾಗ ಅನ್ನದಾನ ಮಾಡುವ ಬಯಕೆ ಉಂಟಾಯಿತು. ಅಲ್ಲಿಂದಲೇ ಆರಂಭವಾಗಿದ್ದು ಇವರ ದಾಸೋಹ ಯಜ್ಞ.

ಇಂತಹ ಮಾದರಿ ಕಾರ್ಯದ ಬಗ್ಗೆ ಅವರ ಮಾತುಗಳಲ್ಲೇ ಓದಿ:
ಹಿಂದೊಮ್ಮೆ ಮಾಜಿ ಸೈನಿಕರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಹೇಳಿದ್ದೆ. ಭದ್ರಾವತಿ ಅಷ್ಟೇ ಉಕ್ಕಿನ ನಗರಿ. ಅಲ್ಲಿರುವ ಪ್ರತಿ ಹೃದಯವೂ ಬೆಣ್ಣೆಗಿಂತ ಮೃದು. ಕಷ್ಟ ಅಂದಾಗ ದೇಶದ ಗಡಿಯಲ್ಲೂ ಭದ್ರೆಯ ನಾವಿದ್ದೇವು, ಇವತ್ತು ಅಂತಹ ಕಷ್ಟ ಬಂದಿದೆ, ಭದ್ರೆಯ ಮಕ್ಕಳು ಮತ್ತೆ ನಾವು ಗಡಿಯೊಳಗೂ ನಾವಿದ್ದೇವೆ. ಏನಾದರೂ ಅನ್ನ ತೀರದೆ ಸಾವು ಬರಬಾರದು ಅದೇ ನಮ್ಮ ಮನದ ಮಾತಾಗಿತ್ತು. ಸ್ವರ್ಣ ಟ್ರಾವೆಲ್ಸ್, ಮರ್ಚೆಂಟ್ ಅಸೋಸಿಯೇಷನ್ ಮತ್ತು ಸ್ವಯಂ ಸೇವಕರು. ಒಂದು ವಿಚಾರ ನೆನಪಿದೆ. ಇಂತಹ ಒಂದು ಘನ ಉದ್ದೇಶ ಹೊತ್ತಾಗ ಆಧಾರ ಸ್ಥಂಭಗಳ ಅವಶ್ಯಕತೆ ತುಂಬಾ ಇರುತ್ತದೆ. ಯಾರೆಲ್ಲ ಅಂತ ಯೋಚಿಸಿದರೆ ಒಂದು ದಿನವೂ ಅವರ ಕೊರತೆ ಬೀಳಲಿಲ್ಲ. ಅದು ಭದ್ರಾವತಿಯ ಹೆಮ್ಮೆಯ ಮಕ್ಕಳು ಅಂದರೆ. ಇಲ್ಲಿರುವುದು ಬರೀ ಕಬ್ಬಿಣ ಉಕ್ಕಿನ ಕಾರ್ಖಾನೆಯಲ್ಲ, ಚಿನ್ನದ ಮನದ ಜನಗಳು.

ಕೇಳಿದರೆ ಆಶ್ಚರ್ಯ ಹುಟ್ಟಿಸುವಂತೆ ಇಡೀ ದಾಸೋಹ ನಡೆದು ಹೋಯಿತು. ವಿದೇಶಗಳಿಂದ ದೇಶಕ್ಕೆ ಓಗೊಟ್ಟವರೆಷ್ಟೋ, ಪುಟ್ಟ ಉಳಿತಾಯಗಳ ಗಂಟು ಬಿಚ್ಚಿ ಕೊಟ್ಟವರೆಷ್ಟೋ, ನನ್ನಂತೆಯೇ ಅವರು ಎಂದು ಕರೆದುಕೊಟ್ಟ ವರ್ತಕರೆಷ್ಟೋ, ಇನ್ನು ಇರುಳರಿಯದೆ ದುಡಿದ ಸ್ವಯಂ ಸೇವಕರ ದಂಡು.. ಹೇಳತೀರದು ಆ ಸಂಭ್ರಮ.

