ಭಾರತದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಲೈವ್ ಸ್ಯಾಟಲೈಟ್’ವೊಂದನ್ನು ಭಾರತದ ಉಪಗ್ರಹ ಕ್ಷಿಪಣಿಗಳು ಬಾಹ್ಯಾಕಾಶದಲ್ಲೇ ಧ್ವಂಸ ಮಾಡುವ ಮೂಲಕ ವಿಶ್ವದ ಬಲಿಷ್ಠ ರಾಷ್ಟ್ರಗಳ ಪೈಕಿ ನಾಲ್ಕನೆಯ ಸ್ಥಾನಕ್ಕೆ ಏರಿದೆ.
ಭಾರತ ಹಾಗೂ ಪಾಕಿಸ್ಥಾನ ಗಡಿಯಲ್ಲಿ ಯುದ್ಧದ ಕಾರ್ಮೋಡ ಇನ್ನೂ ಸರಿದಿಲ್ಲ. ಭಾರತದ ಚುನಾವಣೆ ವೇಳೆಗೆ ಏನು ಬೇಕಾದರೂ ಸಂಭವಿಸಬಹುದು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ ಮರುದಿನವೇ ಭಾರತ ಇಂತಹ ಸಾಧನೆ ಮಾಡಿರುವ ವಿಚಾರವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಮೂಲಕ ಪಾಕಿಸ್ಥಾನದ ಪ್ರಮುಖ ಗುಪ್ತ ಅಸ್ತ್ರವಾಗಿದ್ದ ಬೇಹುಗಾರಿಕಾ ಸ್ಯಾಟಲೈಟನ್ನು ಪುಡಿಗಟ್ಟುವ ಮೂಲಕ ಭಾರೀ ಹೊಡೆತ ನೀಡಲಾಗಿದೆ. ಇದರಿಂದ ಪಾಕಿಸ್ಥಾನ ಸುಮ್ಮನೆ ಕೂರಲಿದೆಯೇ? ಸಾಧ್ಯವೇ ಇಲ್ಲ…
ಒಬ್ಬ ವ್ಯಕ್ತಿ ಅಥವಾ ರಾಷ್ಟ್ರದ ವಿರುದ್ಧ ಶತ್ರುತ್ವ ಹುಟ್ಟಿದ ಮೇಲೆ ಆತನ ವಿರುದ್ಧ ಟೀಕೆ ಟಿಪ್ಪಣಿ ಮಾಡಿ, ಆತ ಬಗ್ಗುತ್ತಾನೆಯೇ ಎಂದು ನೋಡುತ್ತಾರೆ. ಅದು ಆಗದಿದ್ದರೆ ಪತ್ರ ವ್ಯವಹಾರಗಳ ಮೂಲಕ ಕದನ ನಡೆಸಲಾಗುತ್ತದೆ. ಅದೂ ಆಗದಿದ್ದರೆ, ನೇರಾ ನೇರಾ ಮಾತುಕತೆ ಅಥವಾ ಮಾತಿನ ಕದನಕ್ಕೆ ಇಳಿಯುವುದು. ಅದೂ ನಡೆಯದಿದ್ದರೆ, ಗೂಂಡಾಗಳ ಮೂಲಕ ಹೊಡೆಸುವುದು ಯತ್ನ. ಒಂದು ವೇಳೆ ಇದೂ ಆಗದೇ ಇದ್ದರೆ ಗುಂಡಿನ ದಾಳಿ ಅಥವಾ ಬಾಂಬ್ ದಾಳಿ.. ಇಂತಹ ಕೃತ್ಯಗಳನ್ನು ಸಾಮಾನ್ಯವಾಗಿ ನೈತಿಕತೆಯಿಲ್ಲದ ಶತ್ರುರಾಷ್ಟ್ರಗಳು ಮಾಡುತ್ತವೆ.
ಈಗ ಭಾರತ ಹಾಗೂ ಪಾಕಿಸ್ಥಾನದ ನಡುವಿನ ಸಂಘರ್ಷದ ಹಂತಗಳನ್ನು ನೋಡುವುದಾದರೆ, ಭಾರತ ಹೊಡೆದು ಉರುಳಿಸಿರುವ ಬೇಹುಗಾರಿಕಾ ಸ್ಯಾಟಲೈಟ್ ಪಾಕಿಸ್ಥಾನದ್ದೇ ಎಂದು ಅಧಿಕೃತ ಘೋಷಣೆ ಮಾಡದೇ ಇದ್ದರೂ, ಅದು ಚೀನಾ ಬೆಂಬಲಿತ ಪಾಕಿಸ್ಥಾನದ್ದೇ ಕೃತ್ಯ ಎಂಬುದು ತಿಳಿಯುವ ಸತ್ಯವೇ.
ಈಗ ಭಾರತದ ವಿರುದ್ಧ ಪಾಕ್ ಇದ್ದ ಅತ್ಯಾಧುನಿಕ ತಂತ್ರಜ್ಞಾನದ ವಾಮಮಾರ್ಗವನ್ನು ನಮ್ಮ ಪಡೆಗಳು ಹೊಡೆದು ಉರುಳಿಸಿರುವ ಹಿನ್ನೆಲೆಯಲ್ಲಿ ಆ ರಾಷ್ಟ್ರಕ್ಕೆ ದೊಡ್ಡ ಮರ್ಮಾಘಾತವೇ ಆಗಿದೆ. ಇದರಿಂದ ಅದು ಸುಮ್ಮನೆ ಹಿಂದಕ್ಕೆ ಸರಿದು, ಮೌನವಾಗಲಿದೆಯೇ? ಸಾಧ್ಯವೇ ಇಲ್ಲ. ಪಾಕಿಸ್ಥಾನದ ನೀಚ ಬುದ್ದಿಯನ್ನು ಕಂಡಿರುವ ಯಾರೂ ಸಹ ಇದನ್ನು ಹೇಳುವುದಿಲ್ಲ. ಹಾಗಾದರೇ, ಪಾಕ್ ಮುಂದೆ ಏನು ಮಾಡಬಹುದು? ಎಂತ ಕೃತ್ಯಗಳಿಗೆ ಕೈ ಹಾಕಬಹುದು?
ಎಂಬ ವಿಚಾರವನ್ನು ಜ್ಯೋತಿಷ್ಯದ ಆಯಾಮದಲ್ಲಿ ನೋಡಲು ಮುಂದಾಗಿ ಖ್ಯಾತ ಜ್ಯೋತಿಷಿ ಜ್ಯೋರ್ತಿವಿಜ್ಞಾನಂ ಪ್ರಕಾಶ್ ಅಮ್ಮಣ್ಣಾಯ ಅವರ ಅಭಿಪ್ರಾಯವನ್ನು ಕೇಳಲಾಯಿತು. ಅವರು ಹೇಳಿದ್ದಿಷ್ಟು:
ಎಪ್ರಿಲ್ 7ರಿಂದ 25ರವರೆಗೂ ಕುಜನ ರೋಹಿಣಿ ನಕ್ಷತ್ರ ಸಂಚಾರ ಕಾಲದಲ್ಲಿ ದೇಶದ ವಿರುದ್ಧ ಶತ್ರು ರಾಷ್ಟ್ರಗಳ ಅಪಾಯದ ಹೆಜ್ಜೆಯನ್ನಿಡುವ ಸಾಧ್ಯತೆಯು ಗೋಚರಿಸುತ್ತಿದೆ. ಇಂತಹುದ್ದೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲದೇ ಇದ್ದರೂ, ಈ ಅವಧಿಯಲ್ಲಿ ದೊಡ್ಡ ಘಟನೆಗಳು ನಡೆಯುವ ಸಾಧ್ಯತೆಯನ್ನಂತೂ ತಳ್ಳಿಹಾಕುವಂತಿಲ್ಲ.
