ಬೆಂಗಳೂರು: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಉಗ್ರರನ್ನು ಮಟ್ಟ ಹಾಕಲೇಬೇಕು ಎಂದು ದೇಶದಾದ್ಯಂತ ಕಿಚ್ಚು ಹಬ್ಬಿರುವಂತೆಯೇ, ಉಗ್ರರ ದಾಳಿಯನ್ನು ಖಂಡಿಸಿರುವ ನಟ ಉಪೇಂದ್ರ, ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂದು ಕರೆ ನೀಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಉಪೇಂದ್ರ, “ಮುಳ್ಳನ್ನ ಮುಳ್ಳಿಂದಲೇ ತೆಗೆಯಬೇಕು! ಜನರ ಜೊತೆ ಜನರ ತರ ಇರುವ ಉಗ್ರವಾದಿಗಳನ್ನು ಕಂಡುಹಿಡಿಯಲು ಕಷ್ಟ. ಹಾಗೇ ನಮ್ಮ ವೀರ ಯೋಧರೂ ಸಮವಸ್ತ್ರವಿಲ್ಲದೇ ಅಲ್ಲಿನ ಜನರ ಜೊತೆ ಬೆರೆತು ಉಗ್ರವಾದಿಗಳನ್ನು ಹೊಡೆದುರುಳಿಸಬೇಕು.” ಎಂದಿದ್ದಾರೆ.
ಮುಳ್ಳನ್ನ ಮುಳ್ಳಿಂದಲೇ ತೆಗೆಯಬೇಕು ! ಜನರ ಜೊತೆ ಜನರ ತರ ಇರುವ ಉಗ್ರವಾದಿಗಳನ್ನು ಕಂಡುಹಿಡಿಯಲು ಕಷ್ಟ. ಹಾಗೇ ನಮ್ಮ ವೀರ ಯೋಧರೂ ಸಮವಸ್ತ್ರವಿಲ್ಲದೇ ಅಲ್ಲಿನ ಜನರ ಜೊತೆ ಬೆರೆತು ಉಗ್ರವಾದಿಗಳನ್ನು ಹೊಡೆದುರುಳಿಸಬೇಕು.
— Upendra (@nimmaupendra) February 16, 2019
ಅಲ್ಲದೆ ಸಾವಿರಾರು ಕೋಟಿ ಶಸ್ತ್ರಾಸ್ತ್ರ ವ್ಯಾಪಾರಕ್ಕಾಗಿ ಅಂತಾರಾಷ್ಟ್ರೀಯ ಆಶೆಪಾತಕ ರಾಜಕೀಯ ವ್ಯಾಪಾರಿ ದುರುಳರು ಆತಂಕವಾದಿ ಉಗ್ರರಲ್ಲಿ ಧರ್ಮದ ವಿಷ ಬೀಜ ಬಿತ್ತಿ ಹಣ ಹೂಡುತ್ತಿರುವ ಕಾರಣ ನಮ್ಮ ದೇಶದ ವೀರ ಯೋಧರ ಮತ್ತು ಮುಗ್ಧ ಜನರ ರಕ್ತಪಾತವಾಗುತ್ತಿದೆ ಮತ್ತು ಮಾರಣಹೋಮವಾಗುತ್ತಿದೆ. ಧಿಕ್ಕಾರ ಈ ಅವ್ಯವಸ್ಥೆಗೆ….” ಎಂದೂ ಗುಡುಗಿದ್ದಾರೆ.
🙏🙏🙏🙏🙏🙏 pic.twitter.com/YNszVpK9Ut
— Upendra (@nimmaupendra) February 15, 2019
ಸಾವಿರಾರು ಕೋಟಿ ಶಸ್ತ್ರಾಸ್ತ್ರ ವ್ಯಾಪಾರಕ್ಕಾಗಿ ಅಂತರರಾಷ್ಟ್ರೀಯ ಆಶೆಪಾತಕ ರಾಜಕೀಯ ವ್ಯಾಪಾರಿ ದುರುಳರು ಆತಂಕವಾದಿ ಉಗ್ರರಲ್ಲಿ ಧರ್ಮದ ವಿಷ ಬೀಜ ಬಿತ್ತಿ ಹಣ ಹೂಡುತ್ತಿರುವ ಕಾರಣ ನಮ್ಮ ದೇಶದ ವೀರ ಯೋಧರ ಮತ್ತು ಮುಗ್ಧ ಜನರ ರಕ್ತಪಾತವಾಗುತ್ತಿದೆ ಮತ್ತು ಮಾರಣಹೋಮವಾಗುತ್ತಿದೆ. ಧಿಕ್ಕಾರ ಈ ಅವ್ಯವಸ್ಥೆಗೆ….
— Upendra (@nimmaupendra) February 15, 2019
Discussion about this post