No Result
View All Result
PCCF Kumar Pushkar Warns Human Intolerance Fueling Biodiversity Crisis
English Articles

PCCF Kumar Pushkar Warns Human Intolerance Fueling Biodiversity Crisis

by ಕಲ್ಪ ನ್ಯೂಸ್
May 15, 2026
0

Kalpa Media House  |  Shankaraghatta  | Warning of a volatile future where "one species stands against all others," Karnataka’s Principal...

Read moreDetails
Annual Disaster Management Mock Drill Conducted at Harihar Railway Station

Annual Disaster Management Mock Drill Conducted at Harihar Railway Station

May 14, 2026
AESL Launches Victory Batch at Rs 99 to support students appearing for RE-NEET

AESL Launches Victory Batch at Rs 99 to support students appearing for RE-NEET

May 13, 2026
Why The Hell Did You Make Manya Surve a Hero?: Sanjay Gupta Opens Up on Underworld Threats

Why The Hell Did You Make Manya Surve a Hero?: Sanjay Gupta Opens Up on Underworld Threats

May 13, 2026
Amazon Expands Health Coverage for 90,000 Delivery Associates across India

Amazon Expands Health Coverage for 90,000 Delivery Associates across India

May 12, 2026
  • Advertise With Us
  • Grievances
  • About Us
  • Contact Us
Saturday, May 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಮತದಾನದಲ್ಲಿ ನಂ.1 ಗುರಿ ತಲುಪಲು ಶಿವಮೊಗ್ಗ ಜಿಲ್ಲಾಡಳಿತದ ಶ್ರಮ ಹೇಗಿದೆ ಗೊತ್ತಾ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 18, 2019
in ಶಿವಮೊಗ್ಗ
0
ಮತದಾನದಲ್ಲಿ ನಂ.1 ಗುರಿ ತಲುಪಲು ಶಿವಮೊಗ್ಗ ಜಿಲ್ಲಾಡಳಿತದ ಶ್ರಮ ಹೇಗಿದೆ ಗೊತ್ತಾ?
Share on FacebookShare on TwitterShare on WhatsApp

ಶಿವಮೊಗ್ಗ: ಈ ಬಾರಿಯ ಲೋಕಸಭಾ ಚುನಾವಣೆಯ ಯಶಸ್ಸಿಗೆ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿರುವಂತೆಯೇ, ಮತದಾನ ಪ್ರಮಾಣದಲ್ಲಿ ಜಿಲ್ಲೆಯನ್ನು ನಂ.1 ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಹಲವು ಕ್ರಮಗಳನ್ನು ಕೈಗೊಂಡಿದೆ.

ಈ ಕುರಿತಂತೆ ಮತದಾರರ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಕುರಿತಾಗಿ ಎಲ್ಲಾ ಇಲಾಖಾಧಿಕಾರಿಗಳೊಂದಿಗೆ ಸ್ವೀಪ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿರುವ ಜಿಪಂ ಸಿಇಒ ಕೆ. ಶಿವರಾಮೇಗೌಡ, ಈ ಬಾರಿ ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ನಂಬರ್ ಒನ್ ಆಗಬೇಕು ಎಂಬ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಬಾರಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅಂತಹ ಮತಗಟ್ಟೆ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗುವುದು. ಕಡಿಮೆ ಮತದಾನವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆಮನೆ ಭೇಟಿ, ಮತದಾನ ಕಡಿಮೆಯಾಗಲು ಕಾರಣ ತಿಳಿದು ಅದನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಯುವಜನ ಹಬ್ಬ ಆಯೋಜನೆ:
ಈ ಬಾರಿ ಯುವ ಮತದಾರರನ್ನು ಸೆಳೆಯಲು ಅದರಲ್ಲೂ ಪ್ರಥಮ ಬಾರಿಗೆ ಮತ ಚಲಾಯಿಸುವ ಅಧಿಕಾರನ್ನು ಪಡೆದಿರುವವರನ್ನು ಸೆಳೆಯಲು ಪ್ರತಿ ತಾಲೂಕಿನಲ್ಲಿ ಯುವಜನ ಹಬ್ಬ ಆಯೋಜಿಸಲಾಗುವುದು. ಇಲ್ಲಿ ಯುವ ಮತದಾರರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಚರ್ಚಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮತದಾನ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಇದಲ್ಲದೆ ಬೀದಿ ನಾಟಕ, ಸ್ವಸಹಾಯ ಗುಂಪುಗಳ ಮೂಲಕ ಜಾಗೃತಿ ಕಾರ್ಯಕ್ರಮಗಳು, ಬೈಕ್ ರ್ಯಾಲಿ, ಸೈಕಲ್ ಜಾಥಾ, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು, ಅಂಗವಿಕಲರ ರ್ಯಾಲಿ, ಅಸಂಘಟಿತ ವಲಯದ ಕಾರ್ಮಿಕರಿಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಂಗವಿಕಲರಿಗೆ ಮತಗಟ್ಟೆಗಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗುವುದು. ಇದೇ ರೀತಿ ಅಶಕ್ತರನ್ನು ಮತಗಟ್ಟೆಗಳಿಗೆ ಕರೆತರಲು ವಾಹನ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಕಾರ್ಮಿಕರಿಗೆ ಮತದಾನದ ದಿನ ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ನೀಡುವಂತೆ ಎಲ್ಲಾ ವಾಣಿಜ್ಯೋದ್ಯಮಗಳಿಗೆ ಸೂಚನೆ ನೀಡಬೇಕು ಎಂದವರು ಹೇಳಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ನಲ್ಲಿ ಮತದಾನ ಕುರಿತು ಘೋಷಣೆ, ಇದೇ ರೀತಿ ಕೆಎಂಎಫ್ ಹಾಲಿನ ಪ್ಯಾಕೇಟ್ ಹಾಗೂ ಇತರ ಉತ್ಪನ್ನಗಳ ಪ್ಯಾಕೇಟ್ ಮೇಲೆ ಮತದಾನ ಜಾಗೃತಿ ಸಂದೇಶವನ್ನು ಮುದ್ರಿಸಬೇಕು. ಪ್ರತಿ ಕಚೇರಿಗೆ ಮತದಾನದ ಜಾಗೃತಿ ರಬ್ಬರ್ ಸ್ಟಾಂಪ್ ಒದಗಿಸಲಾಗುವುದು. ರವಾನೆಯಾಗುವ ಪ್ರತಿ ಕಾಗದ ಪತ್ರಗಳ ಮೇಲೆ ಇದರ ಸೀಲ್ ಹೊಡೆಯಬೇಕು. ಈ ಬಾರಿ ವಿದ್ಯಾರ್ಥಿಗಳಿಂದ ಅವರ ಪೋಷಕರಿಗೆ ಮತದಾನದ ಜಾಗೃತಿ ಕುರಿತಾಗಿ ಪತ್ರ ಬರೆಯಲಾಗುವುದು. ಪ್ರತಿಯೊಂದು ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕ್ರಿಯಾ ಯೋಜನೆಯನ್ನು ತಕ್ಷಣ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಸಾರಿಗೆ ಇಲಾಖೆ ಜಂಟಿ ಆಯುಕ್ತ ಶಿವರಾಜ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

(ವರದಿ: ಡಾ. ಸುಧೀಂದ್ರ)

Tags: Kannada NewsLoksabha election 2019Malnad NewsShivamoggaVoting Campaign in Shivamoggaಯುವಜನ ಹಬ್ಬಲೋಕಸಭಾ ಚುನಾವಣೆ-2019ಶಿವಮೊಗ್ಗ
Share196Tweet123Send
Previous Post

ಅಭಿಮಾನಿಗಳ ಪ್ರೀತಿಯಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ: ಸುಮಲತಾ ಸ್ಪಷ್ಟನೆ

