ಹಿಂದೂಗಳು ಅದರಲ್ಲೂ ಮುಖ್ಯವಾಗಿ ನಮ್ಮ ಬ್ರಾಹ್ಮಣರು ಪಠಿಸುವ ಮಂತ್ರಗಳಲ್ಲಿ ಓಂ ಎನ್ನುವ ಬೀಜಾಕ್ಷರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇದನ್ನು ನಮ್ಮ ಪೂರ್ವಜರು ಓಮ್ ಎಂದೂ ಕರೆಯುತ್ತಾರೆ. ಇದನ್ನು ತ್ರಿಮೂರ್ತಿ ಸ್ವರೂಪವೆಂದೂ ತಿಳಿದು ಹೇಳುತ್ತಾರೆ. ಅ, ಉ, ಮ ಕಾರಗಳಿಂದ ಓಂ ಹುಟ್ಟಿಕೊಂಡಿದೆ. ಇದನ್ನು ಪಠಿಸುವದರಿಂದ ಕುಂಡಲಿನೀ ಶಕ್ತಿ ಜಾಗೃತಗೊಳ್ಳುತ್ತದೆ. ಓಂ ಪಠಿಸುವದರಿಂದ ಯಾವ ಯಾವ ಪ್ರಯೋಜನೆಗಳು ಮನುಷ್ಯನಲ್ಲಿ ಆಗುತ್ತವೆ ಎಂದು ಈಗ ತಿಳಿಯೋನ ಬನ್ನಿ.
1. ಪ್ರತಿ ನಿತ್ಯವೂ ಓಂ ಅನ್ನು ಧ್ಯಾನದಲ್ಲಿ ಉಚ್ಚರಿಸುವುದರಿಂದ ಬಹಳಷ್ಟು ಶಕ್ತಿ ಉದ್ಭವಿಸುತ್ತದೆ. ಒಂದು ಹಂತದಲ್ಲಿ ಅಧ್ಯಾತ್ಮಿಕ ಸ್ಥಾಯಿ ಅಧಿಕಗೊಂಡು ನಮ್ಮ ಆತ್ಮ ದೈವತ್ವದೊಂದಿಗೆ ವಿಲೀನಗೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ಪಾಸಿಟಿವ್ ಕಂಪನಗಳು ಉಂಟಾಗಿ ಅನಾರೋಗ್ಯದಿಂದ ಮುಖ್ಯವಾಗುತ್ತದೆ.
2. ಓಂ ಉಚ್ಚರಿಸುವುದರಿಂದ ದೇಹಕ್ಕೆ ಆಮ್ಲಜನಕ ಹಾಗೂ ರಕ್ತದ ಪೂರ್ಯಕ್ಕೆ ಸರಿಯಾಗಿ ಆಗುತ್ತದೆ. ಮಾನಸಿಕ ನೆಮ್ಮದಿ ದೊರೆಯುತ್ತದೆ. ಒತ್ತಡ, ಆತಂಕ ದೂರವಾಗುತ್ತದೆ.
3. ಖಿನ್ನತೆಗೆ ಒಳಗಾಗಿರುವವರು ಪ್ರತಿನಿತ್ಯ ಓಂ ಉಚ್ಚರಿಸುವುದರಿಂದ ಹೊಸ ಶಕ್ತಿ ಬರುತ್ತದೆ. ಉತ್ಸಾಹ ಮೂಡುತ್ತದೆ. ಚುರುಕಾಗಿ ಎಲ್ಲಾ ಕೆಲಸಗಳನ್ನು ಸುಗಮವಾಗಿ ಮಾಡಬಹುದು.
4. ಮಿದುಳಿನ ಕಾರ್ಯ ಕ್ಷಮತೆ ಹೆಚ್ಚುತ್ತದೆ. ಆಲೋಚನಾ ಶಕ್ತಿ ವೃದ್ಧಿಸುತ್ತದೆ. ಹೊಸ ಆವಿಷ್ಕಾರಗಳನ್ನು ಮಾಡಲು ಸಹಕಾರಿಯಾಗುತ್ತದೆ, ಚುರುಕಾಗಿ ಆಲೋಚಿಸುತ್ತಾರೆ.
