ನವದೆಹಲಿ: ನನ್ನ ಸ್ವದೇಶಕ್ಕೆ ಮರಳಿರುವುದು ಒಳ್ಳೆಯದಾಗಿದೆ: ಇದು, 48 ಗಂಟೆಗಳಷ್ಟು ಕಾಲ ಪಾಕಿಸ್ಥಾನದ ಕಪಿಮುಷ್ಟಿಯಲ್ಲಿದ್ದು ನಿನ್ನೆ ಸುರಕ್ಷಿತವಾಗಿ ಬಿಡುಗಡೆಯಾಗಿ ಬಂದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೊಟ್ಟ ಮೊದಲ ಮಾತು.
ಬಿಡುಗಡೆಗೆ ಒಪ್ಪಿದ್ದೆವೆ ಎಂದು ಹೇಳಿ ಗಡಿ ಭಾಗದವರೆಗೂ ಅಭಿನಂದನ್ ಅವರನ್ನು ಕರೆದುಕೊಂಡು ಬಂದಿದ್ದ ಪಾಕ್ ಸೇನೆ ಕೊನೆಯ ಗಳಿಗೆಯಲ್ಲಿ ಕೊಂಚ ಕ್ಯಾತೆ ಮಾಡಿತ್ತು. ಆದರೆ, ಅಂತಿಮವಾಗಿ 9 ಗಂಟೆ ವೇಳೆಗೆ ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರ ಮಾಡಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಯಿತು.
ಆನಂತರ ಶತ್ರುಗಳ ಕಪಿ ಮುಷ್ಟಿಯಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ ಅಭಿನಂದನ್ ಮಾತನಾಡಿದ್ದು, ನನ್ನ ಸ್ವದೇಶಕ್ಕೆ ಆಗಮಿಸಿದ್ದು ಒಳ್ಳೆಯದಾಗಿದೆ, ಸಂತೋಷ ಮೂಡಿಸಿದೆ ಎಂದರು.
ಭಾರತದಂತಹ ದೇಶದ ವೀರಯೋಧನಾಗಿ ಶತ್ರುಗಳ ಕೈಗೆ ಸಿಲುಕಿ, ಅಲ್ಲಿಂದ ಸುರಕ್ಷಿತವಾಗಿ ಹಿಂದಿರುಗಿದ ನಂತರ ಓರ್ವ ಯೋಧ ಯಾವ ರೀತಿ ಘನತೆಯಿಂದ ವರ್ತಿಸಬೇಕು ಆ ರೀತಿ ಕೇವಲ ಒಂದೇ ಮಾತನ್ನಾಡಿ ಅಭಿನಂದನ್ ತಮ್ಮ ಕರ್ತವ್ಯ ಮೆರೆದಿದ್ದಾರೆ.
















