ಇದು ನಿಮಗೆ ಗೊತ್ತಾ? ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಭದ್ರತಾ ಪಡೆಗೆ ಯೋಧರನ್ನು ನಿಯೋಜನೆ ಮಾಡುವ ಮುನ್ನ ಯೋಧರು ಮಾತ್ರವಲ್ಲ, ಅವರ ಕುಟುಂಬಸ್ಥರು ಹಾಗೂ ಸಂಬಂಧಿಗಳೂ ಸಹ ಭದ್ರತಾ ವ್ಯವಸ್ಥೆಯ ಉಸ್ತುವಾರಿ ಹದ್ದಿನಕಣ್ಣಿನಲ್ಲಿರುತ್ತಾರೆ.
ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಯತ್ನದ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಹತ್ಯೆ ಮಾಡಲು ಮಾವೋವಾದಿಗಳು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಪೂನಾ ಪೊಲೀಸರು ಹೊರಹಾಕಿರುವ ಸಂಗತಿ ತಿಳಿದಿದೆ.
2017ರ ಎಪ್ರಿಲ್ 18ರ ದಿನಾಂಕಕ್ಕೆ ಮಾವೋವಾದಿ ಮುಖಂಡ ಪ್ರಕಾಶ್ ಎನ್ನುವವನ ಹೆಸರಿಗೆ ಪತ್ರ ಬರೆದು ಆರ್ ಎಂದು ಸಹಿ ಮಾಡಿರುವ ಪತ್ರ ದೊರೆತ ಆಧಾರದಲ್ಲಿ ಮೋದಿಯವರನ್ನು ಭೀಕರವಾಗಿ ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ.
ಪ್ರಸ್ತುತ ನರೇಂದ್ರ ಮೋದಿ ಅವರಿಗೆ ಒದಗಿಸಲಾಗಿರುವ ಭದ್ರತಾ ವ್ಯವಸ್ಥೆಯನ್ನು ನೋಡುವುದಾದರೆ, ಅದೊಂದು ವಿಶಿಷ್ಟ ಹಾಗೂ ವಿಭಿನ್ನ ರೀತಿಯದ್ದಾಗಿದ್ದು, ಅಭೇದ್ಯ ಕೋಟೆಯೇ ಆಗಿದೆ. ಇದನ್ನು, ಮೀರಿ ಅವರನ್ನು ಕೊಲ್ಲುವುದಿರಲಿ, ಅವರ ಹತ್ತಿರ ಸುಳಿಯುವುದೂ, ಅವರನ್ನು ಮುಟ್ಟುವುದೂ ಸಹ ಸಾಧ್ಯವಿಲ್ಲದ ಮಾತು.
ಹೀಗಿದೆ ನೋಡಿ ನಮ್ಮ ಪ್ರಧಾನಿಯವರ ಭದ್ರತಾ ವ್ಯವಸ್ಥೆ:
1. ಅತ್ಯಂತ ಉನ್ನತ ಮಟ್ಟದಲ್ಲಿ ತರಬೇತಿ ಪಡೆದ ಹಾಗೂ ಯಾವುದೇ ಕ್ಷಣದಲ್ಲೂ ಅತಿ ಸೂಕ್ಷ್ಮವಾಗಿ ಎಚ್ಚರದಿಂದಿರುವ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ಯೋಧರು ಪ್ರಧಾನಿಯವರನ್ನು ಸುತ್ತುವರೆದಿರುತ್ತಾರೆ. ಮೊದಲ ಹಂತದಲ್ಲಿ ಪ್ರಧಾನಿಯವರಿಗೆ ಭದ್ರತೆ ಒದಗಿಸುವ ಎಸ್‌ಪಿಜಿ ಯೋಧರಿಗೆ ಎಂತಹುದ್ದೇ ಕಠಿಣ ಪರಿಸ್ಥಿತಿಯನ್ನಾದರೂ ಎದುರಿಸುವ ಸಾಮರ್ಥ್ಯವನ್ನು ಪಡೆದಿರುತ್ತಾರೆ.
ಅತ್ಯಂತ ಪ್ರಮುಖವಾದ ಅಂಶವೆಂದರೆ, ಈ ಹಂತದಲ್ಲಿ ಭದ್ರತೆ ಒದಗಿಸುವ ಯೋಧರ ಸಂಪೂರ್ಣ ಹಿನ್ನೆಲೆ, ಅವರ ಕುಟುಂಬಸ್ಥರ ಹಾಗೂ ಸಂಬಂಧಿಗಳ ಹಿನ್ನೆಲೆಯಲ್ಲಿ ಪಡೆದು ಅವರನ್ನೂ ಸಹ ಭದ್ರತಾಧಿಕಾರಿಗಳ ಹದ್ದಿನ ಕಣ್ಣಿನ ಅಡಿಯಲ್ಲಿಡಲಾಗುತ್ತದೆ.