ಇನ್ನು, ಪ್ರಧಾನಿಯವರು ಇಂದು ಹೇಳಿರುವ ವಿಚಾರಗಳ ಹಿನ್ನೆಲೆಯಲ್ಲಿ ವಿಮರ್ಷೆ ಮಾಡುವುದಾದರೆ: ಕೃತ ಯುಗದಲ್ಲಿ ದೇವ ದಾನವರ ಯುದ್ಧ ನಡೆದದ್ದು ಭೂಮಿಯ ಮೇಲೆ ಅಲ್ಲ. ಅಂಬರದಲ್ಲಿ ನಡೆದದ್ದು. ಇದು ಯಾವ ಊಹೆಗೂ ನಿಲುಕದ ತಂತ್ರಜ್ಞಾನ.
ಈ ಬಗ್ಗೆ ನಾನು ಕೆಲ ವರ್ಷದ ಹಿಂದೆ ಲೇಖನವನ್ನೂ ಬರೆದಿದ್ದೆ. ಇದಕ್ಕೆ ಉದಾಹರಣೆ: ತಾರಕಾಸುರ ವಧೆ, ಶುಂಭ ನಿಶುಂಭರು, ಮಹಿಷಾಸುರ ವಧೆ, ರಕ್ತಬೀಜರು ಇತ್ಯಾದಿ. ಕೊಲ್ಲೂರು ಕ್ಷೇತ್ರ, ಕಟೀಲು, ಪೊಳಲಿ, ಕುಕ್ಕೇ ಸುಬ್ರಹ್ಮಣ್ಯ ಇತ್ಯಾದಿ ಪುರಾತನ ಪೌರಾಣಿಕ ಕ್ಷೇತ್ರಗಳು ಇದೇ ದೇವ ದಾನವರ ಅಂಬರದ ಸಮರದ ಪ್ರತೀಕಗಳು. ಗಂಜೀ ಸಾಹಿತಿಗಳು ಇದನ್ನು ಕಪೋಲ ಕಲ್ಪಿತ ಎಂದು ಗೇಲಿ ಮಾಡಬಹುದು. ಆದರೆ ಸತ್ಯಾಂಶ ಬಲ್ಲವರಿಗೆ ಮಾತ್ರ ಗೊತ್ತು.
It is one kind of star war. ಈ ಘಟನೆಯಿಂದ ಹಿಂದೆ ಹೇಗೆ ನಡೆದಿರಬಹುದು ಎಂಬ ಕಲ್ಪನೆ ಬರಬಹುದು. ಆದರೆ ಇದಕ್ಕಿಂತಲೂ ಸಾವಿರ ಪಟ್ಟು ದೊಡ್ಡ ತಂತ್ರಜ್ಞಾನ ಆಗ ಇತ್ತು. ಇದು ಅದಕ್ಕೆ ಹೋಲಿಕೆಯಾಗದೆ ಇದ್ದರೂ, ಕಲ್ಪನೆ ಮಾಡಲು ಸಹಕಾರಿಯಾಗಿದೆ.
ಇದೇ ಆಯಾಮದಲ್ಲಿ ನೋಡುವುದಾದರೆ ಅತ್ಯಂತ ಮಹತ್ವ ಕಾರ್ಯ ಮೋದಿಯವರ ನೇತೃತ್ವದಲ್ಲಿ ಈಗ ನಡೆದಿದೆ. ಭಾರತದ ಸುರಕ್ಷೆಗೆ ಬಹಳ ಪ್ರಾಮುಖ್ಯತೆ ನೀಡಿದ ಕೆಲಸವಿದು. ಆದರೆ ಶತ್ರುಗಳು ಇದರಿಂದ ಕೆರಳಬಹುದು. ಚುನಾವಣೆ ನಡೆಯದಂತೆಯೂ ಮಾಡಬಹುದು. ಆದರೆ ಇದನ್ನೆಲ್ಲ ಗಮನಿಸಿಕೊಂಡೇ ಈ ಕಾರ್ಯ ಯಶಸ್ವಿಯಾಗಿದೆ.
Discussion about this post