No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Thursday, February 5, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಿಮ್ಮ ಜೀವನದಲ್ಲೊಮ್ಮೆ ತಪ್ಪದೇ ತೊರವೆ ಲಕ್ಷ್ಮೀ ನರಸಿಂಹ ಸ್ವಾಮಿಯ ದರ್ಶನ ಮಾಡಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 4, 2019
in Special Articles
0
ನಿಮ್ಮ ಜೀವನದಲ್ಲೊಮ್ಮೆ ತಪ್ಪದೇ ತೊರವೆ ಲಕ್ಷ್ಮೀ ನರಸಿಂಹ ಸ್ವಾಮಿಯ ದರ್ಶನ ಮಾಡಿ
Share on FacebookShare on TwitterShare on WhatsApp

ಹೌದು… ಪೌರಾಣಿಕ ಹಿನ್ನೆಲೆಯುಳ್ಳ ದೇವಾಲಯಗಳು ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಹಲವಾರಿದ್ದು, ಇವುಗಳ ಐತಿಹ್ಯ, ವಿಶೇಷತೆ ಹಿಂದೂ ಸಂಸ್ಕೃತಿ, ಧಾರ್ಮಿಕ ಆಚರಣೆ ಹಾಗೂ ಮಹತ್ವವನ್ನು ಸಾರುತ್ತದೆ. ಅದರಂತೆ ವಿಜಯಪುರ ಜಿಲ್ಲೆಯ ತೊರವೆ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವೂ ಸಹ ಒಂದು.
ತೋರವೆಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ ವಿಜಯಪುರ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳದಲ್ಲಿ ಒಂದು. ಇದು ಐತಿಹಾಸಿಕ ದೇವಾಲಯವಾಗಿದ್ದು, ಪೌರಾಣಿಕ ಹಿನ್ನೆಲೆಯು ಇದೆ.

ದುರ್ವಾಸ ಮುನಿಗಳು ಪೂಜಿಸುತ್ತಿದ್ದರೆಂದು ಐತಿಹ್ಯವಿದೆ. ದುರ್ವಾಸರು ಕಾರಣ ನರಸಿಂಹ ಸ್ವಾಮಿಯನ್ನು ದುರ್ವಾಸಕರಾರ್ಜಿತ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ಎನ್ನಲಾಗುತ್ತದೆ. ನರಸಿಂಹ ಸ್ವಾಮಿ ಪಕ್ಕದಲ್ಲಿ ರುದ್ರ ದೇವರು ಇರುವುದರಿಂದ ರುದ್ರಾಂಗತ ಶ್ರೀಲಕ್ಷ್ಮೀನರಸಿಂಹ ಎಂದೂ ಸಹ ಕರೆಯುತ್ತಾರೆ. ಪ್ರತಿದಿನವೂ ಇಲ್ಲಿ ಪಂಚಾಮೃತ ಅಭಿಷೇಕ ಮತ್ತು ನವರಾತ್ರಿಗಳಲ್ಲಿ ವಿಶೇಷ ಉತ್ಸವ ಕಾರ್ಯಕ್ರಮಗಳು ನಡೆಯುತ್ತವೆ.

ಇಲ್ಲಿಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವರು ಭಕ್ತರ ಮನೋಕಾಮನೆಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿಯೇ ನೆರವೇರಿಸುತ್ತಿದ್ದ ಕಾರಣ ಗ್ರಾಮವನ್ನು ತ್ವರಿತಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಶಾಹಿ ಆಳ್ವಿಕೆಯ ಪೂರ್ವದಲ್ಲಿದ್ದ ದೇವಾಲಯ. ತೊರವೆ ಗ್ರಾಮವು ಆಗ ಒಂಬತ್ತು ಲಕ್ಷ ಜನಸಂಖ್ಯೆಯುಳ್ಳ ದೊಡ್ಡ ಪಟ್ಟಣವಾಗಿತ್ತು.

