ಬೆಂಗಳೂರು: ಮೀ ಟೂ ಎಂಬ ಅಭಿಯಾನದ ಹೆಸರು ಹೇಳಿಕೊಂಡು ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ ಆರೋಪಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯರಿಬ್ಬರು ಕಿಡಿ ಕಾರಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರದಲ್ಲಿ ಅರ್ಜುನ್ ಸರ್ಜಾ ವಿರುದ್ಧ ಇಡಿಯ ಜಗತ್ತು ಆರೋಪ ಮಾಡಿದರೂ ನಾನು ನಂಬುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ನಾನು ಕಳೆದ 34 ವರ್ಷಗಳಿಂದ ಅರ್ಜುನ್ ಸರ್ಜಾ ಅವರನ್ನು ಬಲ್ಲೆ. ನನ್ನ ಮೊದಲ ಚಿತ್ರ ಹೀರೋ ಅವರು. ಆನಂತರ ನಾನು ಅವರು ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದೇವೆ. ಆದರೆ, ಎಂದಿಗೂ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ. ಅವರ ವಿರುದ್ಧ ಯಾರು ಏನೇ ಆರೋಪ ಮಾಡಿದರೂ ನಾನು ಅದನ್ನು ನಂಬುವುದಿಲ್ಲ. ನಾನು ಅವರ ಬಗ್ಗೆ ಗ್ಯಾರೆಂಟಿ ಕೊಡುತ್ತೇನೆ ಎಂದಿದ್ದಾರೆ.
ಇನ್ನು ಕನ್ನಡದ ಹಿರಿಯ ನಟಿ ತಾರಾ ಸಹ ಅರ್ಜುನ್ ಬೆಂಬಲಕ್ಕೆ ನಿಂತಿದ್ದು, ಅರ್ಜುನ್ ಸರ್ಜಾ ಏನು ಎಂದು ನನಗೆ ಚೆನ್ನಾಗಿ ತಿಳಿದಿದೆ. ಸುಮಾರು ವರ್ಷಗಳಿಂದ ನಾನು ಅವರನ್ನು ಚೆನ್ನಾಗಿ ಬಲ್ಲೆ. ಅವರೊಂದಿಗೆ ಜತೆ ಪ್ರೇಮಾಗ್ನಿ ಸಿನಿಮಾದಲ್ಲಿ ನಟಿಸಿದ್ದು, ಅವರು ತುಂಬ ಒಳ್ಳೆಯ, ಸಭ್ಯ ಮನುಷ್ಯ. ಅವರ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ನಿಜಕ್ಕೂ ಒಪ್ಪಲು ಅಸಾಧ್ಯ ಎಂದಿದ್ದಾರೆ.
Discussion about this post