Next Post

ಪರಿಕ್ಕರ್ ನಿಧನದ ಹಿನ್ನೆಲೆ: ಗೋವಾ ನೂತನ ಮುಖ್ಯಮಂತ್ರಿಯಾಗಿ ಸಾವಂತ್ ಪದಗ್ರಹಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪರಿಕ್ಕರ್ ನಿಧನದ ಹಿನ್ನೆಲೆ: ಗೋವಾ ನೂತನ ಮುಖ್ಯಮಂತ್ರಿಯಾಗಿ ಸಾವಂತ್ ಪದಗ್ರಹಣ

ಪರಿಕ್ಕರ್ ನಿಧನದ ಹಿನ್ನೆಲೆ: ಗೋವಾ ನೂತನ ಮುಖ್ಯಮಂತ್ರಿಯಾಗಿ ಸಾವಂತ್ ಪದಗ್ರಹಣ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಆಗುಂಬೆ | ವೃದ್ಧೆಯ ಕಟ್ಟಿಹಾಕಿ ರಾಬರಿ ಪ್ರಕರಣ | ನಾಲ್ವರು ಅಂದರ್, ಕದ್ದ ಮಾಲು ವಶಕ್ಕೆ

ಆಗುಂಬೆ | ವೃದ್ಧೆಯ ಕಟ್ಟಿಹಾಕಿ ರಾಬರಿ ಪ್ರಕರಣ | ನಾಲ್ವರು ಅಂದರ್, ಕದ್ದ ಮಾಲು ವಶಕ್ಕೆ

May 15, 2026
ಸಾಗರ | ಭೀಕರ ಅಪಘಾತ | ಬೈಕ್ ಸಂಪೂರ್ಣ ಭಸ್ಮ, ಯುವಕ ಸ್ಥಳದಲ್ಲೇ ಸಾವು!

ಸಾಗರ | ಭೀಕರ ಅಪಘಾತ | ಬೈಕ್ ಸಂಪೂರ್ಣ ಭಸ್ಮ, ಯುವಕ ಸ್ಥಳದಲ್ಲೇ ಸಾವು!

May 15, 2026
ಶಿವಮೊಗ್ಗ | ಮೇ 16-24 | ರಾಜ್ಯಮಟ್ಟದ ಅಂತರ್ ಜಿಲ್ಲಾ ಫುಟ್‍ಬಾಲ್ ಲೀಗ್ | MLC ಡಾ.ಧನಂಜಯ ಸರ್ಜಿ

ಶಿವಮೊಗ್ಗ | ಮೇ 16-24 | ರಾಜ್ಯಮಟ್ಟದ ಅಂತರ್ ಜಿಲ್ಲಾ ಫುಟ್‍ಬಾಲ್ ಲೀಗ್ | MLC ಡಾ.ಧನಂಜಯ ಸರ್ಜಿ

May 15, 2026
PCCF Kumar Pushkar Warns Human Intolerance Fueling Biodiversity Crisis

PCCF Kumar Pushkar Warns Human Intolerance Fueling Biodiversity Crisis

May 15, 2026
ದಿ ಕ್ಲೈಮೇಟ್ ಪ್ಲೆಡ್ಜ್ ನಿಂದ ಸಿ40 ಸಿಟೀಸ್ ಸಹಭಾಗಿತ್ವದಲ್ಲಿ ಭಾರತದ ಸರಕು ಸಾಗಣೆ ಹೆದ್ದಾರಿಗಳ ವಿದ್ಯುದ್ದೀಕರಣಕ್ಕೆ ಬ್ಲೂಪ್ರಿಂಟ್ ಬಿಡುಗಡೆ

ದಿ ಕ್ಲೈಮೇಟ್ ಪ್ಲೆಡ್ಜ್ ನಿಂದ ಸಿ40 ಸಿಟೀಸ್ ಸಹಭಾಗಿತ್ವದಲ್ಲಿ ಭಾರತದ ಸರಕು ಸಾಗಣೆ ಹೆದ್ದಾರಿಗಳ ವಿದ್ಯುದ್ದೀಕರಣಕ್ಕೆ ಬ್ಲೂಪ್ರಿಂಟ್ ಬಿಡುಗಡೆ

May 15, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!