2. ಪ್ರಧಾನಿಯವರ ಆಪ್ತ ಭದ್ರತಾ ಪಡೆಯೇ ಎರಡನೆಯ ಹಂತದಲ್ಲೂ ಸಹ ಭದ್ರತೆಯನ್ನು ಒದಗಿಸುತ್ತದೆ. ಇಲ್ಲೂ ಸಹ ಎಸ್‌ಪಿಎ ಭದ್ರತಾ ಪಡೆಯೇ ಇದ್ದು, ಪ್ರಧಾನಿಯವರ ಜನರ ಚಲನವಲನ, ಅವರ ಹಾವಭಾವ ಸೇರಿದಂತೆ ಸುತ್ತಲೂ ಬರಬಹುದಾದ ಅಪಾಯ, ಎಂತಹುದ್ದೇ ಸನ್ನಿವೇಶಗಳನ್ನು ಗ್ರಹಿಸುವ ವಿಶೇಷ ಸಾಮರ್ಥ್ಯ ಹೊಂದಿರುವ ಉನ್ನತ ಮಟ್ಟದ ತರಬೇತಿ ಪಡೆದ ಪಡೆ ಇರುತ್ತದೆ.
3. ಮೂರನೆಯ ಹಂತದಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೋಗಳಿರುತ್ತಾರೆ. ಪ್ರಧಾನಿಯವರಿಗೆ ಮಾತ್ರವೇ ಭದ್ರತೆ ಒದಗಿಸುವ ತಂಡದಲ್ಲಿ ನಿಯೋಜನೆಗೊಳ್ಳುವ ಇವರಿಗೆ ಬಲಿಷ್ಠ ತರಬೇತಿ ನೀಡಲಾಗಿರುತ್ತದೆ. ಇಲ್ಲಿ ಮತ್ತೆ ಈ ಯೋಧರ ಹಿನ್ನೆಲೆಯನ್ನೂ ಸಹ ಸಾಕಷ್ಟು ಪರಿಶೀಲನೆಗೆ ಒಳಪಡಿಸಲಾಗಿರುತ್ತದೆ.
4. ನಾಲ್ಕನೆಯ ಹಂತದ ಭದ್ರತಾ ಪಡೆಯಲ್ಲಿ ಅರೆ ಸೇನಾ ಪಡೆಯ ಯೋಧರು ಹಾಗೂ ಪೊಲೀಸ್ ಉನ್ನತಾಧಿಕಾರಿಗಳ ತಂಡ ಭದ್ರತೆ ಒದಗಿಸುತ್ತದೆ. ಪ್ರಧಾನಿಯವರ ಯಾವ ರಾಜ್ಯಕ್ಕೆ ಭೇಟಿ ನೀಡುತ್ತಾರೋ, ಅಲ್ಲಿನ ಸ್ಥಳೀಯ ಪೊಲೀಸ್ ಇಲಾಖೆ ಈ ಹಂತದಲ್ಲಿ ಭದ್ರತೆ ಒದಗಿಸಬೇಕಿರುತ್ತದೆ. ಪ್ರಧಾನಿಯವರು ಭೇಟಿ ನೀಡುವ ಪ್ರದೇಶದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿಯಾಗಿರುತ್ತದೆ.
5. ಇಷ್ಟೆಲ್ಲಾ ಮಾನವ ಭದ್ರತಾ ಪಡೆಗಳ ಜೊತೆಯಲ್ಲಿ ಪ್ರಧಾನಿಯವರು ಸಂಚರಿಸುವ ವಾಹನ ಹಾಗೂ ವಿಮಾನಗಳನ್ನು ಅತ್ಯಂತ ವಿಶೇಷವಾಗಿ ರೂಪಿಸಲಾಗಿದೆ. ಇದನ್ನು ಯಾವುದೇ ರೀತಿಯ ವೈಮಾನಿಕ ಹಾಗೂ ಭೂಮಿಯ ಮೂಲಕ ದಾಳಿ ನಡೆಸುವುದು ಅಥವಾ ರಾಸಾಯನಿಕ ದಾಳಿ ನಡೆಸಿ, ಹಾನಿ ಮಾಡುವ ಸಾಧ್ಯತೆಗಳನ್ನು ಕನಿಷ್ಠ ಮಟ್ಟದಲ್ಲೂ ಸಹ ಇಲ್ಲವಾಗಿಸಿದೆ.
ಇಷ್ಟೆಲ್ಲಾ ಹಂತದ ಹಾಗೂ ಮಾದರಿಯ ಭದ್ರತಾ ವ್ಯವಸ್ಥೆಯನ್ನು ಪ್ರಧಾನಿ ಮೋದಿಯವರಿಗೆ ಕಲ್ಪಿಸಲಾಗಿದ್ದು, ಇದೊಂದು ರೀತಿಯ ಚಕ್ರವ್ಯೂಹವಿದ್ದಂತೆ. ಇದನ್ನು ದಾಟಿ ಮೋದಿಯವರನ್ನು ಹತ್ಯೆ ಮಾಡುವುದು ದೂರದ ಮಾತು, ಅವರ ಹತ್ತಿರ ಹೋಗುವುದೂ ಸಹ ಕನಸಿನ ಮಾತೇ…
Discussion about this post