ಬೆಂಗಳೂರು: ಕಾಯಕ ಯೋಗಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿದ್ದು, ಕೋಟ್ಯಂತರ ಭಕ್ತ ಸಮೂಹ ದುಃಖದ ಮಡಿಲಿನಲ್ಲಿ ಮುಳುಗಿದೆ.
ಶ್ರೀಗಳ ಕರುಣಾರಸಧಾರೆಗೆ ಲಕ್ಷಾಂತರ ಮಂದಿ ಅನುಗ್ರಹಿತರಾಗಿದ್ದು, ಇವರಲ್ಲಿ ನಟ ಜಗ್ಗೇಶ್ ಅವರೂ ಸಹ ಒಬ್ಬರು.
ಹೌದು… ಶಿವಕುಮಾರ ಸ್ವಾಮಿಗಳ ದರ್ಶನಕ್ಕಾಗಿ ನಟ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ಅವರು ಒಮ್ಮೆ ಶ್ರೀಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಠದಲ್ಲಿ ಸೇವೆ ಮಾಡಿದ್ದ ಜಗ್ಗೇಶ್ ದಂಪತಿಗಳಿಗೆ ಪ್ರಸಾದ ರೂಪದಲ್ಲಿ ದೊರೆತಿದ್ದ ಶ್ರೀಗಳ ಪಾದುಕೆ.
ಈ ವಿಚಾರವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ಜಗ್ಗೇಶ್ ಅವರು, ಶ್ರೀಶಿವಕುಮಾರ ಸ್ವಾಮೀಜಿಯವರ ಪಾದುಕೆಯನ್ನು ಪಡೆದ ನಾವೇ ಧನ್ಯರು. ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ. ನಮ್ಮ ಆರ್ಶೀವಾದ ಪಡೆದ ನಾವು ಧನ್ಯರು ಎಂದಿದ್ದಾರೆ.
ಪ್ರಸಾದ ರೂಪದಲ್ಲಿ ದೊರೆತ ಶ್ರೀಗಳ ಪಾದುಕೆಯನ್ನು ಜಗ್ಗೇಶ್ ಅವರು ತಮ್ಮ ದೇವರ ಮನೆಯಲ್ಲಿಟ್ಟು, ಪ್ರತಿದಿನ ಪೂಜಿಸುತ್ತಾರೆ.
Discussion about this post