ಒಟ್ಟು ಮೂವತ್ನಾಲ್ಕು ದಿನ, ಅವಿರತ ಶ್ರಮ. ಅಲ್ಲೊಂದು ಹುರುಪು, ಸಾಮಾಜಿಕ ಕಳಕಳಿಯ ಕನಸು, ಸ್ವಾರ್ಥ ರಹಿತ ಅರ್ಪಣೆ. 27 ಮಾರ್ಚ್ 2020 ನಾವೆಲ್ಲಾ ಕಲೆತು ಇಂತಹ ಕನಸಿದೆ ಎಂದಾಗ ಯಾರೂ ಇಲ್ಲ ಅನ್ನಲಿಲ್ಲ, ಹೇಗೆ ಶುರು ಮಾಡೋಣ ಎಂದವರೇ ಎಲ್ಲ. ನಮ್ಮ ಈ ಸದುದ್ದೇಶಕ್ಕೆ ಬೆನ್ನೆಲುಬಾಗಿ ಅಡುಗೆ ಭಟ್ಟರಾದ ಮುರಳಿ ಮತ್ತು ತಂಡದವರು, ಒಂದಲ್ಲ ಎರಡಲ್ಲ 7500 ಚಪಾತಿ ಮಾಡಿಕೊಟ್ಟ ಮಹಿಳಾ ಸಂಘದ ಸದಸ್ಯರು ಎಷ್ಟು ಅಂತ ಕೃತಜ್ಞತೆ ಸಲ್ಲಿಸಲು ಸಾಧ್ಯ? ಒಂದು ಮಾತಿದೆ ಒಳ್ಳೆಯ ಕಾರ್ಯಗಳನ್ನು ನಡೆಸಲು ದೇವರು ಜೊತೆ ನಿಲ್ಲುತ್ತಾರೆ ಎಂದು. ಹಾಗೆಯೇ ಆಯಿತು. ಇಲ್ಲಿರುವ ಪ್ರತಿ ಒಬ್ಬರೂ ಅಸಹಾಯಕ ನಿರಾಶ್ರಿತರಿಗೆ ದೇವರಂತೆ ಜೊತೆಯಾದರು.

ಮೇ 3, ನಮ್ಮ ದಾಸೋಹವನ್ನು ಅಂತ್ಯಗೊಳಿಸೋಣ ಅಂತ ಅಂದೇ ತೀರ್ಮಾನಿಸಿದ್ದೆವು. ಅಂತೆಯೇ ಒಟ್ಟು 38 ದಿನಗಳ ಈ ಆಹಾರ ಯಜ್ಞವನ್ನು ಮುಗಿಸುತ್ತಿದ್ದೇವೆ. ಒಟ್ಟು 225 ಕೆಜಿ ಅಕ್ಕಿಯ ಆಹಾರವನ್ನು 2300ಕ್ಕೂ ಹೆಚ್ಚಿನ ನಿರಾಶ್ರಿರಿಗೆ ನೀಡಿದ್ದೇವೆ ಎನ್ನಲು ಹೆಮ್ಮೆಯಾಗುತ್ತದೆ. ಅದಕ್ಕೆ ಹೇಳಿದ್ದು ಇದು ಬರೀ ಅನ್ನದಾನವಲ್ಲ, ಆಹಾರ ಯಜ್ಞ. ನಮ್ಮ ಸೇವೆ ನಿಂತಿರಬಹುದು. ನಮ್ಮ ಮನಗಳು ನಿಂತಿಲ್ಲ. ಸದಾ ನಿಮ್ಮ ಕಷ್ಟವನ್ನು ಕೇಳಲು ನಾವಿದ್ದೇವೆ. ಇಲ್ಲಿರುವ ಎಲ್ಲ ದಾನಿಗಳು, ಸ್ವಯಂಸೇವಕರು, ಅಡಿಗೆ ಕೆಲಸದವರು, ಮಹಿಳಾ ಸಂಘಟನೆಗಳ ಸದಸ್ಯರು ಹೀಗೆ ಪ್ರತಿಯೊಬ್ಬರೂ ತಮ್ಮ ಶಕ್ತಿ ಮೀರಿ ನಮ್ಮೊಡನೆ ನಿಂತು ಈ ಯೋಜನೆಯ ಯಶಸ್ಸಿಗೆ ಕಾರಣರಾಗಿದ್ದಾರೆ. ಧನ್ಯವಾದಗಳು. ಗಡಿಯಲ್ಲೂ ಶತ್ರುಗಳ ಬಿಟ್ಟಿಲ್ಲ, ಗಡಿಯೊಳಗೂ ಬಿಡುವುದಿಲ್ಲ. ಮಹತ್ಕಾರ್ಯದ ಪಾಲುದಾರರಾದ ನಿವೃತ್ತ ಸೈನಿಕರ ಸಂಘ, ವರ್ತಕರ ಸಂಘ ಮತ್ತು ಸ್ವರ್ಣ ಟ್ರಾವೆಲ್ಸ್ ಹಾಗೂ ಪ್ರತಿಯೊಬ್ಬ ಸ್ವಯಂ ಸೇವಕರಿಗೂ ತಾಯಿ ಭಾರತಿ ಹರಸಲಿ. ಅವರ ಪೀಳಿಗೆ ನೂರ್ಮಡಿ ಆಗಲಿ.

