ಬೆಂಗಳೂರು: ಅಭಿಮಾನಿಗಳು ತಮ್ಮ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದಷ್ಟೇ ನಾನು ಕೇಳಿಕೊಂಡಿದ್ದೇನೆ. ದಯವಿಟ್ಟು ಚುನಾವಣೆ ಹಾಗೂ ರಾಜಕಾರಣದಲ್ಲಿ ನನ್ನ ಹೆಸರನ್ನು ಬೆರೆಸಬೇಡಿ ಎಂದು ನಟ ಪುನೀತ್ ರಾಜ್’ಕುಮಾರ್ ಮನವಿ ಮಾಡಿದ್ದಾರೆ.
ಈ ಕುರಿತಂತೆ ಟ್ವಿಟರ್’ನಲ್ಲಿ ಮನವಿ ರಾಜ್ಯವನ್ನುದ್ದೇಶಿಸಿ ಪತ್ರವೊಂದನ್ನು ಬರೆದಿರುವ ಅವರು, ಕನ್ನಡ ಜನತೆಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಅವರ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದು ಕೇಳಿಕೊಂಡಿದ್ದೇನೆ ಹೊರತು ಯಾವುದೇ ಪಕ್ಷ ಹಾಗೂ ವ್ಯಕ್ತಿಗೆ ಎಂದಿಗೂ ಸೂಚಿಸಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ, ದೇವೇಗೌಡರ ಕುಟುಂಬವು ಹಾಗೂ ಅಂಬರೀಶ್ ಅವರ ಕುಟುಂಬವು ನಮ್ಮ ಕುಟುಂಬದ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ, ಇಬ್ಬರಿಗೂ ಒಳ್ಳೆಯದಾಗಲಿ. ಆ ಭಗವಂತ ನಿಮಗೆ ಜನಸೇವೆ ಮಾಡುವ ಶಕ್ತಿ ಇನ್ನಷ್ಟು ಕೊಡಲಿ ಎಂದು ಪ್ರಾರ್ಥಿಸುತ್ತ ತಮ್ಮ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ವಿನಂತಿಸಿದ್ದಾರೆ.
An important information to all of you 👍 pic.twitter.com/a6fIMWyPBF
— Puneeth Rajkumar (@PuneethRajkumar) March 20, 2019







Discussion about this post