ಐದು ವರ್ಷ, ಐನೂರು ಸಂಕಟಗಳು, ಐದು ಸಾವಿರ ವಾದ ವಿವಾದಗಳು… ಹೀಗೆ ಪ್ರಾಸಬದ್ದಬದ್ದವಾಗಿ ಹೇಳಬಹುದು… ಇದು ರಾಜ್ಯದಲ್ಲಿ ಐದು ವರ್ಷ ಆ(ದುರಾ)ಡಳಿತ ನಡೆಸಿದ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯ ಹಿಂದೂಗಳ ಪರಿಸ್ಥಿತಿ…
ಸಾಲು ಸಾಲು ಹಿಂದೂಗಳ ಹತ್ಯೆ, ಹಿಂದೂಗಳ ಸವಲತ್ತು ಕಡಿತ, ಹಿಂದೂ ಆಚರಣೆಗಳಿಗೆ ನಿರ್ಬಂಧ, ಗಣೇಶೋತ್ಸವ ಆಚರಣೆಗೆ ಲಕ್ಷಗಟ್ಟಲೆ ಬಾಂಡ್ ಭದ್ರತೆ ನಿಯಮ, ಹಿಂದೂ ದೇವಾಲಯಗಳಿಗೆ ಅನ್ಯಾಯ ಹೀಗೆ ಹಿಂದೂ ಧರ್ಮದ ಮೇಲೆ ನೂರಾರು ವಿಷಬಾಣ ಪ್ರಯೋಗಗಳು ಹಿಂದಿನ ಸರ್ಕಾರ ಅವಧಿಯಲ್ಲಿ ನಡೆಯಿತು.
ಇವೆಲ್ಲಕ್ಕೂ ಚುನಾವಣೆ ಸರಿಯಾದ ಉತ್ತರವಾಗುತ್ತದೆ ಎಂದು ಎಣಿಸಲಾಗಿತ್ತು. ಆದರೆ, ಚುನಾವಣೆಗೂ ಮುನ್ನ ಹೈ ರಾವಣ, ಹೊಯ್ ರಾವಣ ಎಂಬಂತೆ ಹೊಡೆದಾಡಿದ್ದರೂ ಅತಂತ್ರ ಫಲಿತಾಂಶದ ಲಾಭ ಪಡೆದ ಕಾಂಗ್ರೆಸ್-ಜೆಡಿಎಸ್ ಪ್ರಜಾತಂತ್ರಕ್ಕೆ ವಿರುದ್ಧವಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿವೆ. ಈ ಅಕ್ರಮ ಮೈತ್ರಿ ಸರ್ಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದಾದರೂ ಹಿಂದೂಗಳಿಗೆ ನ್ಯಾಯ ದೊರೆಯಬಹುದೇನೋ ಎಂದು ಜನರು ನಿರೀಕ್ಷಿಸಿದ್ದರು. ಆದರೆ, ತಮ್ಮನ್ನು ಮುಖ್ಯಮಂತ್ರಿಯಾಗಿ ಮಾಡಿದ(ಅವರೇ ಹೇಳಿದಂತೆ ಅವರನ್ನು ಜನ ಮುಖ್ಯಮಂತ್ರಿ ಮಾಡಿಲ್ಲ, ಕಾಂಗ್ರೆಸ್ ಋಣದಲ್ಲಿ ಆಗಿದ್ದಾರೆ.) ಕಾಂಗ್ರೆಸ್ ಋಣ ತೀರಿಸಲು ಕುಮಾರಸ್ವಾಮಿ ನಿರ್ಧಾರ ಮಾಡಿಕೊಂಡಂತಿದೆ.
ಇಂತಹುದ್ದೊಂದು ಬೆಳವಣಿಗೆ ಬೆಂಗಳೂರಿನಲ್ಲಿ ನಡೆದಿದೆ. ಈ ಬಾರಿ ಗಣೇಶೋತ್ಸವಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲು ತೆರಿಗೆ ನೀಡಬೇಕಂತೆ! ಹಾಗೆಂದು ಬಿಬಿಎಂಪಿ ಮೇಯರ್ ಹೇಳಿದ್ದಾರಂತೆ!
ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವವರು ಒಂದು ಚದರಡಿಗೆ 10 ರೂ.ನಂತೆ ನೆಲ ಬಾಡಿಗೆ ನೀಡಬೇಕಂತೆ! ಇಲ್ಲದೇ ಹೋದಲ್ಲಿ ಅಂತಹ ಗಣೇಶನನ್ನು ಸೀಜ್ ಮಾಡುತ್ತಾರಂತೆ!
ನೀವೇನು ಸರ್ವಾಧಿಕಾರಿಗಳೇನ್ರಿ? ನಿಮ್ಮನ್ನು ನೀವು ಏನಂದುಕೊಂಡಿದ್ದೀರಿ? ಚುನಾವಣೆಯಲ್ಲಿ ಗೆದ್ದು ಅಧಿಕಾರಲ್ಲಿ ಕುಳಿತ ಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದೀರಾ? ಮೊದಲನೆಯದಾಗಿ ನೆಲ ಬಾಡಿಗೆ ಪಡೆಯುತ್ತೇವೆ ಎನ್ನುವುದೇ ತಪ್ಪು, ಅಂತಹುದರಲ್ಲಿ ಗಣೇಶನನ್ನು ಸೀಜ್ ಮಾಡುತ್ತೇನೆ ಎನ್ನುವುದು ಹಿಂದೂಗಳ ಭಾವನೆಯ ಜೊತೆಯಲ್ಲಿ ಹುಡುಗಾಟವಾಡಿದಂತೆ ಎನ್ನುವ ಕನಿಷ್ಠ ಭಾವನೆ ಇಲ್ಲವೇ?