ಕೊರೋನಾ ತುರ್ತು ಪರಿಸ್ಥಿತಿಯಲ್ಲೂ ಸಹ ಗಡಿಯಲ್ಲಿ ನಮ್ಮ ವೀರ ಯೋಧರು ತಾಯಿ ಭಾರತಿಯನ್ನು ರಕ್ಷಿಸುತ್ತಿದ್ದಾರೆ, ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ, ಪೊಲೀಸರು ತಮ್ಮ ಕುಟುಂಬಗಳನ್ನೇ ಪಕ್ಕಕ್ಕಿಟ್ಟು ಶ್ರಮಿಸುತ್ತಿದ್ದಾರೆ, ನರ್ಸ್‌ಗಳು-ಆಶಾ ಕಾರ್ಯಕರ್ತೆಯರು-ಪೌರ ಕಾರ್ಮಿಕರು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ತ್ಯಾಗ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಹಿತಕ್ಕಾಗಿ ಕೈಜೋಡಿಸುವುದು ಎಷ್ಟು ಮುಖ್ಯವೋ, ಹಸಿದ ಹೊಟ್ಟೆಯನ್ನು ತುಂಬಿಸುವುದು ಅದಕ್ಕಿಂತಲೂ ಮುಖ್ಯ. ಇಂತಹ ಕಾರ್ಯವನ್ನು ಸತತ 38 ದಿನಗಳ ಕಾಲ ದಾಸೋಹ ಯಜ್ಞದಂತೆ ಯಶಸ್ವಿಯಾಗಿ ನಿರ್ವಹಿಸಿದ ಸ್ವರ್ಣ ಟ್ರಾವೆಲ್ಸ್‌ ಕಿಶೋರ್ ಹಾಗೂ ಸಂಗಡಿಗರು, ಮಾಜಿ ಸೈನಿಕರ ಸಂಘದ ಸದಸ್ಯರು, ಅಡುಗೆ ಮುರಳಿ ಹಾಗೂ ಸಂಗಡಿಗರು, ಇವರಿಗೆ ಸಹಕರಿಸಿದ ದಾನಿಗಳು ಸೇರಿದಂತೆ ಆಹಾರವನ್ನು ಪ್ರತಿ ವ್ಯಕ್ತಿಗೂ ತಲುಪಿಸಿದ ಪ್ರತಿಯೊಬ್ಬರಿಗೂ ತಾಯಿ ಭಾರತಿ, ತಾಯಿ ಚಾಮುಂಡೇಶ್ವರಿ ನೂರು ಕಾಲ ಸಂಮೃದ್ದಿಯಿಂದ ಬಾಳುವಂತೆ ಹರಸಲಿ ಎಂಬುದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಕೆ…


Get in Touch With Us info@kalpa.news Whatsapp: 9481252093

Tags: BhadravathiCovid19IndiaIndiaLockDownKannadaNewsWebsiteLatestNewsKannadaMalnadNewsSachin ParshwanathSteel CitySwarna TravelsSwarna Travels Bhadravathiಅನ್ನದಾನದಾಸೋಹಭದ್ರಾವತಿಸ್ವರ್ಣ ಟ್ರಾವೆಲ್ಸ್
Share209Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದಾವಣಗೆರೆಯಲ್ಲಿ ಕೊರೋನಾ ವೈರಸ್’ಗೆ ಮೊದಲ ಬಲಿ: 69 ವರ್ಷದ ವೃದ್ಧ ಸಾವು

Next Post

ಸಂಕಷ್ಟದಲ್ಲಿರುವ ಪುರೋಹಿತರಿಗೆ ದಿನಸಿ ಪದಾರ್ಥ ವಿತರಣೆ

kalpa News

kalpa News

Next Post
ಸಂಕಷ್ಟದಲ್ಲಿರುವ ಪುರೋಹಿತರಿಗೆ ದಿನಸಿ ಪದಾರ್ಥ ವಿತರಣೆ

ಸಂಕಷ್ಟದಲ್ಲಿರುವ ಪುರೋಹಿತರಿಗೆ ದಿನಸಿ ಪದಾರ್ಥ ವಿತರಣೆ

Leave a Reply Cancel reply

Your email address will not be published. Required fields are marked *

No Result
View All Result
“FZ Blue Flex Yamaha’s Ethanol-Ready Ride”
English Articles

FZ Blue Flex | Yamaha Brings Ethanol-Ready Innovation to Indian Roads

by kalpa News
July 13, 2026
0

Kalpa Media House  |  Bengaluru  | India Yamaha Motor (IYM) announced the launch of the FZ-Blue Flex, a significant step...

Read moreDetails
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL