ಭದ್ರಾವತಿ: ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಆರಂಭಿಸಿದ್ದ ಟೀಮ್ ಮೋದಿ ಭದ್ರಾವತಿಯ ಕಾರ್ಯಕರ್ತರು ಕಳೆದ 30 ದಿನಗಳ ಕಾಲ ಅವಿರತ ಶ್ರಮಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಟೀಮ್ ಮೋದಿ ತಂಡವು ಭದ್ರಾವತಿ ಗ್ರಾಮಾಂತರ ಭಾಗಗಳಲ್ಲಿ ಮೋದಿ ಧೂತರನ್ನು ನೇಮಿಸಿ ಪ್ರಧಾನಿ ಮೋದಿ ರವರ ಕಾರ್ಯಕ್ರಮಗಳನ್ನು ಮನೆ ಮನೆಗೆ ಮತ್ತು ವರ್ತಕರಿಗೆ ರೈತರಿಗೆ ನರೇಂದ್ರ ಮೋದಿರವರ ಯೋಜನೆಗಳನ್ನು ತಿಳಿಸಿ ಮತ್ತೊಮ್ಮೆ ಮೋದಿ ರವರನ್ನು ಪ್ರಧಾನಿಯನ್ನಾಗಿ ಮಾಡಲು ಮನವಿ ಮಾಡಿದೆ.
ಒಟ್ಟು 30 ದಿನಗಳ ಕಾಲ ನಡೆದ ಅಭಿಯಾನದಲ್ಲಿ 63 ಗ್ರಾಮಗಳನ್ನು ತಲುಪಿದ್ದು, 63 ಮೋದಿ ಧೂತರು ಪಾಲ್ಗೊಂಡಿದ್ದರು. ಒಟ್ಟು 500 ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡಿದ್ದು, 6000ಕ್ಕೂ ಅಧಿಕ ಮನೆಗಳನ್ನು ತಲುಪಿ, ಮೋದಿ ಸರ್ಕಾರದ ಯೋಜನೆಗಳ ಕುರಿತಾಗಿ ತಿಳಿಸಿ ಹೇಳಲಾಗಿದೆ.
ಪ್ರಮುಖವಾಗಿ ಸುಮಾರು 13,000ಕ್ಕೂ ಅಧಿಕ ಮಂದಿಯನ್ನು ಭೇಟಿಯಾದ ತಂಡದ ಸದಸ್ಯರು ಗ್ರಾಮೀಣ ಭಾಗದಲ್ಲಿ ಮೋದಿ ಸರ್ಕಾರದ ಯೋಜನೆಗಳ ಕುರಿತಾಗಿ ತಿಳಿಸುವ ಜೊತೆಯಲ್ಲಿ, ಯೋಜನೆಯ ಉಪಯೋಗ ಪಡೆಯುವಂತೆಯೂ ಸಹ ತಿಳಿಸುವಲ್ಲಿ ಯಶಸ್ವಿಯಾಗಿದೆ.

















Discussion about this post