ಒಕ್ಕಳಮಟ್ಟಿ ನರಸಿಂಹ ದೇವರು
ಈಗಿರುವ ಶ್ರೀಲಕ್ಷ್ಮೀ ನರಸಿಂಹ ದೇವರಿಗಿಂತಲೂ ಮೊದಲು ಒಕ್ಕಳಮಟ್ಟಿ ನರಸಿಂಹ ಸ್ವಾಮಿ ದೇವರನ್ನು ಪೂಜಿಸಲಾಗುತ್ತಿತ್ತು. ಸ್ವಾಮಿಗೆ ಪ್ರತಿದಿನವೂ ನಲವತ್ತು ಕೆಜಿ ಹಯಗ್ರೀವವನ್ನು ಸ್ವಲ್ಪವು ಮಡಿಗೆ ಚ್ಯುತಿ ಬರದೆ ಸಮರ್ಪಿಸಬೇಕಿತ್ತು. ಸ್ವಲ್ಪ ಹೆಚ್ಚುಕಮ್ಮಿಯಾದರೂ ಒಕ್ಕಳಮಟ್ಟಿ ನರಸಿಂಹ ಸ್ವಾಮಿ ಶಿಕ್ಷಿಸುತ್ತಾರೆ ಎಂಬುದು ಜನರ ನಂಬಿಕೆಯಾಗಿತ್ತು.

ಅಚಾನಕ್ಕಾಗಿ ಆದ ತಪ್ಪುಗಳಿಗೂ ಶಿಕ್ಷೆಗೆ ಭಕ್ತರನ್ನು ಕಂಡು ಸ್ವತಃ ನರಸಿಂಹ ಸ್ವಾಮಿಯೇ ಮರುಕಪಟ್ಟು, ದೇವಾಲಯದಿಂದ ಹೊರಡಲು ನಿಶ್ಚಯಿಸಿದರಂತೆ. ಅರ್ಚಕರಿಗೆ ಸ್ವಪ್ನದಲ್ಲಿ ಬಂದು ತಮ್ಮನ್ನು ಗುಪ್ತಗಂಗೆಯಲ್ಲಿ ವಿಸರ್ಜನೆ ಮಾಡುವಂತೆ ಆದೇಶಿಸಿದರಂತೆ. ಅರ್ಚಕರು ಆದೇಶದಂತೆ ನಡೆದುಕೊಂಡರು.

ದೇವರ ಮೂರ್ತಿ ಪ್ರತಿಷ್ಠಾಪನೆ
ಒಕ್ಕಳಮಟ್ಟಿ ನರಸಿಂಹ ಸ್ವಾಮಿ ದೇವರನ್ನು ಗುಪ್ತಗಂಗೆಯಲ್ಲಿ ವಿಸರ್ಜನೆ ಮಾಡಿದ ನಂತರ, ಅರ್ಚಕರಿಗೆ ಬರುವ ಭಕ್ತರಿಗೆ ದೇವರು ಎಲ್ಲಿ ಎಂದರೆ ಏನು ಹೇಳಬೇಕು..?’ ಎಂಬ ಚಿಂತೆ ಕಾಡಿತು. ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಸಿದಾಗ ಸ್ವಪ್ನದಲ್ಲಿ ಕಾಣಿಸಿಕೊಂಡ ನರಸಿಂಹ ಸ್ವಾಮಿಯು, ವಿಸರ್ಜನೆ ಮಾಡಿದ ಸ್ಥಳದ ಬಳಿ ಬರುವಂತೆ ಹೇಳಿದರು. ಮರುದಿನ ಅರ್ಚಕರೆಲ್ಲ ಗುಪ್ತಗಂಗೆಯಲ್ಲಿ ಸ್ನಾನಮಾಡಿ, ತಪಸ್ಸು ಮಾಡಿದಾಗ ನರಸಿಂಹ ಸ್ವಾಮಿ ವಿಗ್ರಹವು ಮೇಲೆ ಬಂದು ನಾನು ಬರಲಾರೆ, ನನ್ನ ತಮ್ಮನನ್ನು ಕಳಿಸುವೆ. ನೀವು ಹಸಿಮೇವನ್ನು ತೆಗೆದುಕೊಂಡು ಕೃಷ್ಣತೀರದಿಂದ ದಕ್ಷಿಣಕ್ಕೆ ಹೋಗಿರಿ. ಮೇವಿಗೆ ಯಾವಾಗ ಸ್ಪರ್ಶ ಆಗುತ್ತದೆಯೋ ಅದೇ ಸ್ಥಳದಲ್ಲಿ ನನ್ನ ತಮ್ಮನಿರುತ್ತಾನೆ’ ಎಂದು ಹೇಳಿ ಗುಪ್ತಗಂಗೆಯಲ್ಲಿ ಗುಪ್ತರಾದರು. ಅರ್ಚಕರೆಲ್ಲರೂ ಮಡಿಯಿಂದ ಹಸಿಮೇವನ್ನು ಎತ್ತಿನ ಬಂಡಿಯಲ್ಲಿ ತೆಗೆದುಕೊಂಡು, ಕೃಷ್ಣ ತೀರಕ್ಕೆ ಹೊರಟರು. ಸಮೀಪದ ಚಿಮ್ಮಲಗಿ ಗ್ರಾಮದ ದೇಶಪಾಂಡೆ ವಂಶದ ಒಡೆತನದ ಜಮೀನಿನಲ್ಲಿ ಬಂದಾಗ ಮೇವಿಗೆ ಅಗ್ನಿಸ್ಪರ್ಶವಾಗುತ್ತದೆ. ಭೂಮಿಯ ಒಳಗೆ ಶ್ರೀಲಕ್ಷ್ಮೀಸಹಿತನಾಗಿರುವ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಮೂರ್ತಿಯು ಸಿಗುತ್ತದೆ. ದೇಶಪಾಂಡೆ ವಂಶಸ್ಥರ ಸ್ವಪ್ನದಲ್ಲಿ ನರಸಿಂಹ ಸ್ವಾಮಿ ಕಂಡು ಅವರೊಂದಿಗೆ ನನ್ನನ್ನು ಕಳುಹಿಸಿ, ತೋರವಿ ಗ್ರಾಮದಲ್ಲಿ ಪ್ರತಿಷ್ಟಾಪನೆಗೊಳ್ಳುವೆ’ ಎಂದು ಹೇಳಿದಾಗ, ಅರ್ಚಕರು ಹಿಂತಿರುಗಿ ತೋರವಿ ಗ್ರಾಮಕ್ಕೆ ಬಂದು, ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗೆ ಪ್ರತಿಷ್ಠಾಪನೆಗೊಂಡ, ತೋರವಿ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಮೂರ್ತಿಯು ವಿಶೇಷವಾಗಿದ್ದು, ಬಲಭಾಗದಲ್ಲಿ ಶ್ರೀಲಕ್ಷ್ಮೀ, ಎಡಭಾಗದಲ್ಲಿ ಪ್ರಹ್ಲಾದನ ಮೂರ್ತಿ ಇದೆ.

ತೋರವಿಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಿಂದ ಸ್ವಲ್ಪವೇ ದೂರದಲ್ಲಿದೆ ಗುಪ್ತಗಂಗಾ ಎಂಬ ಬಾವಿ. ಆದಿಲ್ ಶಾಹಿಯು ಪಶ್ಚಿಮ ಯುದ್ದದಲ್ಲಿ ವಿಜಯ ಸಾಧಿಸಿ ಹಿಂತಿರುಗುವಾಗ ಗಂಗೆಯು ಸುಲ್ತಾನನಿಗೆ ನಿನ್ನನ್ನು ಹಿಂಬಾಲಿಸುತ್ತೇನೆ. ಆದರೆ ನೀನು ಹಿಂತಿರುಗಿ ನೋಡಿದರೆ ಅದೇ ಸ್ಥಳದಲ್ಲಿ ನೆಲೆಸುತ್ತೇನೆ’ ಎಂದು ಉತ್ತರಿಸುತ್ತಾಳೆ. ಸುಲ್ತಾನನು ತೋರವಿ ಗ್ರಾಮ ಸಮೀಪಿಸಿದಾಗ ಕುತೂಹಲ ತಡೆಯದೆ ಹಿಂದಿರುಗಿ ನೋಡುತ್ತಾನೆ. ಗಂಗೆಯು ಅಲ್ಲಿಯೇ ನೆಲೆಸುತ್ತಾಳೆ. ಎಷ್ಟೇ ಬರಗಾಲ ಬಂದರೂ ಇಲ್ಲಿ ಮಾತ್ರ ಎಂದಿಗೂ ನೀರು ಬತ್ತುವುದಿಲ್ಲ.