ಆಗಲಿ.. ಸಾರ್ವಜನಿಕ ಗಣೇಶೋತ್ಸವಕ್ಕೆ ಈ ರೀತಿ ತೊಂದರೆ ಮಾಡುವ ನಿರ್ಧಾರಗಳನ್ನು ಕೈಗೊಳ್ಳುವ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್-ಜೆಡಿಎಸ್ ವ್ಯಕ್ತಿಗಳಿಗೆ ಇದೇ ರೀತಿಯ ನಿರ್ಬಂಧಗಳನ್ನು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗಳಿಗೆ ವಿಧಿಸಲು ಸಾಧ್ಯವೇ? ಅಂತಹ ಧೈರ್ಯವಿದೆಯೇ?
ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಮಾತನಾಡುವ ನಿಮಗೆ ರಂಜಾನ್ ಹಬ್ಬದಲ್ಲಿ ಸಾರ್ವಜನಿಕ ರಸ್ತೆಗಳನ್ನು ಬಂದ್ ಮಾಡಿ ಸಾವಿರಾರು ಮಂದಿ ನಮಾಜ್ ಮಾಡುವುದು ಕಾಣುವುದಿಲ್ಲವೇ? ಅವರನ್ನು ತಡೆಯುವ ತಾಕತ್ತು ನಿಮಗಿದೆಯೇ? ನೀವೇ ಸ್ವಯಂ ಮುಂದಾಗಿ ಅವರಿಗೆ ರಸ್ತೆಯಲ್ಲಿ ಸಾಮೂಹಿಕ ನಮಾಜ್ ಮಾಡಲು ಸಕಲ ವ್ಯವಸ್ಥೆ ಮಾಡಿಕೊಡುತ್ತೀರಿ. ಹಿಂದೂಗಳ ವಿಚಾರದಲ್ಲಿ ಏಕೆ ಅಂತಹ ಕಾಳಜಿಯಿಲ್ಲ ನಿಮಗೆ?
ನೀವು ಗಣೇಶೋತ್ಸವಕ್ಕೆ ಈ ರೀತಿ ನಿರ್ಬಂಧಗಳನ್ನು ಹಾಗೂ ತೆರಿಗೆ ವಿಧಿಸುವ ಕೃತ್ಯವನ್ನು ಮಾಡುವುದೇ ಆದರೆ ಅದನ್ನು ಆ ಧರ್ಮದವರಿಗೂ ಮಾಡಿ.. ಆ ಧೈರ್ಯ ನಿಮಗಿದೆಯೇ? ಇಲ್ಲ… ಯಾಕೆ ಹೇಳಿ? ವೋಟ್ ಬ್ಯಾಂಕ್..
ನಾವು ಹಿಂದೂಗಳು ಎಲ್ಲ ಧರ್ಮವನ್ನೂ ಗೌರವಿಸುತ್ತೇವೆ, ಎಲ್ಲ ಧರ್ಮದವರಿಗೂ ನಮ್ಮ ದೇಶದಲ್ಲಿ ಸಮಾನ(ಸ್ವಲ್ಪ ಹೆಚ್ಚಿಗೆಯೇ) ಅವಕಾಶ ನೀಡಿದ್ದೇವೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ನಮ್ಮ ಮೇಲೆ ಸವಾರಿ ಮಾಡಿದರೂ ಸುಮ್ಮನಿರುತ್ತೇವೆ ಎಂದಲ್ಲ.
ನಾವು ಹೇಳುವುದಿಷ್ಟೇ… ರಸ್ತೆಯಲ್ಲಿ ನಮಾಜ್ ಮಾಡಲು ನೀವು ಯಾವುದೇ ರೀತಿಯ ನಿರ್ಬಂಧ ಹೇರುವುದಿಲ್ಲ ಎಂದಾದರೆ, ನಮ್ಮ ಆಚರಣೆಗಳಿಗೂ ನಿರ್ಬಂಧಗಳನ್ನು ತರಬೇಡಿ. ಅವರೂ ಮಾಡಿಕೊಳ್ಳಲಿ, ನಾವೂ ಮಾಡಿಕೊಳ್ಳುತ್ತೇವೆ. ಅವರಿಗೆ ಹಾಗೆ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿಕೊಳ್ಳಬೇಕಾ? ಮಾಡಿಕೊಳ್ಳಲಿ… ಅಂದು ನಾವು ಸಹಕರಿಸುತ್ತೇವೆ.. ಹಾಗೆಯೇ, ಹಿಂದೂಗಳಿಗೂ ಸಹ ಗಣೇಶೋತ್ಸವದಲ್ಲಿ ನಿರ್ಬಂಧಗಳನ್ನು ಹೇರದೇ ನೀವೂ ಸಹಕರಿಸಿ… ನೀವು ಹೇಳುವ ಜಾತ್ಯತೀತ ಪದಕ್ಕೆ ಅರ್ಥ ಬರುವಂತೆ ನಡೆದುಕೊಳ್ಳಿ.
ಅದರ ಬದಲಾಗಿ ಹಿಂದೂ ಧರ್ಮವನ್ನು ಮಾತ್ರ ಟಾರ್ಗೆಟ್ ಮಾಡಿ ಇಂತಹ ಕೃತ್ಯಗಳನ್ನು ನಿರ್ಧಾರಗಳನ್ನು ಕೈಗೊಂಡಿದ್ದೇ ಆದಲ್ಲಿ ಅದಕ್ಕೆ ತಕ್ಕ ಪ್ರತಿಫಲವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸುತ್ತೀರಿ.
Discussion about this post