ಲಂಡನ್: ಭಾರತದ ಮಹತ್ವದ ರಾಜತಾಂತ್ರಿಕ ಚಾಣಾಕ್ಷತನದಿಂದ ಲಂಡನ್’ನಲ್ಲಿ ಬಂಧನಕ್ಕೆ ಒಳಗಾಗಿರುವ ಪಿಎನ್’ಬಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿಗೆ ಜಾಮೀನು ನಿರಾಕರಣೆಯಾಗಿದ್ದು, ಮಾರ್ಚ್ 29ರವರೆಗೂ ಜೈಲಿನಲ್ಲೇ ಇರಬೇಕಿದೆ.
ಭಾರತದಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಇ.ಡಿ. ಕೋರಿಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ವಾರೆಂಟ್ ಹೊರಡಿಸಿ ನೀರವ್’ನನ್ನು ನಿನ್ನೆ ಬಂಧಿಸಲಾಗಿತ್ತು. ಆದರೆ, ಈತನಿಗೆ ಈಗ ಜಾಮೀನು ನಿರಾಕರಣೆಯಾಗಿದ್ದು ಮಾರ್ಚ್ 29ರವರೆಗೂ ಜೈಲಿನಲ್ಲೇ ಈತ ಇರಬೇಕಿದೆ.
ಭಾರತದ ಕಾನೂನಿನ ಕಣ್ಣಿಗೆ ಮಣ್ಣರೆಚಿ ತಲೆಮರೆಸಿಕೊಂಡಿರುವ ನೀರವ್ ಮೋದಿಯ ವಿರುದ್ಧ ಜಾರಿ ಮಾಡಿದ ರೆಡ್ ಕಾರ್ನರ್ ನೋಟಿಸ್ ಗೆ ಯುಕೆ ಪೂರಕವಾಗಿ ಸ್ಪಂದಿಸಿ, ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,000 ಕೋಟಿ ರೂ ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಕೂಡಲೇ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ದೇಶಬಿಟ್ಟು ಪರಾರಿಯಾಗಿದ್ದರು. ಅಲ್ಲಿಂದ ನೀರವ್ ಮೋದಿ ದೇಶ ಬಿಟ್ಟು ಓಡಿಹೋದ ಹಿನ್ನೆಲೆಯಲ್ಲಿ ಈ ವಿಚಾರವನ್ನೇ ಮೊದಲು ಮಾಡಿ ಪ್ರಧಾನಿ ನರೇಂದ್ರ ಮೋದಿ ವೈಫಲ್ಯ ಎಂದು ಪ್ರತಿಪಕ್ಷಗಳು ಅವಕಾಶ ಸಿಕ್ಕಾಗಲೆಲ್ಲಾ ಟೀಕಾಪ್ರಹಾರ ನಡೆಸುತ್ತಿದ್ದವು.
Discussion about this post