ನರಹರಿ ರಚಿತ ತೋರವೆ ರಾಮಾಯಣ
ತೊರವೆಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಜಾಗೃತ ಮತ್ತು ಶಕ್ತಿಯುತವಾದ ಕ್ಷೇತ್ರ. ಇದೇ ಕ್ಷೇತ್ರದಲ್ಲಿ ನರಹರಿಯು ತೋರವೆ ರಾಮಾಯಣ ರಚಿಸುತ್ತಾರೆ. ಈ ಕೃತಿಗೆ ಶ್ರೀಕುಮಾರ ವಾಲ್ಮೀಕಿ ಕೃತಿ ಶ್ರೀ ಬಿರುದನ್ನು ಕೊಡಲಾಗುತ್ತದೆ. ಪುರಂದರದಾಸರು ಇದೇ ಕ್ಷೇತ್ರದಲ್ಲಿ ಐದಾರು ಹಾಡುಗಳನ್ನು ಬರೆದಿದ್ದಾರೆ.

(ಮಾಹಿತಿ ಕೃಪೆ: ವಾಟ್ಸಪ್ ಸ್ನೇಹಿತರು)

Tags: Hindu TempleKannada ArticleSpecial ArticleTempleToraviVijayapuraತೊರವೆ ಲಕ್ಷ್ಮೀ ನರಸಿಂಹ ಸ್ವಾಮಿದೇವಾಲಯಪುರಂದರದಾಸರುಹಯಗ್ರೀವ
Share198Tweet123Send
Previous Post

ನಿರಾಸೆಯೆಂಬುದ ಮರೆತು ಬದುಕಿ ಬಿಡೋಣವೇ

Next Post

ಕೋಟೆನಾಡಿನಲ್ಲಿ ಅದ್ಧೂರಿ ತೀಜ್ ಹಬ್ಬ, ಕುಣಿದು ಕುಪ್ಪಳಿಸಿದ ಯುವತಿಯರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕೋಟೆನಾಡಿನಲ್ಲಿ ಅದ್ಧೂರಿ ತೀಜ್ ಹಬ್ಬ, ಕುಣಿದು ಕುಪ್ಪಳಿಸಿದ ಯುವತಿಯರು

ಕೋಟೆನಾಡಿನಲ್ಲಿ ಅದ್ಧೂರಿ ತೀಜ್ ಹಬ್ಬ, ಕುಣಿದು ಕುಪ್ಪಳಿಸಿದ ಯುವತಿಯರು

Leave a Reply Cancel reply

Your email address will not be published. Required fields are marked *

  • Trending
  • Latest
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
25 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸೂಡಾ ಅಧ್ಯಕ್ಷ ಸುಂದರೇಶ್ ಗುದ್ದಲಿಪೂಜೆ

25 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸೂಡಾ ಅಧ್ಯಕ್ಷ ಸುಂದರೇಶ್ ಗುದ್ದಲಿಪೂಜೆ

February 4, 2026
ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಮಾರಿಕಾಂಬಾ ಜಾತ್ರೆ ಆಚರಿಸಿ: ಪರ್ಯಾವರಣ ಟ್ರಸ್ಟ್ ಕರೆ

ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಮಾರಿಕಾಂಬಾ ಜಾತ್ರೆ ಆಚರಿಸಿ: ಪರ್ಯಾವರಣ ಟ್ರಸ್ಟ್ ಕರೆ

February 4, 2026
ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

February 4, 2026
ನಟ ಅರ್ಜುನ್ ಕಪೂರ್ ಅವರ ‘ಸ್ಪೀಡ್ ಡೆಮನ್ಸ್ ದೆಹಲಿ’ ತಂಡದಲ್ಲಿ ಅಂತರಾಷ್ಟ್ರೀಯ ಸ್ಟಾರ್‌ಗಳ ಅಬ್ಬರ!

ನಟ ಅರ್ಜುನ್ ಕಪೂರ್ ಅವರ ‘ಸ್ಪೀಡ್ ಡೆಮನ್ಸ್ ದೆಹಲಿ’ ತಂಡದಲ್ಲಿ ಅಂತರಾಷ್ಟ್ರೀಯ ಸ್ಟಾರ್‌ಗಳ ಅಬ್ಬರ!

February 4, 2026
ವನ್ಯಜೀವಿ ಉಪಟಳಕ್ಕೆ ರೈತರು ಬಲಿ | ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಅರಣ್ಯ ಸಚಿವರಿಗೆ ಹೆಚ್‌ಡಿಕೆ ಮನವಿ

ವನ್ಯಜೀವಿ ಉಪಟಳಕ್ಕೆ ರೈತರು ಬಲಿ | ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಅರಣ್ಯ ಸಚಿವರಿಗೆ ಹೆಚ್‌ಡಿಕೆ ಮನವಿ

February 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL