ಚೆನ್ನೈ: ಭಾರತೀಯ ಸೇನೆಯ ಬಲವನ್ನು ಹೆಚ್ಚಿಸುವಲ್ಲಿ ಈಗ ಮತ್ತೊಂದು ಅಸ್ತ್ರ ಸೇನೆಯ ಬತ್ತಳಿಕೆ ಸೇರಿದ್ದು, ಇದು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಾಣವಾದ್ದು ಎನ್ನುವುದು ವಿಶೇಷ.
Marking the big milestone in #MakeInIndia in defence, the Raksha Mantri Smt. @nsitharaman to hand over indigenised engines of Main Battle Tanks, T-72 & T-90 to Indian Army today at Engines Factory Avadi pic.twitter.com/QC7k0hSRfs
— Defence Production India (@DefProdnIndia) July 28, 2018
ಈ ಸ್ವದೇಶಿ ನಿರ್ಮಿತವಾದ ಬಹು ಇಂಧನ ಯುದ್ದ ಟ್ಯಾಂಕರ್ ಇಂಜಿನನನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ಸೇನೆಗೆ ಹಸ್ತಾಂತರ ಮಾಡಿದರು.
Smt @nsitharaman visited Engine Factory, Avadi along with senior MoD officials where she interacted with factory technicians and staff & applauded their succesful efforts in Defence indigenisation.#MakeInIndia4Defence@DefProdnIndia @drajaykumar_ias pic.twitter.com/ZzmIADH7Ko
— Raksha Mantri (@DefenceMinIndia) July 28, 2018
ತಮಿಳುನಾಡಿದ ಚೆನ್ನೈನ ಅವದಿಯಲ್ಲಿರುವ ಸೇನಾ ಇಂಜಿನ್ ತಯಾರಿಕಾ ಕಾರ್ಖಾನೆಯಲ್ಲಿ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಎರಡು ವಿಧದ ಬಹು ಇಂಧನ ಯುದ್ಧ ಟ್ಯಾಂಕರ್ ಇಂಜಿನ್ ಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಿದರು. ಸ್ವದೇಶಿ ನಿರ್ಮಿತ ಟಿ-90 ಭೀಷ್ಮಾ ಯುದ್ಧ ಟ್ಯಾಂಕರ್ ಗೆ ಅಳವಡಿಸಲಾಗುವ ಒಂದು ಸಾವಿರ ಅಶ್ವಬಲ ಸಾಮರ್ಥ್ಯದ ವಿ92ಎಸ್2 ಎಂಜಿನ್ ಮತ್ತು ಟಿ-72 ಅಜೇಯ ಟ್ಯಾಂಕರ್ ಗೆ ಅಳವಡಿಸುವ ವಿ-46-6 ಇಂಜಿನ್ ಗಳನ್ನು ನಿರ್ಮಲಾ ಸೀತಾರಾಮನ್ ಅವರು ಸೇನೆಗೆ ಹಸ್ತಾಂತರಿಸಿದರು.
Discussion about this post