ನವದೆಹಲಿ: 72ನೆಯ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿರುವ ಬೆನ್ನಲ್ಲೇ ಹೆಮ್ಮೆಯ ಭಾರತೀಯ ಸೇನೆ ದೇಶಕ್ಕೆ ನೀಡಿರುವ ಸಂದೇಶ, ದೇಶವಾಸಿಗಳ ನರನಾಡಿಗಳಲ್ಲಿ ದೇಶದ ಮೇಲಿನ ಗೌರವವನ್ನು ಬಡಿದೆಬ್ಬಿಸಿದೆ.
ಹೌದು…
ನಿಮ್ಮ ಜೊತೆ ನಾನು ಜನಿಸಿದವನಲ್ಲ, ನಿಮ್ಮ ಜೊತೆಯಲ್ಲಿ ಬೆಳೆದವನೂ ಅಲ್ಲ… ಆದರೂ ಸಹ ನಾನು ನಿಮಗಾಗಿ, ನಿಮ್ಮ ರಕ್ಷಣೆಗಾಗಿ ಹೋರಾಡಿ, ಶತ್ರುಗಳನ್ನು ಸಂಹಾರ ಮಾಡಿ, ನಿಮ್ಮೆದುರೇ ಪ್ರಾಣ ಕಳೆದುಕೊಳ್ಳುತ್ತೇನೆ…
ಇದು, ಭಾರತೀಯ ಸೇನೆ https://twitter.com/adgpi ಖಾತೆಯಲ್ಲಿ ಅಧಿಕೃತವಾಗಿ ಹಂಚಿಕೊಂಡಿರುವ ಭಾವನಾತ್ಮಕ ಸಂದೇಶ.
ಇಂತಹ ಒಂದು ಮನಮುಟ್ಟುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರ ಮನಗೆದ್ದಿದ್ದು, ದೇಶದ ಮೇಲಿನ ಹಾಗೂ ಭಾರತೀಯ ಸೇನೆಯ ಮೇಲಿನ ಗೌರವ ಹಾಗೂ ಪ್ರೀತಿ ಇಮ್ಮಡಿಯಾಗುವಂತೆ ಮಾಡಿದೆ.
#MondayMotivation ” I was not born with you, I was not raised next to you, But I will kill for you and I will die beside you ” #Brotherhood pic.twitter.com/EgaqHofPk7
— ADG PI – INDIAN ARMY (@adgpi) August 13, 2018
ಪ್ರತಿದಿನ ಇಡಿಯ ದೇಶ ನೆಮ್ಮದಿಯಿಂದ ನಿದ್ದೆ ಮಾಡುತ್ತದೆ ಎಂದರೆ ಅದರ ಹಿಂದೆ ಈ ದೇಶದ ಪ್ರತಿ ಯೋಧ ಹಾಗೂ ಆತನ ಕುಟುಂಬದ ತ್ಯಾಗ ಹಾಗೂ ಬಲಿದಾನವಿದೆ. ಇಂತಹ ತ್ಯಾಗಕ್ಕೆ ದೇಶದ ಪ್ರತಿ ಪ್ರಜೆಯೂ ಗೌರವ ನೀಡುವುದು ಆದ್ಯ ಕರ್ತವ್ಯವಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಗ್ರರು ನವದೆಹಲಿ ಸಹಿತ ಹಲವೆಡೆಗಳಲ್ಲಿ ಭಯೋತ್ಪಾದಕ ದಾಳಿ ನಡೆಸುವ ಯೋಜನೆ ಹೊಂದಿರುವುದಾಗಿ ಗುಪ್ತಚರ ದಳ ಸೇನೆಗೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಈ ಪ್ರೇರಣಾತ್ಮಕ ಸಂದೇಶವನ್ನು ಸೇನೆ ಹಂಚಿಕೊಂಡಿದೆ.
Discussion about this post