ಕಲ್ಪ ಮೀಡಿಯಾ ಹೌಸ್
ಸೊರಬ: ತಾಲೂಕಿನ ಪಿಡಬ್ಲ್ಯೂಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು 6 ಹಾಗೂ 7ನೆಯ ತರಗತಿಯ ವಿದ್ಯಾರ್ಥಿಗಳನ್ನು ವಿಶೇಷ-ವಿಭಿನ್ನವಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಇಡಿಯ ಶಾಲೆಯನ್ನು ನವವಧುವನಿಂತೆ ಸಿಂಗರಿಸಿದ್ದರು. ಶಾಲೆಗೆ ಆಗಮಿಸಿದ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಹೂಮಳೆ ಸುರಿಸಿ, ಗುಲಾಬಿ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು.
ಕೊರೋನಾ 3ನೆಯ ಅಲೆ ಭೀತಿಯ ಮುನ್ನೆಚ್ಚರಿಕೆ ನಡುವೆಯೇ ಇಂದಿನಿಂದ 6-7ನೆಯ ತರಗತಿಗಳು ಆರಂಭವಾಗಿದ್ದು, ಮಕ್ಕಳು ಹಾಗೂ ಪೋಷಕರಲ್ಲಿ ಆತಂಕ ಇದ್ದೇ ಇದೆ. ಇಂತಹ ಆತಂಕವನ್ನು ದೂರ ಮಾಡಿ, ಮಕ್ಕಳು ಹಾಗೂ ಪೋಷಕರಲ್ಲಿ ಸಂತಸ, ಸಂಭ್ರಮ ಹಾಗೂ ಆತ್ಮವಿಶ್ವಾಸವನ್ನು ಮೂಡಿಸುವುದು ಅತ್ಯಂತ ಮುಖ್ಯವಾದುದು. ಇದು ಸಾಧ್ಯವಾದಾಗ ಮಾತ್ರ ಮಕ್ಕಳು ಏಕಾಗ್ರತೆಯಿಂದ ಕಲಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಈ ಶಾಲೆಯ ಎಸ್’ಡಿಎಂಸಿ, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರ ಕಾರ್ಯ ನಿಜಕ್ಕೂ ಮಾದರಿಯಾದುದು.
ಈ ಸಂದರ್ಭದಲ್ಲಿ ಎಸ್’ಡಿಎಂಸಿ ಅಧ್ಯಕ್ಷರಾದ ಏಕಾಂತ, ಉಪಾಧ್ಯಕ್ಷರಾದ ದೀಪ, ಮುಖ್ಯ ಶಿಕ್ಷಕರಾದ ಎಸ್. ಕೃಷ್ಣಾನಂದ, ಬಿ.ಆರ್.ಸಿ ಸಂಪನ್ಮೂಲ ವ್ಯಕ್ತಿಗಳಾದ ಸವಿತಾ, ಚಂದ್ರಶೇಖರ್, ಡಿ. ಮಂಜಪ್ಪಡ, ಎಸ್’ಡಿಎಂಸಿ ಸದಸ್ಯರಾದ ಶೇಷಗಿರಿ, ಹಜರತ್ ಅಲಿ, ಪ್ರಭಾಕರ್, ರಾಜಾಭಕ್ಷ, ನಾಗರಾಜ್, ಮಲ್ ಕೇಶ್, ಸಂದೀಪ, ನಂದೀಶಪ್ಪ ಪಿ. ಶಿಲ್ಪಾ, ವನಜಾಕ್ಷಮ್ಮ, ಸುನಿತಾ ಬಾಯಿ, ಸಹ ಶಿಕ್ಷಕಿಯರಾದ ಪದ್ಮಾಕ್ಷಿ, ಎಂ. ಪ್ರೇಮ, ಸುಕನ್ಯಾ, ಕಲ್ಪನಾ, ರೂಪವತಿ, ದೀಪ, ಮುಂತಾದವರು ಹಾಗೂ ಪೋಷಕರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post