5. ಏಕಾಗ್ರತೆ ಹೆಚ್ಚುತ್ತದೆ. ವಿಧ್ಯಾಭ್ಯಾಸದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು. ವಿದ್ಯಾರ್ಥಿಗಳಿಗೆ ಜ್ಞಾಪಕಶಕ್ತಿಗೆ ಇದೂ ಒಂದು ರೀತಿಯ ಅತ್ಯುತ್ತಮ ಉಪಾಯ.
6. ಓಂ ಪಠಿಸುವದರಿಂದ ಶರೀರ ಲವಲವಿಕೆಯಿಂದಿರುತ್ತದೆ. ಮನಸ್ಸು ಹತೋಟಿಯಲ್ಲಿರುತ್ತದೆ, ಅನಾವಶ್ಯಕ ಆಲೋಚನೆಗಳು ಬರುವುದಿಲ್ಲ.
7. ಶರೀರದಲ್ಲಿ ಸೇರಿಕೊಂಡಿರುವ ವಿಷಪದಾರ್ತಗಳು ಅಂದರೆ (ಕೆಟ್ಟ ಅಭ್ಯಾಸಗಳು) ಹೊರದೂಡಲ್ಪಡುತ್ತವೆ. ಚರ್ಮ ಕಾಂತಿಯುತವಾಗುತ್ತದೆ.
8. ಓಂ ಅಕ್ಷರದ ವಿನ್ಯಾಸ ಗಣಪತಿಯನ್ನು ಹೋಲುತ್ತದೆ. ಅಕ್ಷರದ ಮೇಲಿನ ಭಾಗ ತಲೆಯನ್ನೂ, ಮಧ್ಯಭಾಗ ಸೊಂಡಿಲನ್ನೂ, ಕೆಲಭಾಗ ಹೊಟ್ಟೆಯನ್ನೂ, ಸೂಚಿಸುತ್ತದೆ. ಇದರಿಂದಾಗಿ ಓಂ ಉಚ್ಚರಿಸುವುದರಿಂದ ಸಾಕ್ಷಾತ್ ವಿನಾಯಕನನ್ನೇ ಪೂಜಿಸಿದಂತೆ ಆಗುತ್ತದೆ. ಇದರಿಂದ ವಿನಾಯಕನ ಅನುಗ್ರಹ ಲಭಿಸುತ್ತದೆ.
9. ಸ್ವರ ಪೆಟ್ಟಿಗೆಯ ಸಮಸ್ಯೆ ಉಲ್ಲವರು, ಓಂ ಉಚ್ಚರಿಸಿದರೆ, ಸಮಸ್ಯೆ ನಿವಾರಣೆ ಆಗುತ್ತದೆ. ಸ್ವರ ಇಂಪಾಗುತ್ತದೆ.
10. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ ಪಕ್ಷ 108 ಸಲ ಓ0 ಪಠಿಸುವದರಿಂದ ಅತ್ಯುತ್ತಮ್ತಮ ಫಲಿತಾಂಶ ಲಭಿಸುತ್ತದೆ. ಇಷ್ಟೆಲ್ಲಾ ಉಪಯೋಗವಾಗತ್ತದೆ ಎಂದರೆ ನಮ್ಮ ಬ್ರಾಹ್ಮಣರು ಏಕೆ ಓಂ ಅಥಃ ಗಾಯತ್ರಿ ಜಪವನ್ನು ಯಾಕೆ ಮಾಡಬಾರದು. ಇದಕ್ಕಾಗಿಯೇ ದೊಡ್ಡವರು ಎಲ್ಲಾ ಸನ್ಯಾಸಿಗಳು ಮತ್ತು ಎಲ್ಲಾ ಗುರುಗಳು ಎಲ್ಲರಿಗೂ ಹೇಳುವುದು ಬ್ರಾಹ್ಮಣರು ತಪ್ಪದೇ ಗಾಯತ್ರಿಯನ್ನು ಜಪ ಮಾಡಿ ಎಂದು. ಇದನ್ನು ಓದಿದ ನಂತರ ಎಲ್ಲರೂ ತಪ್ಪದೇ ಬದಲಾದರೆ ಈ ಲೇಖನವನ್ನು ಪ್ರಕಟಿಸಿದ್ದಕ್ಕೆ ಸಾರ್ತಕ.
ಲೇಖನ: ಆಪ್ತಮಿತ್ರ ವಸಂತ್, ಬೆಂಗಳೂರು
Discussion about this post